• 8 ಸೆಪ್ಟೆಂಬರ್ 2024

ತುಳುವಿಗೆ ಅಧಿಕೃತ ಸ್ಥಾನಮಾನಕ್ಕಾಗಿ ಟ್ವಿಟ್ ಅಭಿಯಾನ

 ತುಳುವಿಗೆ ಅಧಿಕೃತ ಸ್ಥಾನಮಾನಕ್ಕಾಗಿ ಟ್ವಿಟ್ ಅಭಿಯಾನ
Digiqole Ad

ತುಳುವಿಗೆ ಅಧಿಕೃತ ಸ್ಥಾನಮಾನಕ್ಕಾಗಿ ಟ್ವಿಟ್ ಅಭಿಯಾನ

ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕು ಎಂದು ಆಗ್ರಹಿಸಿದ ತುಳು ಕರ್ನಾಟಕ ರಾಜ್ಯೋತ್ಸವವನ್ನು ಕೆಲವು ಸಂಘಟನೆಗಳು ಕರಾಳ ದಿನವನ್ನಾಗಿ ಆಚರಿಸಿದೆ. ತುಳು ಭಾಷೆಗೆ ಈಗ ಟ್ವಿಟ್ ಅಭಿಯಾನ ಹಮ್ಮಿಕೊಂಡಿದ್ದು ನಿನ್ನೆ ಬೆಳಗ್ಗಿನಿಂದ ರಾತ್ರಿಯವರೆಗೆ ಸಾವಿರಾರು ಮಂದಿ ಟ್ವಿಟ್ ಮಾಡುವ ಮೂಲಕ ತುಳು ಭಾಷೆಗೆ ಸೂಕ್ತ ಸ್ಥಾನ ಮಾನ ನೀಡುವಂತೆ ಬೆಂಬಲ ಸೂಚಿಸಿದ್ದಾರೆ. ಅನೇಕರು ಟ್ವಿಟ್ ಮೂಲಕ ಪ್ರಧಾನಿ, ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳನ್ನು ಟ್ವಿಟ್ ಮಾಡುವ ಮೂಲಕ ತುಳು ಭಾಷೆ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕು, ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಹಲವು ವರ್ಷಗಳಿಂದ ಅಭಿಯಾನ ಸೇರಿದಂತೆ ಹಲವು ಸಂಘಟನೆಗಳು ಮನವಿ ನೀಡುತ್ತಾ ಬಂದಿದೆ. ಆದರೆ ಇನ್ನೂ ತುಳುನಾಡಿಗರ ಈ ಕನಸು ಈಡೇರಿಲ್ಲ ಎಂದು ಇದೇ ಟ್ವಿಟ್ ಮೂಲಕ ತುಳು ಪ್ರೇಮಿಗಳು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ