• 8 ಸೆಪ್ಟೆಂಬರ್ 2024

ಬೆಂಗಳೂರಿನಲ್ಲಿ ಕಂಬಳಕ್ಕೆ ಕ್ಷಣಗಣನೆ :

 ಬೆಂಗಳೂರಿನಲ್ಲಿ ಕಂಬಳಕ್ಕೆ ಕ್ಷಣಗಣನೆ :
Digiqole Ad

ಬೆಂಗಳೂರಿನಲ್ಲಿ ಕಂಬಳಕ್ಕೆ ಕ್ಷಣಗಣನೆ :

ಕರಾವಳಿಯ ಜನಪದ ಕ್ರೀಡೆ ಆಗಿರುವ ಕಂಬಳ ಹಿಂದಿನ ಕಾಲದಿಂದಲೂ ಹಿರಿಯರು ಆಚರಿಕೊಂಡು ಬರುತ್ತಿದ್ದಾರೆ. ಇದೀಗ ನ.25 ಮತ್ತು 26ಕ್ಕೆ ಮೈದಾನದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ನಡೆಸುವ ಸಿದ್ಧತೆಯಲ್ಲಿದೆ. ಬಹಳ ನಿರೀಕ್ಷೆ ಇರುವ ಈ ಕಾರ್ಯಕ್ರಮಕ್ಕೆ ಇನ್ನು ಕೇವಲ 2 ದಿನವಷ್ಟೇ ಬಾಕಿಯಿದೆ.

ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷರು ಪ್ರಕಾಶ್ ಶೆಟ್ಟಿ ಕಂಬಳ ತಯಾರಿ ಬಗ್ಗೆ ಮಾಹಿತಿ ನೀಡಿದ್ದಾರೆ. ಕಂಬಳ ದ ಟ್ರ್ಯಾಕ್ ಗೆ ರಾಜಮಹಾರಾಜ ಕೆರೆ ಎಂದು ಹೆರಸಿಟ್ಟಿದ್ದು, ಸಭಾಕಾರ್ಯಕ್ರಮಕ್ಕೆ ಪುನೀತ್ರಾಜಕುಮಾರ್, ಹಾಗೆಯೇ ಸಾಂಸ್ಕೃತಿಕಾ ವೇದಿಕೆಗೆ ಚಾಮರಾಜ ಒಡೆಯರ್ ಎಂಬ ಹೆಸರನ್ನು ಇಟ್ಟಿದ್ದಾರೆಂದು ಮಾಹಿತಿ ದೊರಕಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಬಳ ತುಳುನಾಡಿನ ಪ್ರಸಿದ್ದ ಜನಪದ ಕ್ರೀಡೆ ಆಗಿದ್ದು ಇದನ್ನು ನಮ್ಮ ಹಿರಿಯರು ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರೆಗೆ ನಮ್ಮ ಊರಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದ ಈ ಕ್ರೀಡೆ ಇಂದಿಗೆ ಬೆಂಗಳೂರಿನಲ್ಲೂ ನಡೆಸುವ ಕನಸು ನನಸಾಗಲಿದೆ. ಕಂಬಳ ಪಕ್ಷತೀತಾ. ಇದನ್ನು ಯಾವ ಪಕ್ಷದವರೂ ನಡೆಸುತ್ತಿಲ್ಲ. ಕಂಬಳ ಸಮಿತಿಯೇ ಇದನ್ನು ವಹಿಸಿದ್ದು ಸುಮಾರು ಲಕ್ಷ ದಾಟಿ ವೀಕ್ಷಕರ ಆಗಮನ ನಿರೀಕ್ಷೆಯಲ್ಲಿದ್ದೇವೆ. ಸುಮಾರು 128 ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಿದ್ದು, ಗುರುಕಿರಣ್ ಹಾಗೂ ಅರ್ಜುನ್ ಜನ್ಯ ರವರ ಕಾರ್ಯಕ್ರಮವಿರಲಿದೆ. ಹುಲಿವೇಶವೂ ಇರಲಿದೆ ಎಂಬ ಮಾಹಿತಿಗಳನ್ನು ಸುದ್ದಿಗೋಷ್ಟಿಯಲ್ಲಿ ಹಂಚಿಕೊಂಡಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ