ಬಿಬಿಎಂಪಿ:75 ಉಪವಿಭಾಗಗಳಾಗಿ ವಿಂಗಡಸಿ ಅದೇಶ
ಬಿಬಿಎಂಪಿ:75 ಉಪವಿಭಾಗಗಳಾಗಿ ವಿಂಗಡಸಿ ಅದೇಶ
ಬೆಂಗಳೂರು. ಡಿ 30: ಬೆಂಗಳೂರು ನಗರದ ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯ 30 ಉಪವಿಭಾಗಳನ್ನು 75 ಉಪ ವಿಭಾಗಗಳಾಗಿ ವಿಂಗಡಿಸಿ ಕರ್ನಾಟಕ ಸರಕಾರ ಅದೇಶ ಹೊರಡಿಸಿದೆ. ಇದಕ್ಕಿಂತ ಮೊದಲು 198 ವಾರ್ಡ್ ಗಳಿದ್ದ ಬಿಬಿಎಂಪಿಯನ್ನು 225 ವಾರ್ಡ್ ಗಳನ್ನಾಗಿ ಪುನರ್ ರಚಿಸಿ ಆದೇಶಿದ್ದ ಸರಕಾರ ಇದೀಗ 75 ಉಪವಿಂಗಡನೆ ಮಾಡಿ ಆದೇಶ ಹೊರಡಿಸಿದೆ.225 ವಾರ್ಡ್ಗಳನ್ನು 75 ಕಂದಾಯ, ಆರೋಗ್ಯ, ಕಾಮಗಾರಿ ಉಪ ವಿಭಾಗಗಳಾಗಿ ವಿಂಗಡಣೆ ಮಾಡಿ ಪ್ರತಿ ಉಪ ವಿಭಾಗದಲ್ಲಿ ಎರಡರಿಂದ ನಾಲ್ಕು ವಾರ್ಡ್ಗಳಿರುವಂತೆ ವಿಂಗಡಣೆ ಮಾಡಲಾಗಿದೆ. 8 ವಲಯಗಳಲ್ಲಿ 30 ವಿಭಾಗಗಳ ರಚನೆ, 30 ವಿಭಾಗಗಳಡಿ 75 ಉಪ ವಿಭಾಗಗಳಾಗಿ ವಿಂಗಡಿಸಿ ಈ 75 ವಿಭಾಗಗಳಡಿ ಕೆಲಸ ನಿರ್ವಹಿಸುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ವಲಯ ವಿಭಾಗ ಉಪ ವಿಭಾಗಗಳನ್ನು
ಬೊಮ್ಮನಹಳ್ಳಿ ,ದಾಸರಹಳ್ಳಿ ಪೂರ್ವವಲಯ, ಮಹದೇವಪುರ, ಆರ್.ಆರ್ ನಗರ, ದಕ್ಷಿಣ ಯಲಹಂಕ ಮೊದಲಾದ ಕಡಗೆ ವಿಂಗಡಿಸಿ ಅದೇಶ ಹೊರಡಿಸಲಾಗಿದೆ.