ಮಹಾದೇವ ಬೆಟ್ಟಿಂಗ್ ಆ್ಯಪ್ ಸೇರಿ ಇತರೇ 21 ಆ್ಯಪ್ ನಿಷೇಧ: ಕೇಂದ್ರ ಸರ್ಕಾರದ ಮಹತ್ವದ ಆದೇಶ
ಮಹಾದೇವ ಬೆಟ್ಟಿಂಗ್ ಆ್ಯಪ್ ಸೇರಿ ಇತರೇ 21 ಆ್ಯಪ್ ನಿಷೇಧ: ಕೇಂದ್ರ ಸರ್ಕಾರದ ಮಹತ್ವದ ಆದೇಶu
ಮಹಾದೇವ ಬೆಟ್ಟಿಂಗ್ ಆ್ಯಪ್ ಸೇರಿ 21 ಬೆಟ್ಟಿಂಗ್ ಆಪ್‌ಗಳು, ವೆಬ್‌ಸೈಟ್‌ಗಳನ್ನು ಕೇಂದ್ರದಿಂದ ನಿಷೇಧಿಸಲಾಗಿದೆ . ಅಕ್ರಮ ಬೆಟ್ಟಿಂಗ್ ಆಪ್ ಸಿಂಡಿಕೇಟ್ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಗಳು ಮತ್ತು ಛತ್ತೀಸ್‌ಗಢದ ಮಹದೇವ್ ಬುಕ್‌ನ ಮೇಲಿನ ದಾಳಿಗಳು, ಅಪ್ಲಿಕೇಶನ್‌ನ ಕಾನೂನುಬಾಹಿರ ಕಾರ್ಯಾಚರಣೆಗಳನ್ನು ಬಹಿರಂಗಪಡಿಸಿದ ನಂತರ ಈ ಕ್ರಮವನ್ನು ಅನುಸರಿಸಲಾಗಿದೆ ಎಂದು ಐಟಿ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ. ಇಂತಹ ಅನಧಿಕೃತ ಆಪ್‌ಗಳ ನಿಷೇಧಕ್ಕೆ ಶಿಫಾರಸು ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ಛತ್ತೀಸಗಡ ರಾಜ್ಯ ಸರ್ಕಾರದಿಂದ ಆಪ್ ನಿಷೇಧದ ಯಾವುದೇ ಬೇಡಿಕೆ ಬಂದಿರಲಿಲ್ಲ. ಒಂದೂವರೆ ವರ್ಷದಿಂದಲೂ ಅನಧಿಕೃತ ಆಪ್‌ಗಳ ಕುರಿತಾಗಿ ವಿಚಾರಣೆಗಳು ನಡೆಯುತ್ತಲೇ ಇವೆ. ಹೀಗಿದ್ದರೂ ಛತ್ತೀಸಗಡ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಹೋಗಲಿಲ್ಲ. ಜಾರಿ ನಿರ್ದೇಶನಾಲಯದಿಂದ ಶಿಫಾರಸ್ಸು ಬಂದ ಕಾರಣಕ್ಕೆ ಕ್ರಮ ವಹಿಸಿದ್ದೇವೆ ಎಂದು ರಾಜೀವ್ ಚಂದ್ರ ಶೇಖರ್ ಸ್ಪಷ್ಟಪಡಿಸಿದರು. ಕಾರ್ಡ್ ಆಟಗಳು, ಕ್ರಿಕೆಟ್, ಬ್ಯಾಡ್ಮಿಂಟನ್, ಟೆನಿಸ್, ಫುಟ್‌ಬಾಲ್ ಮತ್ತು ಇತರ ಲೈವ್ ಗೇಮ್‌ಗಳಲ್ಲಿ ಅಕ್ರಮ ಬೆಟ್ಟಿಂಗ್ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಕೇಂದ್ರವು ನಿರ್ಬಂಧಿಸಿದೆ. ಮಹದೇವ್ ಆಪ್ ನ ಮುಖ್ಯಸ್ಥರನ್ನು ಈಗಾಗಲೇ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.