ವನ್ಯಜೀವಿ ಕಾಯ್ದೆ: ನವಿಲು ಗರಿಯನ್ನೂ ಇಟ್ಟುಕೊಳ್ಳುವಂತಿಲ್ಲ
ವನ್ಯಜೀವಿ ಕಾಯ್ದೆ: ನವಿಲು ಗರಿಯನ್ನೂ ಇಟ್ಟುಕೊಳ್ಳುವಂತಿಲ್ಲ
ವರ್ತೂರು ಸಂತೋಷ್ ಪ್ರಕರಣದ ಬಳಿಕ ಹುಲಿ ಉಗುರು ಸೇರಿ ವನ್ಯಜೀವಿಗಳ ಅಂಗಾಂಗ ಹೊಂದುವುದು ಅಪರಾಧ ಎಂಬುದು ಅನೇಕ ಜನರಿಗೆ ಮನದಟ್ಟಾಗಿದೆ. 1972ರ ಕಾಯ್ದೆ ಬಂದ ಮೇಲೆ ಈಗಾಗಲೇ ವನ್ಯಜೀವಿ ಟ್ರೋಫಿ ಹೊಂದಿದ್ದರೆ ಅವುಗಳನ್ನು ಅರಣ್ಯ ಇಲಾಖೆಯಲ್ಲಿ ರಿಜಿಸ್ಟ್ರಾರ್ ಮಾಡಿಸಬೇಕು. ವಿವಿಗಳಲ್ಲಿ, ವನ್ಯಜೀವಿ ಶಿಕ್ಷಣದಲ್ಲಿ ಪ್ರಾಣಿಗಳ ಬಗ್ಗೆ ಅಧ್ಯಯನ ನಡೆಸಲು ಚರ್ಮ, ಉಗುರು ಇತ್ಯಾದಿ ಹೊಂದಿದ್ದರೆ ಅದನ್ನು ಮೊದಲೇ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಕಾನೂನು ಪ್ರಕಾರ ನೋಂದಾಯಿಸಲಾಗಿರುತ್ತದೆ. ನವಿಲು ಜನರ ಮನೆಯ ಆವರಣಕ್ಕೆ ಸ್ವ ಇಚ್ಛೆಯಿಂದ ಬಂದರೆ ಅಡ್ಡಿಯಿಲ್ಲ. ಆದರೆ ಅದನ್ನು ಜನ ಸಾಕುವಂತಿಲ್ಲ. ವನ್ಯಜೀವಿಗಳ ಅಂಗಾಂಗ ಸಂಗ್ರಹಿಸಿದ್ದು ಸಾಬೀತಾದರೆ ಅಂಥವರಿಗೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 10 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ.
ವನ್ಯಜೀವಿ ಕಾಯ್ದೆಗಳು ಬಲಿಷ್ಠವಾದಂತೆಲ್ಲ ವನ್ಯಜೀವಿಗಳ ಅಂಗಾಂಗಗಳಿಂದ ತಯಾರಿಸಿದ ವಸ್ತುಗಳ ಪ್ರದರ್ಶನ, ತಯಾರಿಕೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ..