KSRTC ಗೆ ನೂತನ ಮಾದರಿಯ ನಾನ್ ಎಸಿ ಸ್ಲೀಪರ್ ಬಸ್ ಗಳ ಸೇರ್ಪಡೆ
KSRTC ಗೆ ನೂತನ ಮಾದರಿಯ ನಾನ್ ಎಸಿ ಸ್ಲೀಪರ್ ಬಸ್ ಗಳ ಸೇರ್ಪಡೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು. ದೂರದೂರುಗಳಿಗೆ ಕಡಿಮೆ ಖರ್ಚಿನಲ್ಲಿ ಜನರು ಹೋಗಲು ಹಾಗೂ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅತ್ಯಾಧುನಿಕ ನಾನ್ ಎಸಿ ಸ್ಲೀಪರ್ ಬಸ್ಗಳನ್ನು ಪರಿಚಯಿಸಿದೆ. ಹೊಸ ನಾನ್ ಎಸಿ ಸ್ಲೀಪರ್ ಬಸ್ಗಳಿಗೆ ‘ಪಲ್ಲಕ್ಕಿ’ ಎಂದು ಹೆಸರಿಡಲಾಗಿದೆ. ಅತ್ಯುತ್ತಮ ಬಣ್ಣ, ವಿನ್ಯಾಸ ಒಳಗೊಂಡ ಬಸ್ಗಳು ಎಸಿ ಬಸ್ಗಳಿಗೆ ಕಡಿಮೆ ಇಲ್ಲದಂತೆ ಸಿದ್ದಗೊಂಡಿವೆ.
ನಾಳೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಸ್ಗಳನ್ನು ಲೋಕಾರ್ಪಣೆ ಮಾಡಲಿದ್ದು ಇದರೊಟ್ಟಿಗೆ 100 ನೂತನ ಕರ್ನಾಟಕ ಸಾರಿಗೆ ಬಸ್ಸುಗಳ ಸಂಚಾರಕ್ಕೂ ಚಾಲನೆ ಸಿಗಲಿದೆ.