• 22 ನವೆಂಬರ್ 2024

ಕೋವಿಡ್ ಕುರಿತ ಸುಳ್ಳು, ವೈರಲ್ ಸುದ್ದಿ ನಂಬಬೇಡಿ: ಸಚಿವ ಶರಣ ಪ್ರಕಾಶ ಪಾಟೀಲ್

 ಕೋವಿಡ್ ಕುರಿತ ಸುಳ್ಳು, ವೈರಲ್ ಸುದ್ದಿ ನಂಬಬೇಡಿ: ಸಚಿವ ಶರಣ ಪ್ರಕಾಶ ಪಾಟೀಲ್
Digiqole Ad

ಕೋವಿಡ್ ಕುರಿತ ಸುಳ್ಳು, ವೈರಲ್ ಸುದ್ದಿ ನಂಬಬೇಡಿ: ಸಚಿವ ಶರಣ ಪ್ರಕಾಶ ಪಾಟೀಲ್

ಯಾದಗಿರಿ ಡಿ.29: ಕೋವಿಡ್ ಬಗ್ಗೆ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದು, ಯಾವುದೇ ಸುಳ್ಳು, ವೈರಲ್ ಸುದ್ದಿಗಳಿಗೆ ಜನರು ಭಯ ಬೀಳಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ಹೇಳಿದ್ದಾರೆ. ಇಲ್ಲಿನ ಸಪ್ತಗಿರಿ ಕಲ್ಯಾಣ ಮಂಟಪದಲ್ಲಿ ಖಾಸಗೀ ಕಾರ್ಯಕ್ರಮಗಳೊಂದರಲ್ಲಿ ಪಾಳ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತಾಡಿ, ರಾಜ್ಯದಲ್ಲಿ ಮೊದಲ ಹಾಗೂ ಎರಡನೇ ಕೋವಿಡ್ ಅಲೆ ವೇಳೆ ಉಂಟಾಗಿದ್ದ ಪ್ರಮಾದಗಳು ಮರುಕಳಿಸಬಾರದು.

ಜನರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಸರಕಾರದ ಉದ್ದೇಶವಾಗಿದೆ. ಯಾವುದೇ ಸುಳ್ಳು ಅಥವಾ ವೈರಲ್ ಸುದ್ದಿಗಳಿಗೆ ಸಾರ್ವಜನಿಕರು ಭಯ ಬೀಳಬೇಡಿ. ಕೋವಿಡ್ ಹೊಸ ತಳಿ ಜೆನ್-1 ಬಗ್ಗೆ ಭಯ ಭಯಪಡದೆ ಬದಲಾಗಿ ಮುಂಜಾಗ್ರತೆ ಕ್ರಮ ವಹಿಸಿ ಎಂದು ತಿಳಿಸಿದ್ದಾರೆ. ಕಳೆದ ಬಾರಿ ಜನರು ಸೂಕ್ತ ಚಿಕಿತ್ಸೆ ಸಿಗದೆ ಜನ ಪರದಾಡುವುದನ್ನು ನೋಡಿದ್ದೇವೆ ಅದು ಮರುಕಳಿಸಬಾರದು. ಜೊತೆಗೆ ಈಗಾಗಲೇ ಕೈಗೊಂಡಿರುವ ಪೂರ್ವ ಸಿದ್ಧತೆ ಖಾತ್ರಿಪಡಿಸಿಕೊಳ್ಳಲು ಮತ್ತೊಮ್ಮೆ ಅಣುಕು ಪ್ರದರ್ಶನ ಮಾಡುವಂತೆ ಸೂಚಿಸಿರುವುದಾಗಿ ತಿಳಿಸಿದರು.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ