ಆಧಾರ್ ಕಾರ್ಡ್ ಉಚಿತ ತಿದ್ದುಪಡಿ ಅವಧಿ ವಿಸ್ತರಣೆ
ಆಧಾರ್ ಕಾರ್ಡ್ ಉಚಿತ ತಿದ್ದುಪಡಿ ಅವಧಿ ವಿಸ್ತರಣೆ
ಆಧಾರ್ ಕಾರ್ಡ್ ದಾಖಲೆಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡಲು ಡಿ.14ರವರೆಗೆ ಇದ್ದ ಅವಕಾಶವನ್ನು ಮೂರು ತಿಂಗಳು ವಿಸ್ತರಿಸಲಾಗಿದೆ. ಇದೀಗ 2024ರ ಮಾರ್ಚ್ 14ರವರೆಗೆ ಉಚಿತವಾಗಿ ಆಧಾರ್ ದಾಖಲೆ ಅಪ್‌ಡೇಟ್ ಮಾಡಬಹುದು. ಜನರಿಗೆ ತಮ್ಮ ಆಧಾರ್‌ನಲ್ಲಿರುವ ದಾಖಲೆಗಳನ್ನು ಅಪ್‌ಡೇಟ್ ಮಾಡಲು ನಾಳೆಯವರೆಗೆ ಅವಕಾಶ ನೀಡಲಾಗಿತ್ತು. ಆದರೆ ಜನರಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು UIDAI ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಮೈ ಅಧಾರ್‌ನ ಅಧಿಕೃತ ಪೋರ್ಟಲ್ ನಲ್ಲಿ ಮಾತ್ರ ಈ ಉಚಿತ ಸೇವೆ ಲಭ್ಯ ಇರುತ್ತದೆ. ವಿವಿಧ ಕಡೆ ಇರುವ ಆಧಾರ್ ಕೇಂದ್ರಗಳಲ್ಲೂ ಆಧಾರ್ ಅಪ್‌ಡೇಟ್ ಮಾಡಬಹುದು. ಆದರೆ, ಅದಕ್ಕೆ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ. ಮೈ ಆಧಾರ್ನಲ್ಲಿ ಮಾರ್ಚ್ 14ರವರೆಗೂ ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಬಹುದು. ಆ ಬಳಿಕ ಪೋರ್ಟಲ್ನಲ್ಲೂ ಕೂಡ ಶುಲ್ಕ ಪಾವತಿಸಿಯೇ ಅಪ್‌ಡೇಟ್ ಮಾಡಬೇಕಾಗುತ್ತದೆ. UIDAI ವೆಬ್‌ಸೈಟ್‌ಗೆ ಹೋಗಿ, ಅಲ್ಲಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಸೃಷ್ಟಿಸಿಕೊಳ್ಳಿ. ಲಾಗ್ ಇನ್ ಆಗಿ ಅಪ್‌ಡೇಟ್ ವಿನಂತಿ ಸಲ್ಲಿಸಿದರೆ, UIDAI ವಿನಂತಿಯನ್ನು ಪರಿಶೀಲಿಸುತ್ತದೆ ಮತ್ತು 15 ದಿನಗಳಲ್ಲಿ ಆಧಾರ್ ವಿವರಗಳನ್ನು ನವೀಕರಿಸುತ್ತದೆ. ಆಧಾರ್ ಅನ್ನು ನವೀಕರಿಸುವ ಮೂಲಕ, ನೀವು ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ, ಕುಟುಂಬದ ಹೆಸರು, ವಿಳಾಸ, ಲಿಂಗ ಇತ್ಯಾದಿಗಳಲ್ಲಿ ಯಾವುದೇ ದೋಷಗಳನ್ನು ಸರಿಪಡಿಸಬಹುದು. ಆದರೆ ಉಚಿತ ಆಧಾರ್ ನವೀಕರಣಕ್ಕೆ ಡಿಸೆಂಬರ್ 14 ಕೊನೆಯ ದಿನಾಂಕ ಎಂದು ಹೇಳಿರುವ ಯುಐಡಿಎಐ ಇದೀಗ ಆ ಗಡುವನ್ನು ವಿಸ್ತರಿಸಿ ಮತ್ತೊಂದು ಅವಕಾಶ ನೀಡಿದೆ.