• 8 ಸೆಪ್ಟೆಂಬರ್ 2024

ಕೆ ಆರ್ ಮಾರುಕಟ್ಟೆಯಲ್ಲಿ ಹೂ ಹಣ್ಣುಗಳು ದುಬಾರಿ!

 ಕೆ ಆರ್ ಮಾರುಕಟ್ಟೆಯಲ್ಲಿ ಹೂ ಹಣ್ಣುಗಳು ದುಬಾರಿ!
Digiqole Ad

ಕೆ ಆರ್ ಮಾರುಕಟ್ಟೆಯಲ್ಲಿ ಹೂ ಹಣ್ಣುಗಳು ದುಬಾರಿ!

ಬೆಂಗಳೂರು : ಜನರು ಬೆಳಕಿನ ಹಬ್ಬದ ಸಂಭ್ರಮದಲ್ಲಿದ್ದು ಹೂ ಹಣ್ಣುಗಳ ಖರೀದಿ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಇಂದು ನರಕ ಚತುರ್ದಶಿ ಹಾಗೂ ಧನಲಕ್ಷ್ಮೀ ಪೂಜೆ ಇರುವ ಹಿನ್ನೆಲೆ ಕೆ ಆರ್ ಮಾರುಕಟ್ಟೆಯಲ್ಲಿ ಜನ ಸಾಗರವೇ ಕಂಡು ಬರುತ್ತಿದೆ. ಹೀಗೆ ಹಬ್ಬದ ಸಲುವಾಗಿ ತರಕಾರಿ ಹೂ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಬೆಲೆಯೂ ಬರೋಬ್ಬರಿಯಾಗಿ ಏರಿಕೆ ಆಗಿದೆ. ಜನರು ಹೆಚ್ಚು ಹೆಚ್ಚು ಖರೀದಿ ಮಾಡುವ ಹಿನ್ನೆಲೆ ಹೂ ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಮಾರು ಹೂವಿನ ಬೆಲೆ 50ರೂ. ಏರಿಕೆ ಆಗಿದೆ. ಇನ್ನು ಮಾರುಕಟ್ಟೆಗೆ ಜನರು ಕಿಕ್ಕಿರಿದು ಖರೀದಿ ಮಾಡಲು ಆಗಮಿಸುತ್ತಿದ್ದು ಅನಧಿಕೃತವಾಗಿ ಗ್ರಾಹಕರು ಫ್ಲೈ ಓವರ್ ನ ಮೇಲೆ ವಾಹನ ಪಾರ್ಕಿಂಗ್ ಮಾಡಿದ್ದಾರೆ. ಇದರಿಂದ ಕಿರಿದಾದ ಸೇತುವೆ ಮೇಲೆ ವಾಹನ ಸವಾರರು ವಾಹನ ಚಲಾಯಿಸಲೂ ಪರದಾಡುತ್ತಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ