• 8 ಸೆಪ್ಟೆಂಬರ್ 2024

ನಾಣಿಲ ಶಾಲೆ ಅಭಿನಂದನಾ ಸಮಾರಂಭ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ

 ನಾಣಿಲ ಶಾಲೆ ಅಭಿನಂದನಾ ಸಮಾರಂಭ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ
Digiqole Ad

ನಾಣಿಲ ಶಾಲೆ ಅಭಿನಂದನಾ ಸಮಾರಂಭ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ

ಕಡಬ ತಾಲೂಕು ಚಾರ್ವಾಕ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನಾಣಿಲದಲ್ಲಿ ಅಭಿನಂದನ ಕಾರ್ಯಕ್ರಮ ಮತ್ತು ಮೆಟ್ರಿಕ್ ಮೇಳ ( ಮಕ್ಕಳ ಸಂತೆ ) ಕಾರ್ಯಕ್ರಮ ಜರಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಸಂತ ದಲಾರಿ ವಹಿಸಿದ್ದರು ಕಾಣಿಯೂರು ಗ್ರಾಮ ಪಂಚಾಯತಿನ ಸದಸ್ಯರು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘ ಚಾರ್ವಾಕ ಇದರ ನೂತನ ಅಧ್ಯಕ್ಷರಾದ ಗಣೇಶ್ ಉದುನಡ್ಕ ಅವರು ಶಾಲಾ ಅಭಿವೃದ್ಧಿಯಲ್ಲಿ ವಹಿಸಿದ್ದ ಮಹತ್ತರ ಕೊಡುಗೆಯನ್ನು ಗುರುತಿಸಿ ಶಾಲಾ ಅಭಿವೃದ್ಧಿ ಸಮಿತಿಯಿಂದ ಅಭಿನಂದಿಸಲಾಯಿತು.ಇದೇ ವೇಳೆ ಮಕ್ಕಳ ಸಂತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ ಮತ್ತು ಗಣೇಶ್ ಉದ್ಧನಡ್ಕ, ಮಕ್ಕಳಿಂದ ತರಕಾರಿ ಖರೀದಿಸುವ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕಾಣಿಯೂರು ಗ್ರಾಮ ಪಂಚಾಯತಿನ ಸದಸ್ಯರಾದ ಸುಲೋಚನ ಮಿಯೋಲ್ಪೆ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕುಸುಮಾವತಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಜಿತ್ ಮಾಚಿಲ, ಮುಖ್ಯ ಗುರುಗಳಾದ ಪದ್ಮಯ ಗೌಡ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಶಾಲಾ ಶಿಕ್ಷಕ ವೃಂದ, ಪೋಷಕರು ಹಾಗೂ ಊರಿನ ಗಣ್ಯರು ಶಾಲಾ ಮಕ್ಕಳು ಭಾಗವಹಿಸಿದ್ದರು. ಈ ಮೆಟ್ರಿಕ್ ಮೇಳದಲ್ಲಿ ಮಕ್ಕಳು ವಿವಿಧ ರೀತಿಯ ತರಕಾರಿ ಹಣ್ಣು ಹಂಪಲುಗಳು ಜ್ಯೂಸ್ ಚರುಂಬುರಿ ವಿವಿಧ ಗಿಡಗಳು ಫ್ಯಾನ್ಸಿ ವಸ್ತುಗಳು ಮನೆಯಲ್ಲಿ ಬೆಳೆದ ತರಕಾರಿ ಮತ್ತು ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿದರು. ತಮ್ಮ ತಮ್ಮ ಸ್ಟಾಲ್ಗಳ ಹೆಸರುಗಳು ಮತ್ತು ದರ ಪಟ್ಟಿಯನ್ನು ನಿಗದಿಪಡಿಸಿದ್ದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ