• 8 ಸೆಪ್ಟೆಂಬರ್ 2024

ನಿತಿನ್ ಗಡ್ಕರಿ ಜೀವನಾಧರಿತ ಸಿನಿಮಾದ ಪೋಸ್ಟರ್ ಬಿಡುಗಡೆ

 ನಿತಿನ್ ಗಡ್ಕರಿ ಜೀವನಾಧರಿತ ಸಿನಿಮಾದ ಪೋಸ್ಟರ್ ಬಿಡುಗಡೆ
Digiqole Ad

ನಿತಿನ್ ಗಡ್ಕರಿ ಜೀವನಾಧರಿತ ಸಿನಿಮಾದ ಪೋಸ್ಟರ್ ಬಿಡುಗಡೆ 

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೀವನಾಧಾರಿತ ಮರಾಠಿ ಬಯೋಪಿಕ್ ಚಿತ್ರದ ಫಸ್ಟ್ ಲುಕ್ ಹೊರಬಿದಿದ್ದು, ಗಡ್ಕರಿ ಪಾತ್ರದಲ್ಲಿ ನಟ ರಾಹುಲ್ ಚೋಪ್ಲಾ ನಟಿಸಿದ್ದಾರೆ. ಮಹಾರಾಷ್ಟ್ರದ ವಿದರ್ಭ ಭಾಗದ ಮೊದಲ ರಾಜಕೀಯ ನಾಯಕರ ಜೀವನದಾರಿತ ಚಿತ್ರ ಇದು ಆಗಿದ್ದು, ಜನಸಂಘದ ಆರಂಭದ ಕಾಲದಿಂದ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ ರೀತಿ ಹಾಗೂ ಹಲವು ವಿಷಯಗಳನ್ನು ಚಿತ್ರದ ಮೂಲಕ ಕಟ್ಟಿಕೊಡುವ ಕೆಲಸ ಈ ಚಿತ್ರದಲ್ಲಿ ಮಾಡಲಾಗಿದೆ. ಚಿತ್ರವನ್ನು ಅನುರಾಗದ ಭೂಸಾರಿ ನಿರ್ದೇಶನ ಮಾಡಿದ್ದು ಅಕ್ಷಯ್ ದೇಶ್ ಮುಖ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.ಅ. 27 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಿತಿನ್ ಗಡ್ಕರಿ ತಮ್ಮ ಜೀವನ ಆಧಾರಿತ ಚಿತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಶಿವಸೇನೆಯ ಸಂಸ್ಥಾಪಕ ಬಾಳಸಾಹೇಬ್ ಠಾಕ್ರೆ ಸೇರಿದಂತೆ ಹಲವು ಪಾತ್ರಗಳು ಬರಲಿದೆ ಎಂದಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ