• 8 ಸೆಪ್ಟೆಂಬರ್ 2024

19ರ ಹರೆಯದಲ್ಲೇ ತನ್ನನ್ನು ದೇಶಕ್ಕೆ ಅರ್ಪಿಸಿಕೊಂಡ ಮಹಾನ್ ದೇಶಭಕ್ತ ಖುದಿರಾಮ್ ಬೋಸ್ ಅವರ ಬಗ್ಗೆ ಒಂದಿಷ್ಟು….

 19ರ ಹರೆಯದಲ್ಲೇ ತನ್ನನ್ನು ದೇಶಕ್ಕೆ ಅರ್ಪಿಸಿಕೊಂಡ ಮಹಾನ್ ದೇಶಭಕ್ತ ಖುದಿರಾಮ್ ಬೋಸ್ ಅವರ ಬಗ್ಗೆ ಒಂದಿಷ್ಟು….
Digiqole Ad

19ರ ಹರೆಯದಲ್ಲೇ ತನ್ನನ್ನು ದೇಶಕ್ಕೆ ಅರ್ಪಿಸಿಕೊಂಡ ಮಹಾನ್ ದೇಶಭಕ್ತ ಖುದಿರಾಮ್ ಬೋಸ್ ಅವರ ಬಗ್ಗೆ ಒಂದಿಷ್ಟು….

ತಾಯಿ ಭಾರತಮಾತೆಯ ಪದತಲಕ್ಕೆ 19ರ ಹರೆಯದಲ್ಲೇ ತನ್ನನ್ನು ಅರ್ಪಿಸಿಕೊಂಡ ಮಹಾನ್ ದೇಶಭಕ್ತ ಖುದಿರಾಮ್ ಬೋಸ್ ಅವರ ಜನ್ಮ ಜಯ೦ತಿಯ೦ದು ಶತ ಕೋಟಿ ನಮನಗಳು

ಬಂಗಾಳ ವಿಭಜನೆಯಾದ ನಂತರ ಪ್ರಮುಖವಾಗಿ ಕಾಣಿಸಿಕೊಂಡ ಕ್ರಾಂತಿಕಾರಿಗಳ ಪೈಕಿ ಖುದಿರಾಮ್ ಬೋಸ್ ಕೂಡ ಒಬ್ಬರು. ಮೇದಿನಿಪುರದ ತಹಸೀಲ್ಡಾರ ತ್ರೈಲೋಕ್ಯನಾಥ ಹಾಗೂ ಲಕ್ಷ್ಮೀದೇವಿಯವರ ಒಬ್ಬನೇ ಮಗ. ಇಬ್ಬರು ಗಂಡುಮಕ್ಕಳ ಸಾವು, ನಂತರದ ಮೂರು ಹೆಣ್ಣು ಮಕ್ಕಳ ನಂತರ ಹುಟ್ಟಿದವರು ಖುದಿರಾಮ್ ಬೋಸ್. ಖುದಿರಾಮ್ ಅವರ ರಕ್ಷಣೆಗಾಗಿ ತಾಯಿ ಲಕ್ಷ್ಮೀ ದೇವಿ ಪ್ರತಿ ದಿನ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು. ಆದರೆ, ದುರಂತ ಏನೆಂದರೆ, ಖುದಿರಾಮ್ ಬಾಲಕನಾಗಿದ್ದಾಗಲೇ ಅಪ್ಪ-ಅಮ್ಮ ಇಬ್ಬರೂ ಸಾವಿಗೀಡಾದರು.

ಅಕ್ಕನ ಆರೈಕೆಯಲ್ಲಿ ಬೆಳೆದ ಖುದಿರಾಮ್ ಬೋಸ್, ಆ ಸಮಯದಲ್ಲಿ ಬಂಗಾಳದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಚಟುವಟಿಕೆಗಳ ಬಗ್ಗೆ ಆಕರ್ಷಿತನಾಗಿದ್ದರು. ಅರಬಿಂದೋ ಘೋಷ್ ಹಾಗೂ ಸಿಸ್ಟರ್ ನಿವೇದಿತಾ ಅವರ ಭಾಷಣಗಳು ಖುದಿರಾಮ್ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು. ಬ್ರಿಟಿಷರನ್ನೂ ಶಕ್ತಿಯಿಂದಲೇ ಹೊರಹಾಕಬೇಕು ಎಂದು ಬಯಸಿದ್ದ ಅನುಶೀಲನ್ ಸಮಿತಿಗೆ ಖುದಿರಾಮ್ ಬೋಸ್ ಸದಸ್ಯರೂ ಆಗಿದ್ದರು.

ಆದರೆ ಮುಜಾಫುರದಿಂದ ಸುಮಾರು, ೨೫ ಮೈಲುಗಳಾಚೆ ಯುವಕ ಖುದಿರಾಮ್ ಬೋಸರನ್ನು ಸೆರೆಹಿಡಿಯಲಾಯಿತು. ತಪ್ಪಿಸಿಕೊಳ್ಳಲು ಆತ ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧನವಾಗಿ ಹೋಯಿತು. ಅವರ ಮೇಲೆ ವಿಚಾರಣೆ ಎಂಬ ನಾಟಕ ನಡೆದು ಕೊನೆಗೆ ಮರಣದಂಡನೆಯನ್ನು ವಿಧಿಸಲಾಯಿತು. ೧೯೦೮ರ ಆಗಸ್ಟ್ ೧೧ರಂದು ಗಲ್ಲಿಗೇರಿಸಲಾಯಿತು.

ಇತ್ತ ಪ್ರಫುಲ್ಲ್ ಚಾಕಿ ಪೊಲೀಸರೊಂದಿಗೆ ಹೋರಾಡುತ್ತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆ ತಮ್ಮ ರಿವಾಲ್ವರ್ನಿಂದ ತಾವೇ ಸುಟ್ಟುಕೊಂಡು ಅಮರರಾದನು.

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ