• 22 ನವೆಂಬರ್ 2024

ಏಷ್ಯನ್ ಗೇಮ್ಸ್:‌ ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ

 ಏಷ್ಯನ್ ಗೇಮ್ಸ್:‌ ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ
Digiqole Ad

ಏಷ್ಯನ್ ಗೇಮ್ಸ್:‌ ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ

ಚೀನಾದ ಹ್ಯಾಂಗ್‌ ಝೂನಲ್ಲಿ ನಡೆಯುತ್ತಿರುವ ಏಶ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ 41 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ತಂಡ ಕುದುರೆ ಸವಾರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವುದರ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ 3ನೇ ದಿನ ಕೂಡ ಭಾರತ ಸಾಧನೆ ಮಾಡಿದೆ. ಕುದುರೆ ಸವಾರಿಯಲ್ಲಿ ಭಾರತ ತಂಡವು ಬಂಗಾರ ಪದಕ ತನ್ನದಾಗಿಸಿಕೊಂಡಿದೆ. ಏಷ್ಯನ್ ಗೇಮ್ಸ್ ನಲ್ಲಿ ಭಾರತವು ಈವರೆಗೆ ಒಟ್ಟು 3 ಚಿನ್ನದ ಪದಕನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

ಭಾರತದ ಅನೀಶ್ ಅಗರ್‌ವಾಲಾ, ಹೃದಯ್ ಛೇಡಾ, ದಿವ್ಯಕೃತಿ ಸಿಂಗ್, ಸುದೀಪ್ತಿ ಹಜೇಲಾ ಕುದುರೆ ಸವಾರಿ ಸ್ಪರ್ಧೆಯಲ್ಲಿ 209.205 ಅಂಕಗಳನ್ನು ಗಳಿಸಿ ಬಂಗಾರದ ಪದಕ ಗೆದ್ದಿದ್ದಾರೆ.

ಕುದುರೆ ಸವಾರಿಯಲ್ಲಿ 41 ವರ್ಷಗಳ ನಂತರ ಭಾರತಕ್ಕೆ ಒಲಿದು ಬಂದ ಮೊದಲ ಪದಕ. ಈ ಹಿಂದೆ 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್ ವೇಳೆ ಭಾರತವು ಕಂಚಿನ ಪದಕ ಗೆದ್ದಿತ್ತು. ಇದೀಗ ನಾಲ್ಕು ದಶಕಗಳ ನಂತರ, ಭಾರತ ಪದಕ ಗೆದ್ದಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ