• 22 ನವೆಂಬರ್ 2024

ರೀ…ಪದದ ಅರ್ಥಕೋಶ, ಇಲ್ಲೊಂದು ಹಾಸ್ಯ ಸುದ್ದಿ😄!.

 ರೀ…ಪದದ ಅರ್ಥಕೋಶ, ಇಲ್ಲೊಂದು ಹಾಸ್ಯ ಸುದ್ದಿ😄!.
Digiqole Ad

ರೀ…ಪದದ ಅರ್ಥಕೋಶ, ಇಲ್ಲೊಂದು ಹಾಸ್ಯ ಸುದ್ದಿ😄!

“ರೀ” ಎಂಬ ಪದದ ಅರ್ಥಪೂರ್ಣ ಅರ್ಥ …. ರೀ ಎಂದು ಕರೆಸಿಕೊಳ್ಳುವ ಅದೃಷ್ಟಶಾಲಿ ಗಂಡಂದಿರಿಗೆ ಮಾತ್ರ

” ರೀ ” ಪದವನ್ನು ಬಳಸುವ ಸಂದರ್ಭಗಳು ಮತ್ತು ಅದರ ವಿಶೇಷ ಅರ್ಥಗಳ ಶಬ್ದ ಕೋಶ.

ಇದನ್ನು ಓದುವ ಗಂಡಂದಿರು ಎಲ್ಲಾ ಸಂದರ್ಭದಲ್ಲೂ ಜಾಗೃತರಾಗಿರಿ….😄

1. ಬಾಗಿಲಿಗೆ ಬಂದು ಹೊರಗಡೆ ನೋಡಿ “ರೀ” ಎಂದು ಕರೆದರೆ ಹೊರಗಡೆ ಯಾರೋ ಹೊಸಬರು ಬಂದಿದ್ದಾರೆ ಎಂದರ್ಥ… ಹೋಗಿ ನೋಡದೆ ಇದ್ದಾಗ ಮತ್ತೆ ರೀ ಬಂದರೆ ಹೋಗಿ ನೋಡಿ ಎಂದರ್ಥ.

2. ಡೈನಿಂಗ್ ಟೇಬಲ್ ಹತ್ತಿರ ನಿಂತು “ರೀ”ಅಂದರೆ ಊಟಕ್ಕೆ ಬನ್ನಿ ಎಂದರ್ಥ..

3. ಊಟ ಮಾಡುವಾಗ “ರೀ” ಅಂದರೆ ಅಡುಗೆಯ ರುಚಿ ಹೇಗಿದೆ ಎಂದರ್ಥ.

4. ತಿಜೋರಿ ಹತ್ತಿರ ನಿಂತುಕೊಂಡು “ರೀ” ಅಂದರೆ ಹಣ ಬೇಕಾಗಿದೆ ಎಂದರ್ಥ.

5. ಕನ್ನಡಿ ಮುಂದೆ ನಿಂತುಕೊಂಡು “ರೀ”ಅಂದರೆ ನಾನು ಹೇಗೆ ಕಾಣುತ್ತಿದ್ದೀನಿ ಎಂದು ಹೇಳಿ ಅನ್ನುವ ಅರ್ಥ. ಏನೂ ಹೇಳದೆ ಸುಮ್ಮನಿದ್ದಾಗ ಮತ್ತೆ “ರೀ” ಬಂದರೆ ಚೆನ್ನಾಗಿ ಕಾಣಿಸುತ್ತಿದ್ದೀಯ ಎಂದು ಹೇಳಿ ಎಂದರ್ಥ.

6. ಸ್ನಾನದ ಕೋಣೆಯಿಂದ ಜೋರಾಗಿ “ರೀ”ಎಂದು ಕರೆದರೆ ಜಿರಲೆ ಅಥವಾ ಹಲ್ಲಿ ಬಂದಿದೆ, ಹೊಡೆದು ಹಾಕಿ ಎಂದರ್ಥ.

7. ಹೊಟೆಲ್ ನಲ್ಲಿ ತಿಂದ ಮೇಲೆ “ರೀ” ಎಂದು ಕರೆದರೆ ಬಿಲ್ಲು ಪಾವತಿಸಿ ಎಂದರ್ಥ.

8. ಕಲ್ಯಾಣ ಮಂಟಪದಲ್ಲಿ “ರೀ”ಎಂದು ಕರೆದರೆ ತಮಗೆ ತಿಳಿದವರು ಬಂದಿದ್ದಾರೆ ಎಂದರ್ಥ.

9. ಬಟ್ಟೆಗಳ ಅಂಗಡಿಯಲ್ಲಿ “ರೀ”ಎಂದು ಕರೆದರೆ ತನಗೆ ಬೇಕಾಗಿರುವ ಬಟ್ಟೆಗಳು ಸಿಕ್ಕಿವೆ ಎಂದರ್ಥ.

10. ಗಾಡಿಯಲ್ಲಿ ಹೋಗುತ್ತಿರುವಾಗ “ರೀ”ಎಂದು ಕರೆದರೆ ಮಲ್ಲಿಗೆ ಹೂವು ಬೇಕು ಎಂದರ್ಥ.

11. ಆಸ್ಪತ್ರೆಗೆ ಹೋದಾಗ “ರೀ” ಎಂದು ಕರೆದರೆ ಡಾಕ್ಟರ್ ಹತ್ತಿರ ನೀವು ಮಾತಾನಾಡುವುದಕ್ಕೆ ಬನ್ನಿ ಎಂದರ್ಥ.

12. ನಡೆಯುತ್ತಿರುವಾಗ “ರೀ” ಎಂದು ಕರೆದರೆ, ಆ ಕಡೆ ಈ ಕಡೆ ನೋಡಬೇಡಿ ಎಂದರ್ಥ.

13. ಪ್ರತಿದಿನ “ರೀ”ಎಂದು ಕರೆದರು ಕೊನೆಯ ಉಸಿರು ತೆಗದುಕೊಳ್ಳುತ್ತಿರುವಾಗ “ರೀ”ಎಂದು ಕರೆದರೆ ನನ್ನ ಜೊತೆಗೆ ನೀವೂ ಬನ್ನಿ ಎಂದರ್ಥ.

ಪ್ರತಿದಿನ “ರೀ”, ಅನ್ನುವ ಶಬ್ದ ಕೇಳಿ ಮೇಲಿನಂತೆ ಅರ್ಥ ಮಾಡಿಕೊಂಡು ಹೊಂದಾಣಿಕೆ ಮಾಡಿಕೊಂಡು, ಜೊತೆಜೊತೆಯಲಿ ಜೀವನ ಸಾಗಿಸಿದರೆ ಜೀವನ ಅನಂದಮಯ ಆಗಿರುತ್ತದೆ.😄ಅಲ್ಲವೇ

ಬರಹ:ಯಶಸ್.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ