• 22 ನವೆಂಬರ್ 2024

ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ

 ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ
Digiqole Ad

ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಜೈಷ್-ಎ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ ಬಾಂಬ್ ಸ್ಫೋಟಗೊಂಡು ಮೃತಪಟ್ಟಿದ್ದಾನೆ ಎಂದು ವರದಿಯೊಂದು ತಿಳಿಸಿದೆ. ಮೂಲಗಳ ಪ್ರಕಾರ ಅಪರಿಚಿತ ದುಷ್ಕರ್ಮಿಗಳು ಮುಂಜಾನೆ 5 ಗಂಟೆ ಸುಮಾರಿಗೆ ಭವಲ್ಪುರ ಮಸೀದಿ ಮುಂಭಾಗದಲ್ಲಿ ನಿಂತಿದ್ದ ಮಸೂದ್‌ ಕಾರ್‌ಗೆ ಬಾಂಬ್‌ ಅಳವಡಿಸಿ ಸ್ಫೋಟಿಸಿದ್ದಾರೆ ಎನ್ನಲಾಗಿದೆ. ಮಸೀದಿಯಿಂದ ವಾಪಸ್ ಮನೆಗೆ ತೆರಳುವುದನ್ನು ಕಾಯುತ್ತಿದ್ದ ದುಷ್ಕರ್ಮಿಗಳು ಆತ ಕಾರ್ ಬಳಿ ಬರುತ್ತಿದ್ದಂತೆ ಮೊದಲೇ ಅಳವಡಿಸಲಾಗಿದ್ದ ಬಾಂಬ್ ಅನ್ನು ಸ್ಫೋಟಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ (2023) ನವೆಂಬರ್‌ನಲ್ಲಿ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಮತ್ತು ಮೌಲಾನಾ ಮಸೂದ್ ಅಜರ್‌ನ ಆಪ್ತ ಸ್ನೇಹಿತ ಮೌಲಾನಾ ರಹೀಂ ಉಲ್ಲಾ ತಾರಿಕ್ ರನ್ನು ಕರಾಚಿಯ ಒರಂಗಿ ಪಟ್ಟಣ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.

ಮಸೂದ್ ಅಜರ್‌ ಯಾರು?

ಮೌಲಾನಾ ಮಸೂದ್ ಅಜರ್ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, ಜೈಷೆ ಮೊಹಮ್ಮದ್‌ನ ಸ್ಥಾಪಕ. ನಕಲಿ ಪಾಸ್‌ಪೋರ್ಟ್‌ ಮೇಲೆ ಭಾರತಕ್ಕೆ ಬಂದಿದ್ದ ಈತನನ್ನು 1994ರಲ್ಲಿ ಕಾಶ್ಮೀರದಲ್ಲಿ ಬಂಧಿಸಲಾಗಿತ್ತು. 1999ರ ಡಿ.24ರಂದು ನೇಪಾಳದ ಕಠ್ಮಂಡುವಿನಿಂದ ದಿಲ್ಲಿಗೆ ಬರುತ್ತಿದ್ದ 176 ಪ್ರಯಾಣಿಕರಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಪಹರಿಸಿ ಕಂದಹಾರ್‌ನಲ್ಲಿ ಇಳಿಸಲಾಗಿತ್ತು. ಅಜರ್‌ನನ್ನು ಜೈಲಿನಿಂದ ಬಿಡಿಸಿಕೊಳ್ಳುವ ಮೂಲಕ ವಿಮಾನದಲ್ಲಿದ್ದ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿತ್ತು. 2001ರಲ್ಲಿ ನಡೆದ ಸಂಸತ್ ದಾಳಿಯನ್ನು ಕೂಡ ಈತನೇ ಮಾಡಿಸಿದ್ದ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ