ಇಂದು 40 ಮನೆಗಳನ್ನು ಬೆಳಗುತ್ತಿದ್ದ ದೀಪ ಆರಿದ ದಿನ
ಇಂದು 40 ಮನೆಗಳನ್ನು ಬೆಳಗುತ್ತಿದ್ದ ದೀಪ ಆರಿದ ದಿನ..!
ಅದು 40 ಮನೆಗಳನ್ನು ಬೆಳಗುತ್ತಿದ್ದ ದೀಪ ಆರಿದ ದಿನ. ದೇಶದ ಕಣ್ಣುಗಳಲ್ಲಿ ಆಕ್ರೋಶ ತುಂಬಿ, ದುಃಖ ಉಮ್ಮಳಿಸಿ ಬಂದ ದಿನ. ರಕ್ತನಾಳಗಳಲ್ಲಿ ಬಿಸಿ ರಕ್ತ ಜಿನುಗುತ್ತಿದ್ದರೂ, 40 ವೀರ ಯೋಧರ ಛಿದ್ರ ಛಿದ್ರ ದೇಹಗಳನ್ನು ಕಂಡಾಗ ಕಣ್ಣೀರು ಧರೆ ಮುಟ್ಟಿದ ದಿನ. ಹೌದು ಅದುವೇ ಪುಲ್ವಾಮ ಕರಾಳ ದಿನ.019 ರಲ್ಲಿ ನಡೆದ ಈ ದಾಳಿಯಲ್ಲಿ ಭಾರತಾಂಬೆಯ 40 ವೀರ ಪುತ್ರರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದರು. ಆತ್ಮಹತ್ಯಾ ಬಾಂಬರ್ ಸ್ಫೋಟಕಗಳನ್ನು ತುಂಬಿದ ವಾಹನ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿತ್ತು.
ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಪ್ರದೇಶದ ಅವಂತಿಪೊರ್ ಬಳಿ ಕಾರೊಂದರಲ್ಲಿ ಅಪಾರ ಪ್ರಮಾಣದ ಸ್ಫೋಟಕ ತುಂಬಿಕೊಂಡು ಬಂದಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ದಾಳಿಕೋರ ಆದಿಲ್ ಅಹ್ಮದ್ ದಾರ್ ಎಂಬಾತ ಸಿಆರ್‌ಪಿಎಫ್ ಸೈನಿಕರ ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದು 40 ಯೋಧರ ಸಾವಿಗೆ ಕಾರಣನಾದ. ಘಟನೆ ವೇಳೆ ಒಟ್ಟು 70 ಆರ್ಮಿ ಟ್ರಕ್ ಗಳಲ್ಲಿ 2500 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದರು.
ಈ ಭೀಕರ ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತವು ಫೆಬ್ರವರಿ 26 ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಬಾಲಾಕೋಟ್ ಪ್ರದೇಶದಲ್ಲಿದ್ದ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಪರಿಣಾಮ ಅಪಾರ ಸಂಖ್ಯೆಯಲ್ಲಿ ಜೈಶ್ ಜೈಷ್-ಎ-ಮೊಹಮ್ಮದ್ ಸಂಘಟನೆಯ 300ಕ್ಕೂ ಹೆಚ್ಚು ಉಗ್ರಗಾಮಿಗಳು ಸತ್ತಿದ್ದಾರೆ ಎಂದು ಭಾರತ ಹೇಳಿತ್ತು. ಆದರೆ, ಪಾಕಿಸ್ತಾನ ಮಾತ್ರ ಬಾಲಾಕೋಟ್ ದಾಳಿಯಲ್ಲಿ ಯಾರೊಬ್ಬರು ಮೃತಪಟ್ಟಿಲ್ಲ ಎಂದು ವಾದಿಸಿತ್ತು.
ದಾಳಿಯ ಪರಿಣಾಮವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತು. ಭಾರತವು ತನ್ನ ಅತ್ಯಂತ ಆದ್ಯತೆಯ ರಾಷ್ಟ್ರವಾಗಿ ಪಾಕಿಸ್ತಾನದ ಸ್ಥಾನಮಾನವನ್ನು ತೆಗೆದುಹಾಕಿತು. ಭಾರತಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಪಾಕಿಸ್ತಾನಿ ಸರಕುಗಳ ಮೇಲಿನ ಕಸ್ಟಮ್ಸ್ ಹೆಚ್ಚಿಸಲಾಯಿತು. ಭಾರತದ ಸರ್ಕಾರದ ಪ್ರಕಾರ, ಪಾಕಿಸ್ತಾನವನ್ನು ಮನಿ ಲಾಂಡರಿಂಗ್ (ಎಫ್‌ಎಟಿಎಫ್) ಕಪ್ಪುಪಟ್ಟಿಗೆ ಹಣಕಾಸು ಆಕ್ಷನ್ ಟಾಸ್ಕ್ ಫೋರ್ಸ್ ಸೇರಿಸಬೇಕು. ಜಮ್ಮು ಮತ್ತು ಕಾಶ್ಮೀರ ಆಡಳಿತವು ಫೆಬ್ರವರಿ 17 ರಂದು ಪ್ರತ್ಯೇಕತಾವಾದಿ ನಾಯಕರ ಭದ್ರತಾ ಕ್ರಮಗಳನ್ನು ಕೊನೆಗೊಳಿಸಿತು.
ಫೆಬ್ರವರಿ 26, 2019 ರಂದು, 0330 ಗಂಟೆಗಳಲ್ಲಿ, ಮಿರಾಜ್ 2000 ಭಾರತೀಯ ವಾಯುಪಡೆಯ ಫೈಟರ್ ಜೆಟ್‌ಗಳ ಗುಂಪು ಎಲ್ಒಸಿಯಾದ್ಯಂತ ಜೆಎಂನ ಪ್ರಮುಖ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು.