ಸಂಸತ್ತಿನಲ್ಲಿ ಭದ್ರತಾಲೋಪ: ಬಂಧಿತ ಇಬ್ಬರು ಮೈಸೂರು ಮೂಲದವರು
ಸಂಸತ್ತಿನಲ್ಲಿ ಭದ್ರತಾಲೋಪ: ಬಂಧಿತ ಇಬ್ಬರು ಮೈಸೂರು ಮೂಲದವರು
ಸಂಸತ್ ಭವನದ ಭದ್ರತೆಯಲ್ಲಿ ಭಾರಿ ಭದ್ರತಾ ಲೋಪವಾಗಿರುವ ಘಟನೆ ಇಂದು ನಡೆದಿದೆ. ದೆಹಲಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ವೇಳೆ ಇಬ್ಬರು ವ್ಯಕ್ತಿಗಳು ಸಂಸತ್ ಒಳಗೆ ಅಶ್ರುವಾಯು ಸಿಡಿಸಿದ್ದಾರೆ. ಲೋಕಸಭೆ ಕಲಾಪ ನಡೆಯುತ್ತಿದ್ದಾಗ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ದಿಢೀರನೆ ಸದನಕ್ಕೆ ಜಿಗಿದು ಅವಾಂತರ ಸೃಷ್ಟಿಸಿ ಭಯದ ವಾತಾವರಣ ನಿರ್ಮಾಣ ಮಾಡಿದ ಆರೋಪಿಗಳನ್ನು ಈಗಾಗಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಈ ವ್ಯಕ್ತಿಗಳು ಕಲಾಪ ನಡೆಯುತ್ತಿರುವಲ್ಲಿಗೆ ಹೇಗೆ ಬಂದಿದ್ದಾರೆ ಎಂದು ಪತ್ತೆ ಮಾಡಲಾಗುತ್ತಿದೆ. ಸಂದರ್ಶಕರ ಗ್ಯಾಲರಿಯಿಂದ ಭಾರತೀಯ ಸಂಸತ್ತಿನ ಒಳಗೆ ಜಿಗಿದು ಹೊಗೆ ಡಬ್ಬಿ ಎಸೆದ ವ್ಯಕ್ತಿಯನ್ನು ಸಾಗರ್ ಶರ್ಮಾ ಮತ್ತು ಮೈಸೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋರಂಜನ್ ಎಂದು ಗುರುತಿಸಲಾಗಿದೆ. ಸಂಸತ್ತಿನ ಹೊರಗೆ ಹಳದಿ ಹೊಗೆಯುಗುಳುತ್ತಿದ್ದ ಕ್ಯಾನಿಸ್ಟರ್ ಹಿಡಿದುಕೊಂಡು ಪ್ರತಿಭಟಿಸುತ್ತಿದ್ದ ಓರ್ವ ಮಹಿಳೆ ಮತ್ತು ಪುರುಷನನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ.