• 8 ಸೆಪ್ಟೆಂಬರ್ 2024

ಖ್ಯಾತ ಜನಪದ ವಿದ್ವಾಂಸ, ಹಿರಿಯ ಸಾಹಿತಿ ಅಮೃತ ಸೋಮೇಶ್ವರ್ ನಿಧನ

 ಖ್ಯಾತ ಜನಪದ ವಿದ್ವಾಂಸ, ಹಿರಿಯ ಸಾಹಿತಿ ಅಮೃತ ಸೋಮೇಶ್ವರ್ ನಿಧನ
Digiqole Ad

ಖ್ಯಾತ ಜನಪದ ವಿದ್ವಾಂಸ, ಹಿರಿಯ ಸಾಹಿತಿ ಅಮೃತ ಸೋಮೇಶ್ವರ್ ನಿಧನ

ಜಾನಪದ ವಿದ್ವಾಂಸ, ಹಿರಿಯ ಸಾಹಿತಿ ಅಮೃತ ಸೋಮೇಶ್ವರ(89) ನಿಧನರಾಗಿದ್ದಾರೆ. ಕವಿ, ಲೇಖಕ, ಕಾದಂಬರಿ-ನಾಟಕ, ಸಂಶೋಧಕ, ಯಕ್ಷಗಾನ ಪ್ರಸಂಗಕರ್ತರಾಗಿ ತುಳು&ಕನ್ನಡ ಭಾಷೆಗೆ ಸೋಮೇಶ್ವರ ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯೋತ್ಸವ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ ಶತಮಾನೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಸೇರಿ 40ಕ್ಕೂ ಹೆಚ್ಚು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮದ ಅಡ್ಕದಲ್ಲಿ 1935ರ ಸೆ.27ರಂದು ಜನಿಸಿದ್ದರು. ವೃತ್ತಿಯಲ್ಲಿ 35 ವರ್ಷಗಳ ಕಾಲ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಅಮೃತ ಸೋಮೇಶ್ವರ ಅವರು ಕನ್ನಡ ಹಾಗೂ ತುಳು ಭಾಷೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. 9ನೇ ತರಗತಿಯಲ್ಲಿರುವಾಗಲೇ ಶ್ರೀಮತೀ ಪರಿಣಯ ಎಂಬ ಕಾವ್ಯವನ್ನು ಭಾಮಿನಿ ಷಟ್ನದಿಯಲ್ಲಿ ಬರೆದಿದ್ದರು. ಪ್ರಪ್ರಥಮ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಕೂಡ ಆಗಿದ್ದರು. ಅಮೃತ ಸೋಮೇಶ್ವರ ಅವರು ‘ಪೂ ಪಂರ್ದ್’ ಸೇರಿದಂತೆ 50ಕ್ಕೂ ಹೆಚ್ಚು ಜನಪ್ರಿಯ ತುಳು ಭಕ್ತಿಗೀತೆಗಳಿಗೆ ಸಾಹಿತ್ಯ ರಚಿಸಿದ್ದಾರೆ. ಇವರ ಹಲವು ಭಕ್ತಿಗೀತೆಗಳನ್ನು ಶ್ರೀ ವಿದ್ಯಾಭೂಷಣ ಅವರು ಹಾಡಿದ್ದಾರೆ.

ತುಳು &ಕನ್ನಡದಲ್ಲಿ ಹಲವು ಮೌಲ್ಯಯುತ ಕೃತಿ ರಚಿಸಿ ಶ್ರೇಷ್ಠ ಸಾಹಿತಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ‘ಯಕ್ಷಗಾನ ಕೃತಿ ಸಂಪುಟ’ ಯಕ್ಷಗಾನ ಸಂಶೋಧನೆ ಫಲವಾಗಿ ಮೂಡಿಬಂದ ಬಹು ಮೌಲಿಕ ಕೃತಿ. ತಂಬಿಲ, ರಂಗೀತ (ಕವನ ಸಂಕಲನ), ತುಳು ಪಾಡ್ಡನ ಕತೆಗಳು, ಅವಿಲು (ಜಾನಪದ ಕತೆ), ಅಪಾರ್ಥಿನಿ-ಕುಚೋದ್ಯದ ಶಬ್ದಕೋಶ, ರೇಡಿಯೋ ನಾಟಕ, ನೃತ್ಯರೂಪಕ, ಗಾದೆಗಳನ್ನೂ ರಚಿಸಿದ್ದಾರೆ. ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕವನ್ನೂ ತುಳುವಿಗೆ ಅನುವಾದಿಸಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ