• 8 ಸೆಪ್ಟೆಂಬರ್ 2024

KSRTC ಪಲ್ಲಕ್ಕಿ ಬಸ್​ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

 KSRTC ಪಲ್ಲಕ್ಕಿ ಬಸ್​ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
Digiqole Ad

KSRTC ಪಲ್ಲಕ್ಕಿ ಬಸ್​ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಹೀಗಿವೆ ಬಸ್​​​ ವಿಶೇಷತೆಗಳು!

ಪಲ್ಲಕ್ಕಿ ಬಸ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗದಲ್ಲಿ ಅಧಿಕೃತವಾಗಿ ಚಾಲನೆ ನೀಡಿದ್ದು, ಕೆಎಸ್ಆರ್ ಟಿಸಿಯಲ್ಲಿ ಇದೇ ಮೊದಲ ಬಾರಿಗೆ ನಾನ್ ಎಸಿ ಬಸ್‌ಗೆ ಬ್ಯಾಂಡ್ ಹೆಸರನ್ನು ಇಟ್ಟು ಸೇವೆ ನೀಡಲಾಗುತ್ತಿದೆ. ಇಂದು ಒಟ್ಟು 148 ಹೊಸ ಬಸ್‌ಗಳಿಗೆ ಚಾಲನೆ ನೀಡಲಾಗಿದ್ದು, ಈ ಪೈಕಿ 44 ಎಸಿ ಸ್ಲಿಪರ್, ನಾಲ್ಕು ನಾನ್ ಎಸಿ ಸ್ಲಿಪರ್ ಬಸ್ ಗಳನ್ನು ಹೊರತುಪಡಿಸಿ ಉಳಿದ 100 ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಈ ಬಸ್ ಸೇವೆಯು ಇಂದಿನಿಂದಲೇ ಆರಂಭವಾಗಲಿದೆ.ಮೊದಲ ಹಂತದಲ್ಲಿ ಬೆಂಗಳೂರು-ಮೈಸೂರು, ಬೆಂಗಳೂರು-ಮಂಗಳೂರು, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ದಾವಣಗೆರೆ, ಬೆಂಗಳೂರು-ವಿಜಯಪುರ, ಬೆಂಗಳೂರು-ಹೊಸಪೇಟೆ ಮಾರ್ಗದಲ್ಲಿ ಈ ಬಸ್‌ಗಳ ಓಡಾಟಕ್ಕೆ ತಯಾರಿ ನಡೆದಿದೆ.40 ಬಸ್‌ಗಳ ಪೈಕಿ 30 ಬಸ್‌ಗಳು ರಾಜ್ಯದೊಳಗೆ ಸಂಚರಿಸಲಿವೆ. ಉಳಿದ 10 ಬಸ್‌ಗಳು ಬೆಂಗಳೂರಿನಿಂದ‌ ಹೊರರಾಜ್ಯಗಳಿಗೆ ಸಂಚರಿಸಲಿವೆ.

ಪಲ್ಲಕ್ಕಿ ಬಸ್ ವಿಶೇಷತೆಗಳು 

  • ಇದು ನಾನ್‌ ಎಸಿ ಸ್ಪೀಪರ್‌ ಬಸ್‌.​
  • ಈ ‘ಪಲ್ಲಕ್ಕಿ’ 28 ಆಸನಗಳ ಸಾಮರ್ಥ್ಯ ಹೊಂದಿದೆ.
  • ಬಸ್​ನಲ್ಲಿ ಅಡಿಯೋ ಸ್ವೀಕರ್​ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ನೀಡಲಾಗಿದೆ.
  • ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ ಕ್ಯಾಮರಾ ಅಳವಡಿಕೆ
  • ಬಿಎಸ್-6 ತಂತ್ರಜ್ಞಾನದ ಮಾದರಿಯ ಹೆಚ್.ಪಿ. ಇಂಜಿನ್
  • ಹೈಟೆಕ್ ವಿನ್ಯಾಸದ 30 ಸ್ಲೀಪರ್ ಬರ್ತ್ ಸೀಟ್​ಗಳು ಪ್ರತಿ ಸೀಟಿಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್​ಗಳ ಚಾರ್ಜಿಂಗ್ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ
  • ಸೀಟ್ ನಂಬರ್ ಮೇಲೆ ಎಲ್​ಇಡಿ ಅಳವಡಿಕೆ
  • ಓದಲು ಉತ್ತಮ ಬೆಳಕಿನ ಎಲ್​ಇಡಿ ಲೈಟ್ ಅಳವಡಿಕೆ ಮಾಡಲಾಗಿದೆ 
  • ಡಿಜಿಟಲ್ ಗಡಿಯಾರ, ಹಾಗೆ ಎಲ್​ಇಡಿ ಫ್ಲೋರ್
  • ಪ್ರತಿ ಪ್ರಯಾಣಿಕರಿಗೆ ಚಪ್ಪಳಿ‌ ಇಡಲು ಸ್ಥಳಾವಕಾಶದ ವ್ಯವಸ್ಥೆಯನ್ನು ಮಾಡಲಾಗಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ