• 22 ನವೆಂಬರ್ 2024

ಕುಕ್ಕೆಯಲ್ಲಿ ಡಿ.12ರಿಂದ ಚಂಪಾ ಷಷ್ಠಿ ಮಹೋತ್ಸವ

 ಕುಕ್ಕೆಯಲ್ಲಿ ಡಿ.12ರಿಂದ ಚಂಪಾ ಷಷ್ಠಿ ಮಹೋತ್ಸವ
Digiqole Ad

ಕುಕ್ಕೆಯಲ್ಲಿ ಡಿ.12ರಿಂದ ಚಂಪಾ ಷಷ್ಠಿ ಮಹೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಡಿ. 10ರಿಂದ ಡಿ. 24ರವರೆಗೆ ಚಂಪಾ ಷಷ್ಠಿಮಹೋತ್ಸವ ನಡೆಯಲಿದ್ದು, ಶೋಭಕೃತ್ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿಯಿಂದ ಮಾರ್ಗಶಿರ ಶುದ್ಧ ದ್ವಾದಶಿವರೆಗೆ ವಾರ್ಷಿಕ ಜಾತ್ರಾ ಉತ್ಸವಾದಿಗಳು ನಡೆಯಲಿದೆ. ಡಿಸೆಂಬರ್‌ 9ರಂದು ಮೂಲಮೃತ್ತಿಕಾ ಪ್ರಸಾದ ವಿತರಣೆ ಮತ್ತು 2024ರ ಜನವರಿ 16ರಂದು ಕಿರುಷಷ್ಠಿ ಮಹೋತ್ಸವ ಜರುಗಲಿದೆ. ಡಿಸೆಂಬರ್‌ 10ರಿಂದ 12ರವರೆಗೆ ಭಕ್ತರು ಸಲ್ಲಿಸುವ ಹಸಿರು ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

10-12-2023 ಆದಿತ್ಯವಾರ: ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ

11-12-2023 ಸೋಮವಾರ: ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ

12-12-2023: ಮಂಗಳವಾರ: ಲಕ್ಷ ದೀಪೋತ್ಸವ

13-12-2023: ಶೇಷವಾಹನೋತ್ಸವ

14-12-2023: ಅಶ್ವವಾಹನೋತ್ಸವ

15-12-2023: ಮಯೂರ ವಾಹನೋತ್ಸವ

16-12-2023: ರಾತ್ರಿ ಹೂವಿನ ತೇರಿನ ಉತ್ಸವ

17-12-2023: ಪಂಚಮಿ ರಥೋತ್ಸವ, ತೈಲಾಭ್ಯಂಜನ

18-12-2023: ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ

19-12-2023: ಶ್ರೀ ದೇವರ ಅವಕೃತೋತ್ಸವ, ನೌಕಾವಿಹಾರ

24-12-2023: ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ