ಹಾಲೆಮಜಲು; 75ನೇ ಗಣರಾಜ್ಯೋತ್ಸವ ಆಚರಣೆ ಮತ್ತು ಪ್ರತಿಭಾ ಪುರಸ್ಕಾರ
ಹಾಲೆಮಜಲು; 75ನೇ ಗಣರಾಜ್ಯೋತ್ಸವ ಆಚರಣೆ ಮತ್ತು ಪ್ರತಿಭಾ ಪುರಸ್ಕಾರ
ಸುಳ್ಯ, ಜ.26: ನಾಲ್ಕೂರು ಗ್ರಾಮದ ಹಾಲೆಮಜಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು.
ನಾಲ್ಕೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಲೆಮಜಲು ಇಲ್ಲಿ೭೫ ವರ್ಷದ ಗಣರಾಜ್ಯೋತ್ಸವ ಆಚರಣೆ ಮತ್ತು ಮಕ್ಕಳಿಗೆ ದಾನಿಗಳು ಸ್ಥಾಪಿಸಿದ ದತ್ತ ನಿಧಿ ವಿತರಣಾ ಕಾರ್ಯಕ್ರಮ ಇಂದು ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದುಗ್ಗಪ್ಪ ಮಾಸ್ತರ ಕುಳ್ಳಂಪಾಡಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯ ಅಧ್ಯಕ್ಷೆ ಪವಿತ್ರ ಕುಕ್ಕುಜೆ ವಹಿಸಿದ್ದರು. ವೇದಿಕೆಯಲ್ಲಿ ಆದರ್ಶ ಯೂತ್ ಕ್ಲಬ್ ಅಧ್ಯಕ್ಷ ಸತೀಶ್ ಬಂಬುಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಲ್ಕುರು ಗ್ರಾಮದ ಸೇವಾ ಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ, ಅಂಗನವಾಡಿ ಶಿಕ್ಷಕಿ ತೇಜಕುಮಾರಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಹಾಲಿಂಗ ಸಿ.ಹೆಚ್. ದತ್ತಿನಿಧಿ ದಾನಿಗಳಾದ ಪುಷ್ಪಾವತಿ ಬುಡ್ಡೆ ಗುತ್ತು, ಯಮುನಾ ಉಮಾನಾಥ ಕುಕ್ಕುಜೆ, ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಮೋಹನ ಬಾಳೆಕಜೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು. ನಂತರ ಅತಿಥಿಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿನಿದಿ ವಿತರಿಸಿದರು.