ಸಂಜೀವ ಮಠಂದೂರುಗೆ ವಿಷಜಂತು ಕಡಿತ: ಅಪಾಯದಿಂದ ಪಾರು
ಸಂಜೀವ ಮಠಂದೂರುಗೆ ವಿಷಜಂತು ಕಡಿತ: ಅಪಾಯದಿಂದ ಪಾರು
ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಸಂಜೆ ವೇಳೆ ಮನೆ ಸಮೀಪ ವಾಕಿಂಗ್ ಮಾಡುವಾಗ ವಿಷಜಂತುವೊಂದು ಕಚ್ಚಿದ್ದು ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಆರೋಗ್ಯದ ಬಗ್ಗೆ ನಿಗಾ ವಹಿಸುವ ದೃಷ್ಟಿಯಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.