• 22 ನವೆಂಬರ್ 2024

ಡಿ. 26 ರ ಬೆಳಗ್ಗೆ 11.30 ರಿಂದ ʻಯುವನಿಧಿʼ ಯೋಜನೆ ನೋಂದಣಿ ಆರಂಭ

 ಡಿ. 26 ರ ಬೆಳಗ್ಗೆ 11.30 ರಿಂದ ʻಯುವನಿಧಿʼ ಯೋಜನೆ ನೋಂದಣಿ ಆರಂಭ
Digiqole Ad

ಡಿ. 26 ರ ಬೆಳಗ್ಗೆ 11.30 ರಿಂದ ʻಯುವನಿಧಿʼ ಯೋಜನೆ ನೋಂದಣಿ ಆರಂಭ: ಜ.12 ಖಾತೆಗೆ ಹಣ ಜಮೆ

ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಯುವನಿಧಿ ನೋಂದಣಿ ಪ್ರಕ್ರಿಯೆಗೆ ಡಿ. 26ರಂದು ಚಾಲನೆ ನೀಡುತ್ತೇವೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಇಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿ, ಡಿ.26 ರಂದು ವಿಧಾನಸೌಧದಲ್ಲಿ CM, DCM ಲೋಗೋ ಅನಾವರಣ ಮಾಡಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಜ.12 ರಂದು ವಿವೇಕಾನಂದ ಜಯಂತಿ ದಿನ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುವುದು. ನಮ್ಮ ಭರವಸೆಗಳಂತೆ ಪದವಿ, ಡಿಪ್ಲೋಮಾ ಮುಗಿಸಿ 6 ತಿಂಗಳು ಆಗಿದ್ದರೆ ಈ ಯುವನಿಧಿಗೆ ಅರ್ಹರಾಗಿರುತ್ತಾರೆ.

ಪತ್ರಿ ತಿಂಗಳು 25 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಓನ್, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಓನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಎಸ್‌ ಎಸ್‌ ಎಲ್‌ ಸಿ ಅಂಕ ಪಟ್ಟಿ

ಪಿಯುಸಿ ಅಂಕಪಟ್ಟಿ

ಆಧಾರ್ ಕಾರ್ಡ್

ರೇಷನ್‌ ಕಾರ್ಡ್

ಸಿಇಟಿ ರಿಜಿಸ್ಟ್ರೇಶನ್‌

ಇ-ಮೇಲ್ ಐಡಿ

ಮೊಬೈಲ್ ಸಂಖ್ಯೆ

ಭಾವಚಿತ್ರ 

ಆದಾಯ ಪ್ರಮಾಣ ಪತ್ರ

ಬ್ಯಾಂಕ ಖಾತೆಯ ವಿವರ

ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ