ನಮ್ಮೂರ ಹೆಮ್ಮೆಯ ಗಾಯಕನಿಗೆ ರಾಷ್ಟ್ರ ಮಟ್ಟದ ಕಲಾ ರತ್ನ ಪ್ರಶಸ್ತಿ !
ನಮ್ಮೂರ ಹೆಮ್ಮೆಯ ಗಾಯಕನಿಗೆ ರಾಷ್ಟ್ರ ಮಟ್ಟದ ಕಲಾ ರತ್ನ ಪ್ರಶಸ್ತಿ !
ಹಲವಾರು ಐತಿಹಾಸಿಕ ಕಾರ್ಯಕ್ರ. ಮಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯಶಸ್ವಿಗೊಳಿಸಿ, ಐದು ನೂರು ಜನ ಕವಿಗಳನ್ನ ಒಂದೇ ದಿನದಲ್ಲಿ ಕವಿಗೋಷ್ಠಿ ಏರ್ಪಡಿಸಿ ದಾಖಲೆ ಬರೆದಿ ರುವ ಬೆಳಕು ಸಾಹಿತ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ 115ನೇ ರಾಜ್ಯ ಮಟ್ಟದ ಬೆಳಕು ಸಂಭ್ರಮದ ಕಾರ್ಯಕ್ರಮವನ್ನು ಹಮ್ಮಿಕೊ ಳ್ಳಲಾಗಿತ್ತು
ಈ ಸಂಭ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆರ್ ಪೀ ಕ್ರಿಯೇಷನ್ಸ್ ತಂಡದ ಸಂಚಾಲಕರಾದ ಶ್ರೀ ರವಿ ಪಾಂಬಾರ್ ರವರಿಗೆ ರಾಷ್ಟ್ರ ಮಟ್ಟದ ಕಲಾ ರತ್ನ ಪ್ರಶಸ್ತಿ ಲಭಿಸಿತು.ಇವರ ಸಂಗೀತ ಹಾಗೂ ಸಂಸ್ಕೃತಿಕ ಕ್ಷೇತ್ರದಲ್ಲಿ ಆಗಾಧವಾದ ಸಾಧನೆ ನೀಡಿದ ಇವರನ್ನು ರಾಜ್ಯಮಟ್ಟದ ಬೆಳಕು ಸಂಭ್ರಮ ರಾಯಚೂರು ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರ ಬರಹಗಳು ಷಣ್ಮುಖನ ಅಭಯ, ಮಾಯ ರೂಪದ ಅಜ್ಜ, ಅಂಬೇಡ್ಕರ್ ಜೀವನ ಚರಿತ್ರೆ, ಮೊಗಪ್ಪೆದ ಉಳ್ಳಾಯೇ, ಕಲ್ಕೂಡನ ಅಭಯ, ಕನಸುಗಳ ಪಿಸುಮಾತು, ಉಬ್ರಾ0ಗಳ ಕ್ಷೇತ್ರ ಮಹಿಮೆ, ನಮ್ಮ ತುಳುನಾಡ್, ಸಿರಿ ಬೊಲ್ಪು ಪಡ್ಡಯಿ ಬಾಕಿಲ್ ದ ಅಮ್ಮ, ಪಟ್ಟೆ ಸೀರೆದ ಅಮ್ಮ, ಮಹಿಮೆದ ಮಣ್ಣ್, ಕಲೆದಿಂಜಿ ಮಾಯೆ. ಅಮರ್ ಬೊಳ್ಳಿಲು.
ಹಾಗೂ *ಗಾನ ಶಾರದೇ ಗಾಯನ ಸ್ಪರ್ಧೆ*, *ನನ್ನ ಹಾಡು ಜನರ ಮನ ಸೆಳೆದಾಗ* ಗಾಯನ ಸ್ಪರ್ಧೆಯನ್ನು ನಡೆಸಿ ತೆರೆ ಮರೆಯಲ್ಲಿರೋ ಕಲಾವಿದರಿಗೆ ವೇದಿಕೆ ಒದಗಿಸಿ ಇಪ್ಪತ್ತು ಜನರಿಗೆ ತನ್ನ ವೇದಿಕೆಯಲ್ಲಿ ಬಿರುದುಗಳನ್ನು ನೀಡಿ ಸನ್ಮಾನಿಸಿ ಕಾರ್ಯಕ್ರಮ ನಡೆಸಿ.ಐನೂರಕ್ಕೂ ಹೆಚ್ಚು ಜನರಿಗೆ ವೇದಿಕೆ ನೀಡಿರುತ್ತಾರೆ ಹಾಗೂ *ಆರ್ ಪಿ ಕ್ರಿಯೇಷನ್*ಎಂಬ 10 ಜನರ ತಂಡದ ನಾಯಕನಾಗಿ ಹಲವಾರು ವರುಷಗಳಿಂದ ಸಂಗೀತ ರಸ ಮಂಜರಿ ನೀಡುತ್ತಾ ಬಂದಿರುತ್ತಾರೆ ಹಾಗೂ ಇದೀಗ ತುಳುನಾಡಿನ ಆಚರಣೆ ವಿಚಾರ ಗಳನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ವೇಷ ಭೂಷನಗಳ ಪ್ರದರ್ಶನಗಳ *ತುಳುನಾಡ ವೈಭವ* ಎನ್ನುವ ಕಾರ್ಯಕ್ರಮವನ್ನು ನೀಡುತ್ತಾ ಬಂದಿರುತ್ತಾರೆ.
ಸನ್ಮಾನ ಗಳು :
- 2016ರಲ್ಲಿ ಶ್ರೀ ಕ್ಷೇತ್ರ ದೇವರ ಕಾನಾ ಉಳ್ಳಕ್ಕುಲು ಪರಿವಾರ ದೇವ್ಯಗಳ ಚಾವಡಿ ವತಿಯಿಂದ *ಗೌರವ ಅರ್ಪಣೆ*
- 2017ರಲ್ಲಿ sp ಕ್ರಿಯೇಷನ್ ವತಿಯಿಂದ *ತುಳುನಾಡ ಪೆರ್ಮೆದ ಗಾಯಕೆ* ಬಿರುದು,
- 2018ರಲ್ಲಿ, ಪೆರುವಾಜೆ ಜಲಾದುರ್ಗೆ ದೇವಸ್ಥಾನ ವತಿಯಿಂದ *ಗೌರವ ಅರ್ಪಣೆ*
- 2019ರಲ್ಲಿ ಚಂದನ ಸಾಹಿತ್ಯ ವೇದಿಕೆಯಿಂದ *ಗೌರವ ಅರ್ಪಣೆ*
- 2020ರಲ್ಲಿ ದಸರಾ ಉತ್ಸವ ಪೆರ್ಲ0ಪಾಡಿ ವತಿಯಿಂದ *ಸಾಧಕ ರತ್ನ ಗೌರವ*
- 2021ರಲ್ಲಿ ಕೊಯಿಲ ಮಹಮ್ಮಾಯಿ ವತಿಯಿಂದ *ಗೌರವ ಅರ್ಪಣೆ*
- 2022ರಲ್ಲಿ ಕೊರಗಜ್ಜ ಸಾನಿಧ್ಯ ಪಾಲ್ತಾಡು ವತಿಯಿಂದ *ಗೌರವ ಅರ್ಪಣೆ* ಕನಕ ಮಜಲು ಆತ್ಮರಾಮ ಭಜನಾ ಮಂದಿರದ ವತಿಯಿಂದ *ಗೌರವ ಅರ್ಪಣೆ*
- 2023ರಲ್ಲಿ ಚಿಗುರೆಲೇ ಸಾಹಿತ್ಯ ಬಳಗ ಪುತ್ತೂರು ಇವರಿಂದ ಸಾಧಕರಿಗೆ ಸನ್ಮಾನ ಗೌರವ ಅರ್ಪಣೆ
- ವಾಸ್ಟರ್ ಪೈ ಸ್ಟಾರ್ ಸುಳ್ಯ ಇದರ ವತಿಯಿಂದ *ಸಂಗೀತ ರತ್ನ ರಾಜ್ಯ ಪ್ರಶಸ್ತಿ ಪುರಸ್ಕಾರ*
- ಭಾವೈಕ್ಯ ಸಮ್ಮಿಲನ ಕವಿಗೋಷ್ಠಿ.ಜಪ್ಪು ಚರ್ಚ ಇದರ ವತಿಯಿಂದ ಕಾವ್ಯ ಸಿರಿ ಪ್ರಶಸ್ತಿ*