ಒಬ್ಬ ಕಲ್ಲು ಕಟ್ಟುವ ಮೇಸ್ತ್ರಿ ಮುಡಿಗೇರಿಸಿದ್ದು ಹಲವು ಪ್ರಶಸ್ತಿ, ಪುರಸ್ಕಾರಗಳು…ಇಲ್ಲಿದೆ ರವಿ ಅಣ್ಣನ ಸ್ಟೋರಿ
ಒಬ್ಬ ಕಲ್ಲು ಕಟ್ಟುವ ಮೇಸ್ತ್ರಿ ಮುಡಿಗೇರಿಸಿದ್ದು ಹಲವು ಪ್ರಶಸ್ತಿ, ಪುರಸ್ಕಾರಗಳು…ಇಲ್ಲಿದೆ ರವಿ ಅಣ್ಣನ ಸ್ಟೋರಿ
ಚಿಕ್ಕವನಿದ್ದಾಗಲೆ ಕಲೆಯನ್ನು ಕರಗತ ಮಾಡಿಕೊಂಡು ಚಿಕ್ಕ ಬಡ ಕುಟುಂಬದಿಂದ ಬಂದ ಈ ಕಲಾವಲ್ಲಭನ ಹೆಸರು ರವಿ ಪಾಂಬಾರ್ … ಇವತ್ತಿನ ನಮ್ಮ ಸೂಪರ್ ಹೀರೋ ಯಾರು ಅನ್ಕೊಂಡ್ರಾ ಅದು ಬೇರೆ ಯಾರೂ ಅಲ್ಲ ಅವರೇ ನಮ್ಮ ರವಿ ಅಣ್ಣ…..ಯಾವಾಗ ಬೇಕಾದ್ರೂ ಒಂದು ಕಾಲ್ ಮಾಡಿ ,ರವಿ ಅಣ್ಣ ನಮ್ಗೆ ಒಂದು ಹಾಡು ಬೇಕಿತ್ತು ಸಿಗಬಹುದಾ …ಅಂದ್ರೆ ಸಾಕು ನಮ್ಮ ಹೀರೋ ಒಲ್ಲೆ ಎನ್ನದೆ ಮಾಡಿ ಕೊಡ್ತಿದ್ದ…ಅಂದ ಹಾಗೆ ಇವರು ಸಾಮಾನ್ಯ ವ್ಯಕ್ತಿ ಅಲ್ಲ ಕಲೆಗೆ ಇನೊಂದು ಹೆಸರೇ ಅದು ರವಿ ಪಾಂಬಾರ್ …ಜೀವನದಲ್ಲಿ ಏನೋ ಸಾಧಿಸಬೇಕು ಎನ್ನುವ ಛಲ,ನನ್ನೊಂದಿಗೆ ಇನ್ನೊಬ್ಬರು ಬೆಳೆದು ಬರಬೇಕು ಎನ್ನುವ ಸ್ಪೂರ್ತಿ ದಾಯಕ ಮಾತುಗಳು, ಇಷ್ಟಕ್ಕೆ ಇವರ ವಿಷಯ ಮುಗಿತು ಅಂತ ಅನ್ಕೋಬೇಡಿ ಇನ್ನು ಇದೆ ಇವರ ವಿಷಯ ತಿಳಿದುಕೊಳ್ಳಕ್ಕೆ ಬನ್ನಿ ನೋಡೋಣ…..ರವಿ ಪಾಂಬಾರು ಮೂಲತ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರು ಎಂಬ ಪುಟ್ಟ ಹಳ್ಳಿಯಲ್ಲಿ ಬೆಳೆದು ಯಶಸ್ಸಿನ ಹಾದಿಯತ್ತ ಹೆಜ್ಜೆಯನ್ನು ಇಡುತ್ತಿರುವ ರವಿಯವರು ಚಿಕ್ಕ ವಯಸ್ಸಿನಿಂದಲೇ ಓದಿನಲ್ಲೂ, ಡ್ಯಾನ್ಸ್, ಕ್ರೀಡೆಯಲ್ಲೂ ಮುಂದಿರುತಿದ್ದರು.
ಅಷ್ಟೇ ಅಲ್ಲದೆ ಕ್ರೀಡೆ, ಹಾಗೂ ಹಾಡಿನಲ್ಲೂ ಪ್ರಥಮ ಸ್ಥಾನದಲ್ಲಿದ್ದರು ಹಲವಾರು ಪ್ರಶಸ್ತಿ ಗಳು ಇವರದಾಗಿತ್ತು, ಯೋಗದಲ್ಲಿ ಬೆಳ್ಳಿ ಪದಕ, ಕಬ್ಬಡ್ಡಿ ಅಂದ್ರೆ ಪಂಚಪ್ರಾಣ ಶಾಲೆಯಲ್ಲಿ ಕಬ್ಬಡ್ಡಿ ಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು.
1 ರಿಂದ 7 ನೇ ತರಗತಿ ಯನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಕ್ಕಡ ಎಂಬಲ್ಲಿ ಮುಗಿಸಿ, 8 ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆಯಲ್ಲಿ ಮಾಡಿದರು. ರವಿ ಅವರಿಗೆ ಮುಂದೆ ಓದಲು ಆಸೆ ಏನು ಇತ್ತು ಆದರೆ ಮನೆಯ ಆರ್ಥಿಕ ಪರಿಸ್ಥಿತಿಯಿಂದ ಜೊತೆಗೆ ಅಪ್ಪ ನಿಗೆ ನೇರವಾಗಲು ಕೂಲಿ ಕೆಲಸ ಮಾಡಲು ಪ್ರಾರಂಭಿಸಿದರು ಅಕ್ಕ – ತಂಗಿಯರ ಓದಿನ ಬಗ್ಗೆಯೂ ಹೆಚ್ಚಿನ ಜವಾಬ್ದಾರಿ ಇದ್ದ ಕಾರಣ ಕಲಿಕೆಯನ್ನು 8 ನೇ ತರಗತಿ ಯಲ್ಲಿ ನಿಲ್ಲಿಸ ಬೇಕಂಬ ಅನಿವಾರ್ಯ ಇವರಿಗೆ ಎದುರಾಯಿತು. ಆದರೇ ರವಿಯವರ ಕಲಾದೇವತೆ ಕೈ ಬಿಡಲಿಲ್ಲ ಇವರು ಊರ ಜನರನ್ನು ಸೇರಿಸಿಕೊಂಡು ಭಜನಾ ತಂಡವನ್ನು ರಚನೆ ಮಾಡಿ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಭಜನೆಯ ಮೂಲಕ ಸೇವೆ ಸಲ್ಲಿಸಿರುತ್ತಾರೆ, ಹಾಗೇ ಬೇರೆಬೇರೆ ಉತ್ಸವ, ವಾರ್ಷಿಕೋತ್ಸವಗಳಲ್ಲಿ, ಹಳೆ ವಿದ್ಯಾರ್ಥಿಗಳಿಂದ ತಮ್ಮದೇ ಶೈಲಿಯಲ್ಲಿ ಡ್ಯಾನ್ಸ್ ತರಬೇತಿಯನ್ನು ನೀಡುತಿದ್ದರು, ಹಲವಾರು ನಾಟಕಗಳಲ್ಲಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ, ಅಭಿಮಾನಿಗಳು ಇವರ ಡ್ಯಾನ್ಸ್ ಝಲಕ್ ನೋಡಿ ಜೂನಿಯರ್ ಪ್ರಭುದೇವ್ ಎಂದು ಕರೆದದ್ದು ಇದೆ.
ಆದರೂ ಕಷ್ಟ ಪಟ್ಟು ಹಾಡುಗಳನ್ನು ಕರಗತ ಮಾಡಿ, ಎಷ್ಟೇ ದೊಡ್ಡ ಹಾಡುಗಳನ್ನು ಬೇಕಾದರೂ ಅತಿ ಸಲೀಸಾಗಿ ಹಾಡುತ್ತ ಇದ್ದರು. ಈಗೆ ಹಾಡುತ್ತ ಇರುವಾಗ ಅವರ ಮನದಲ್ಲಿ ಒಂದು ಪ್ರಶ್ನೆ ಯೋಚನೆ ಕಾಡಲು ತೋಡಗಿತ್ತು ನಾವು ಬೇರೊಬ್ಬರೂ ಹಾಡಿದ ಹಾಡುಗಳನ್ನು ಹಾಡುವ ಬದಲು ನಾವೇ ಸ್ವತ: ಸಾಹಿತ್ಯ ಬರೆದು ಯಾಕೆ ಹಾಡಬಾರದು ಆಗ ಕಂಡಿದ್ದು ಅವರ ಗ್ರಾಮ ದೇವರಾದ ಷಣ್ಮುಖ ದೇವರ ದೇವಸ್ಥಾನ ಇಲ್ಲಿಯ ಇತಿಹಾಸ ಹಾಗೂ ಚರಿತ್ರೆಯನ್ನು ಒಳಗೊಂಡು ಒಂದು ಸೊಗಸಾದ ಕವನ ಬರೆದು ರೆಕಾರ್ಡಿಂಗ್ ಮೂಲಕ ಯುಟ್ಯೂಬ್ ಗೆ ಅಪ್ಲೋಡ್ ಮಾಡಿದರು ಹಾಗೂ ಅದ್ಭುತವಾಗಿ ಮೂಡಿ ಬಂತು.ಮೊದಲ ಪ್ರಯತ್ನವೇ ಅವರ ದೊಡ್ಡ ಮಟ್ಟಿನ ಯಶಸ್ಸಿಗೆ ಕಾರಣವಾಯಿತು. ಇವರ ಸಾಹಿತ್ಯ ರಚನೆಯಲ್ಲಿ ಮೂಡಿ ಬಂದ ಹಾಡುಗಳು ಯಾವುದೆಲ್ಲ ಎಂದರೆ ,ಷಣ್ಮುಖನ ಅಭಯ, ಮಾಯ ರೂಪದ ಅಜ್ಜ, ಅಂಬೇಡ್ಕರ್ ಜೀವನ ಚರಿತ್ರೆ, ಮೊಗಪ್ಪೆದ ಉಳ್ಳಾಯೇ, ಕಲ್ಕೂಡನ ಅಭಯ, ಕನಸುಗಳ ಪಿಸುಮಾತು, ಉಬ್ರಾ0ಗಳ ಕ್ಷೇತ್ರ ಮಹಿಮೆ, ನಮ್ಮ ತುಳುನಾಡ್, ಸಿರಿ ಬೊಲ್ಪು ಪಡ್ಡಯಿ ಬಾಕಿಲ್ ದ ಅಮ್ಮ, ಪಟ್ಟೆ ಸೀರೆದ ಅಮ್ಮ, ಮಹಿಮೆದ ಮಣ್ಣ್, ಹಾಗೂ ಗಾನ ಶಾರದೇ ಗಾಯನ ಸ್ಪರ್ಧೆ, ನನ್ನ ಹಾಡು ಜನರ ಮನ ಸೆಳೆದಾಗ ಗಾಯನ ಸ್ಪರ್ಧೆಯನ್ನು ನಡೆಸಿ ತೆರೆ ಮರೆಯಲ್ಲಿರೋ ಕಲಾವಿದರಿಗೆ ವೇದಿಕೆ ಒದಗಿಸಿ ಇಪ್ಪತ್ತು ಜನರಿಗೆ ತನ್ನ ವೇದಿಕೆಯಲ್ಲಿ ಬಿರುದುಗಳನ್ನು ನೀಡಿ ಸನ್ಮಾನಿಸಿ ಕಾರ್ಯಕ್ರಮ ನಡೆಸಿ 500ಕ್ಕೂ ಹೆಚ್ಚು ಜನರಿಗೆ ವೇದಿಕೆಯನ್ನು ಒದಗಿಸಿಕೊಟ್ಟ ಒಬ್ಬ ಉನ್ನತ ಕಲಾವಿದ.
ಹಾಗೂ ಆರ್ ಪಿ ಕ್ರಿಯೇಷನ್ ಎಂಬ 10 ಜನರ ತಂಡವನ್ನು ಕಟ್ಟಿಕೊಂಡು ಅದರ ನಾಯಕನಾಗಿ ಹಲವು ವರುಷಗಳಿಂದ ಹಲವಾರು ಊರಿನಲ್ಲಿ ಸಂಗೀತ ರಸ ಮಂಜರಿ ನೀಡುತ್ತಾ ಬಂದಿರುತ್ತಾರೆ ಹಾಗೂ ಇದೀಗ ತುಳುನಾಡಿನ ಆಚರಣೆ ವಿಚಾರ ಗಳನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ವೇಷ ಭೂಷಣಗಳ ಪ್ರದರ್ಶನಗಳ ತುಳುನಾಡ ವೈಭವ ಎನ್ನುವ ಕಾರ್ಯಕ್ರಮವನ್ನು ನೀಡುತ್ತಾ ಬಂದಿರುತ್ತಾರೆ.
ಇವರ ಕಲೆಗೆ ಸಂದ ಸನ್ಮಾನ ಗಳು :
2016ರಲ್ಲಿ ಶ್ರೀ ಕ್ಷೇತ್ರ ದೇವರ ಕಾನಾ ಉಳ್ಳಕ್ಕುಲು ಪರಿವಾರ ದೇವ್ಯಗಳ ಚಾವಡಿ ವತಿಯಿಂದ ಗೌರವ ಅರ್ಪಣೆ
2017ರಲ್ಲಿ sp ಕ್ರಿಯೇಷನ್ ವತಿಯಿಂದ ತುಳುನಾಡ ಪೆರ್ಮೆದ ಗಾಯಕೆ ಬಿರುದು,
2018ರಲ್ಲಿ, ಪೆರುವಾಜೆ ಜಲಾದುರ್ಗೆ ದೇವಸ್ಥಾನ ವತಿಯಿಂದ ಗೌರವ ಅರ್ಪಣೆ
2019ರಲ್ಲಿ ಚಂದನ ಸಾಹಿತ್ಯ ವೇದಿಕೆಯಿಂದ ಗೌರವ ಅರ್ಪಣೆ
2020 ರಲ್ಲಿ ದಸರಾ ಉತ್ಸವ ಪೆರ್ಲ0ಪಾಡಿ ವತಿಯಿಂದ ಸಾಧಕ ರತ್ನ ಗೌರವ ಅರ್ಪಣೆ
2021ರಲ್ಲಿ ಕೊಯಿಲ ಮಹಮ್ಮಾಯಿ ವತಿಯಿಂದ *ಗೌರವ ಅರ್ಪಣೆ
2022ರಲ್ಲಿ ಕೊರಗಜ್ಜ ಸಾನಿಧ್ಯ ಪಾಲ್ತಾಡು ವತಿಯಿಂದ ಗೌರವ ಅರ್ಪಣೆ ಕನಕ ಮಜಲು ಆತ್ಮರಾಮ ಭಜನಾ ಮಂದಿರದ ವತಿಯಿಂದ ಗೌರವ ಅರ್ಪಣೆ
2023ರಲ್ಲಿ ಚಿಗುರೆಲೇ ಸಾಹಿತ್ಯ ಬಳಗ ಪುತ್ತೂರು ಇವರಿಂದ ಸಾಧಕರಿಗೆ ಸನ್ಮಾನ ಗೌರವ ಅರ್ಪಣೆ
ವಾಸ್ಟರ್ ಪೈ ಸ್ಟಾರ್ ಸುಳ್ಯ ಇದರ ವತಿಯಿಂದ ಸಂಗೀತ ರತ್ನ ರಾಜ್ಯ ಪ್ರಶಸ್ತಿ ಪುರಸ್ಕಾರ
ಭಾವೈಕ್ಯ ಸಮ್ಮಿಲನ ಅಂಚನೆ ಕವಿಗೋಷ್ಠಿ.
ಜಪ್ಪು ಚರ್ಚ್ ಸಭಾಂಗಣ ಮಂಗಳೂರು ಇದರ ಆಶ್ರಯದಲ್ಲಿ ಭಾವೈಕ್ಯತಾ ಕಾವ್ಯ ಸಿರಿ ಪ್ರಶಸ್ತಿ,
ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡ ನಮ್ಮ ರವಿ ಅಣ್ಣ ಸುಂದರಿ ಮತ್ತು ರಮೇಶ ದಂಪತಿಗಳ ಸುಪುತ್ರರಾದ ಇವರು ಕೇವಲ ಬರಹಗಳು ಮಾತ್ರವಲ್ಲದೆ ರಸಮಂಜರಿ ಗಾಯನ,ಸಾಹಿತ್ಯ ಕವಿತೆ, ಭಜನೆ, ಡ್ಯಾನ್ಸ್, ಎಡಿಟಿಂಗ್, ನಿರೂಪಣೆ,ಚಿತ್ರ ಕಲೆ,ಅಭಿನಯ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡವರು.ಇವರ ಭವಿಷ್ಯ ಹರಿವ ಪ್ರವಾಹದಂತೆ ನಿರಂತರವಾಗಿರಲಿ ಎಂಬುದು ನಮ್ಮ ತಂಡದ ಆಶಯ….
ನಿಮ್ಮ ಬರಹಗಳಿಗೆ ಹಾಗೂ ಅನಿಸಿಕೆಗಳಿಗೆ ನಮ್ಮ ಅಂಕಣ ಉಚಿತವಾಗಿದೆ. ಬರಹಗಾರರು ಇದನ್ನು ಸದುಪಯೋಗ ಪಡಿಸಿಕೊಳ್ಳಿ…. ಮುಕ್ತವಾದ ಅವಕಾಶ ಇದೆ.
✨ನಮ್ಮ ರವಿ ಅಣ್ಣನ ಹಾಗೆ ಇರುವ ಇನ್ನೊಂದು ಸಾಧಕರೊಂದಿಗೆ ಮತ್ತೆ ಸಿಗುವ ಆಯ್ತಾ😊…..✨
– ಅನಾಮಿಕ