• 8 ಸೆಪ್ಟೆಂಬರ್ 2024

ಚಿಕ್ಕಮಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾಡಾನೆ ಸಾವು

 ಚಿಕ್ಕಮಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾಡಾನೆ ಸಾವು
Digiqole Ad

ಚಿಕ್ಕಮಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾಡಾನೆ ಸಾವು

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡಾನೆ ಮೃತಪಟ್ಟಿರುವ ಘಟನೆ ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ. ಭೈರಾಪುರ ಸಮೀಪದ ಮೇಕನಗದ್ದೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ನಿನ್ನೆ ಮಧ್ಯರಾತ್ರಿ ಕಾಡಾನೆ ಸೆರೆಯ ವೇಳೆ ಕಾಡಾನೆಗೆ ಅರಿವಳಿಕೆ ನೀಡಿದ್ದಾರೆ. ಈ ಅರಿವಳಿಕೆ ಮಂಪರಿನಲ್ಲಿ ಆನೆ ಗುಡ್ಡದಿಂದ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಮೃತಪಟ್ಟಿರುವ ಕಾಡಾನೆ ಕೆಲ ದಿನಗಳ ಹಿಂದೆ ನಡೆದಿದ್ದ ಕಾರ್ಯಾಚರಣೆಯಲ್ಲಿ ETF ಸಿಬ್ಬಂದಿ ಕಾರ್ತಿಕ್ ಮೇಲೆ ದಾಳಿ ಮಾಡಿದ್ದು, ಕಾಡಾನೆ ದಾಳಿಗೆ ಕಾರ್ತಿಕ್ ಮೃತಪಟ್ಟಿದ್ದರು. ಹೀಗಾಗಿ ಕಾಡಾನೆ ಸೆರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ನಿನ್ನೆ ರಾತ್ರಿ ನಡೆದ ಕಾರ್ಯಚರಣೆ ವೇಲೆ ಈ ಅವಘಡ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ