ಹೈಕೋರ್ಟ್ ನಲ್ಲಿ ಇಂದು ಮುರುಘಾ ಶ್ರೀ ಭವಿಷ್ಯ?
ಹೈಕೋರ್ಟ್ ನಲ್ಲಿ ಇಂದು ಮುರುಘಾಶ್ರೀ ಭವಿಷ್ಯ?
ಲ್ಯೆಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧನ ಮಾಡಲಾಗಿತ್ತು. 2022 ಸೆಪ್ಟೆಂಬರ್ 1ರಿಂದ ಜೈಲಿನಲ್ಲಿ ಇರುವ ಶ್ರೀಗಳಿಗೆ ಜೈಲಾ? ಬೇಲಾ? ಎಂಬುವುದು ಇಂದು ಕರ್ನಾಟಕ ಹೈಕೋರ್ಟ್ ನಲ್ಲಿ ನಿರ್ಧಾರವಾಗಲಿದೆ.ಈ ಹಿಂದೆ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇವರ ಜಾಮೀನು ಅರ್ಜಿಯನ್ನುತಿರಸ್ಕರಿಸಿದ್ದು, ಶ್ರೀ ಗಳ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿ ಮುಂದೆ ಬೇಲ್ ಸಿಗುತ್ತದೋ ಇಲ್ವೋ ಎಂಬುದನ್ನು ಕಾದು ನೋಡಬೇಕಾಗಿದೆ.ಈ ಹಿಂದೆ ಚಿತ್ರದುರ್ಗದ ಮಠದಲ್ಲಿರುವ ವಿದ್ಯಾರ್ಥಿನಿಯರು ತಮ್ಮ ಜೊತೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ,ಆಪಾದನೆ ಮಾಡಿದ್ದು, ಈ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆಯ ನೆರವನ್ನು ಪಡೆದಿದ್ದರು. ಹೀಗೆ ಬಾಲಕಿಯರ ಹೇಳಿಕೆಗೆ ಅನುಗುಣವಾಗಿ ಮಠದ ಮುರುಘಾಶ್ರೀ ಯವರನ್ನು ಬಂಧಿಸಲಾಗಿತ್ತು.