ಸತತ ನಾಲ್ಕನೇ ಬಾರಿಗೆ ರೇಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ
ಸತತ ನಾಲ್ಕನೇ ಬಾರಿಗೆ ರೇಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ
ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಈಗಿರುವ 6.50% ದರವನ್ನೇ ಮುಂದುವರಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂದು ನಡೆದ ವಿತ್ತೀಯ ನೀತಿ ಸಮಿತಿಯ ಸಭೆ ಬಳಿಕ ಆಬಿಐ ಗರ್ವನರ್ ಶಶಿಕಾಂತ್ ದೇಸಾಯಿ ಈ ನಿರ್ಧಾರವನ್ನು ಪ್ರಕಟಿಸಿದೆ. ಇದು ಸಾಲ ಪಡೆದವರಿಗೆ ಅನುಕೂಲವಾಗಲಿದ್ದು, ಬ್ಯಾಂಕ್ ಬಡ್ಡಿ ದರದಲ್ಲಿ ಯಾವುದೇ ಹೆಚ್ಚಳವಾಗುವ ಸಾಧ್ಯತೆ ಇಲ್ಲ. ಆರ್‌ಬಿಐ ಸತತ ನಾಲ್ಕನೇ ಬಾರಿಗೆ ರೆಪೊ ದರವನ್ನು (6.50%) ಮುಂದುವರಿಸಿದೆ. ಕಳೆದ ವರ್ಷ ಮಾರ್ಚ್‌ನಿಂದೀಚೆಗೆ RBI ರೆಪೊ ದರವನ್ನು ಒಟ್ಟು 250 ಬೆಸಿಎಸ್ ಪಾಯಿಂಟ್ ಹೆಚ್ಚಿಸಿತ್ತು.
ರೆಪೊ ದರವನ್ನು ಕಡಿಮೆ ಮಾಡುವ ಮೂಲಕ, ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ಕಾರು ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲಗಳು ಅಗ್ಗವಾಗುತ್ತವೆ. ಇದು ಜನರನ್ನು ಸಾಲಗಳನ್ನು ತೆಗೆದುಕೊಳ್ಳಲು ಮತ್ತು ಸೇವಿಸಲು ಪ್ರೋತ್ಸಾಹಿಸುತ್ತದೆ, ಇದು ಆರ್ಥಿಕತೆಯಲ್ಲಿ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಅಂತಿಮವಾಗಿ ಆರ್ಥಿಕ ಬೆಳವಣಿಗೆಯ ದರವನ್ನು ವೇಗಗೊಳಿಸುತ್ತದೆ.
2023-24ರ ಹಣಕಾಸು ವರ್ಷದ ನಾಲ್ಕನೇ ವಿತ್ತೀಯ ನೀತಿಯ ಅಡಿಯಲ್ಲಿ, ಗವರ್ನರ್ ಶಕ್ತಿಕಾಂತ ದಾಸ್ ಅವರು ರೆಪೊ ದರವನ್ನು ಹೆಚ್ಚಿಸದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗ ಆರ್‌ಬಿಐ ರೆಪೊ ದರ 6.50% ರಲ್ಲೇ ಉಳಿಸಲಿದೆ. ಫೆಬ್ರವರಿ 8, 2023 ರಂದು ಸರ್ಕಾರವು ಕೊನೆಯದಾಗಿ ರೆಪೋ ದರವನ್ನು ಹೆಚ್ಚಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು 5.4% ಮತ್ತು ಮುಂದಿನ ಹಣಕಾಸು ವರ್ಷದಲ್ಲಿ 5.2% ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದರು.