• 8 ಸೆಪ್ಟೆಂಬರ್ 2024

ಮಗುವಿನ ವಿಕಾಸವೇ ಶಿಕ್ಷಕನ ಗುರಿಯಾಗಬೇಕು : ರಾಜೇಂದ್ರ ಭಟ್ ಕೆ,ಬೆಳ್ಳಾರೆ ಜ್ಞಾನದೀಪದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ಕಾರ್ಯಾಗಾರ

 ಮಗುವಿನ ವಿಕಾಸವೇ ಶಿಕ್ಷಕನ ಗುರಿಯಾಗಬೇಕು : ರಾಜೇಂದ್ರ ಭಟ್ ಕೆ,ಬೆಳ್ಳಾರೆ ಜ್ಞಾನದೀಪದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ಕಾರ್ಯಾಗಾರ
Digiqole Ad

ಮಗುವಿನ ವಿಕಾಸವೇ ಶಿಕ್ಷಕನ ಗುರಿಯಾಗಬೇಕು : ರಾಜೇಂದ್ರ ಭಟ್ ಕೆ,ಬೆಳ್ಳಾರೆ ಜ್ಞಾನದೀಪದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ಕಾರ್ಯಾಗಾರ

ಬೆಳ್ಳಾರೆ, ಜ.14: ಮಕ್ಕಳ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು, ಸಂವಹನ ಕೌಶಲ್ಯದ ಜೊತೆಗೆ ಶಿಕ್ಷಕ ಮಗುವಿನ ಪ್ರೇರಣೆ ಮತ್ತು ಸ್ಪೂರ್ತಿಯ ಶಕ್ತಿಯಾಗಬೇಕು. ಮಗುವಿನ ವಿಕಾಸವೇ ಪ್ರತಿಯೊಬ್ಬ ಶಿಕ್ಷಕನ ಗುರಿ ಎಂದು ಜೇಸಿಐ ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರೆಬೇತುದಾರ ರಾಜೇಂದ್ರ ಭಟ್ ಕೆ. ಹೇಳಿದರು. ಅವರು ಜೇಸಿಐ ಬೆಳ್ಳಾರೆ ಇದರ ಆಶ್ರಯದಲ್ಲಿ ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ವಿದ್ಯಾರ್ಥಿ ಶಿಕ್ಷಕಿಯರಿಗೆ ನಡೆದ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಸಿ ಮಾತನಾಡಿದರು.

ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಸುನಿಲ್ ರೈ ಪೆರುವಾಜೆ ಕಾರ್ಯಾಗಾರವನ್ನು ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವಧ್ಯಕ್ಷ ರವೀಂದ್ರನಾಥ ಶೆಟ್ಟಿ ಅಜಪಿಲ, ಜ್ಞಾನದೀಪ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಉಪಸ್ಥಿತರಿದ್ದರು. ಕಾರ್ಯದರ್ಶಿ ವಾಸುದೇವ ಪೆರುವಾಜೆ ವಂದಿಸಿದರು. ಪೂರ್ವಾಧ್ಯಕ್ಷೆ ನಿರ್ಮಲ ಜಯರಾಮ್, ವೇದಿತ್ ರೈ, ವಿದ್ಯಾರ್ಥಿ ಶಿಕ್ಷಕಿ ಪೂರ್ಣಿಮಾ ಸಹಕರಿಸಿದರು.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ