ಮಂಗಳೂರಿನಲ್ಲಿ ಮೀನಿಗೆ ಬರ?ಬೆಲೆಯಲ್ಲಿ ಏರಿಕೆ.!
ಮಂಗಳೂರಿನಲ್ಲಿ ಮೀನಿಗೆ ಬರ?ಬೆಲೆಯಲ್ಲಿ ಏರಿಕೆ.!
ಇದೀಗ ಮಂಗಳೂರಿನಲ್ಲಿ ಮೀನಿನ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಮೀನುಗಾರರು ಹಾಗೂ ಮೀನು ಮಾರಾಟ ಮಾಡುವವರಿಗೂ ಸಂಕಷ್ಟ ಎದುರು ಬಂದಿದೆ. ಮೀನು ಸ್ವತೇಚ್ಛವಾಗಿ ಸಿಗದೇ ಇರುವುದರಿಂದ ಮೀನಿನ ದರವೂ ಇತ್ತೀಚಿಗೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಬಂಗುಡೆ, ಮತ್ತಿ, ಅಂಜಲ್, ಪಾಂಪ್ಲೆಟ್ ಮೀನುಗಳ ದರವು ದುಪ್ಪಟ್ಟಾಗಿದೆ. ಕಳೆದ ಕೆಲವು ವರ್ಷಗಳಿಂದ ಇದೇ ಮೊದಲ ಬಾರಿಗೆ ದರ ಏರಿಕೆ ಕಂಡುಬಂದಿದೆ.
ಬಂಗುಡೆ ಮೀನು ಕೆ ಜಿ ಗೆ 250ರೂ, ಅಂಜಲ್ ಮೀನಿನ ಬೆಲೆ ಕೆ ಜಿ ಗೆ ಸುಮಾರು 800ರೂ.ಇಂದ 1000ವರೆಗೆ ಏರಿಕೆ ಆಗಿದೆ. ಇನ್ನು ಪಾಂಪ್ಲೆಟ್ ಮೀನಿನ ದರ 1400ರೂ ದಾಟಿದೆ. ಹಾಗೂ ಕೊಡ್ಡಾಯಿ, ಕಲ್ಲೂರು ಮೀನಿಗೆ 400ರೂ. ಯಷ್ಟು ಏರಿಕೆ ಕಂಡು ಬಂದಿದೆ.
ಕಡಲಿನಲ್ಲಿ ಮೀನು ಸಿಗದೇ ಇರುವುದರಿಂದ ಮೀನುಗಾರರು ಖಾಲಿ ಬೋಟ್ ನೊಂದಿಗೆ ವಾಪಾಸಾಗಿದ್ದು, ಮೀನು ಮಾರುವ ಅದೆಷ್ಟೋ ಜನ ಮನೆಯಲ್ಲೇ ಕೂರುವಂತಾಗಿದೆ. ಇದರಿಂದ ಮೀನು ಪ್ರಿಯರಿಗೂ ಮಾರ್ಕೆಟ್ ಲ್ಲಿ ಫ್ರೆಶ್ ಮೀನು ಸಿಗದೇ ಪರದಾಡುವಂತಾಗಿದೆ.