• 8 ಸೆಪ್ಟೆಂಬರ್ 2024

ನಾ ಕಂಡ ವಿಶ್ವದ ತುತ್ತ ತುದಿ : P.N GANESH

 ನಾ ಕಂಡ ವಿಶ್ವದ ತುತ್ತ ತುದಿ : P.N GANESH
Digiqole Ad

ನಾ ಕಂಡ ವಿಶ್ವದ ತುತ್ತ ತುದಿ : P.N GANESH

ಸಾಹಸಿಗರ ಮನೆ ದೇವರು ,

ಅವಮಾನ ಮಾಡುವವರು ಗುರಿಯೆಡೆಗೆ ಹೊರಟಾಗ ತಡೆ ಒಡ್ಡುವವರು

         – ಪಿ.ಎನ್ ಗಣೇಶ್

ಈ ಸೂಕ್ತಿಯನ್ನು ಓದಿದಾಗ ಓದುಗರಿಗೆ ಸೋಜಿಗ ಆಗಬಹುದು. ನನ್ನ ಜೀವನದ ಸಾಹಸಗಾಥೆಯಲ್ಲಿ ಈ ಸೂಕ್ತಿಯನ್ನು ಅಕ್ಷರಶಃ ಸತ್ಯ.

ವಿದೇಶದಲ್ಲಿ ಒಂದು ನಾಣ್ಣುಡಿಯು ಚಾಲ್ತಿಯಲ್ಲಿದೆ.(ಪರ್ವತಗಳು ಆರೋಹಿಗಳನ್ನು ತಾನಾಗಿಯೇ ಆಯ್ಕೆ ಮಾಡಿಕೊಳ್ಳುತ್ತದೆ ).ಇದಕ್ಕೆ ‘mountain call’ ಎಂದು ಕರೆಯುತ್ತಾರೆ.ಈ ನಾಣ್ಣುಡಿಗೆ ಪರ್ವತಾರೋಹಣದಲ್ಲಿ ನನ್ನ ಪ್ರತಿ ಹೆಜ್ಜೆಯ ಗುರುತುಗಳು ಇದಕ್ಕೆ ಪ್ರತ್ಯೇಕ ಸಾಕ್ಷಿಯಾಗಿದೆ.

ಕ್ರೀಡೆಯಲ್ಲಿ ಹಲವಾರು ಮಾದರಿಗಳಿವೆ. ಕೆಲವೊಂದು ಕ್ರೀಡೆಗೆ ದೈಹಿಕ ಸಾಮರ್ಥ್ಯಗಳು ಇದ್ದರೆ ಸಾಕು ಇನ್ನು ಕೆಲವು ಕ್ರೀಡೆಗಳಿಗೆ ಬುದ್ಧಿವಂತಿಕೆ ಚಾಕ ಚಕ್ಯತೆ ಇದ್ದರೆ ಸಾಕು. ಕ್ರೀಡಾಪಟುಗಳು ಕ್ರೀಡೆಯನ್ನು ಆಯ್ಕೆ ಮಾಡುವಾಗ ತಮ್ಮ ಸಂಪನ್ಮೂಲಗಳನ್ನು ಹಾಗೂ ತಮಗೆ ಸಿಗುವ ಪ್ರೋತ್ಸಾಹಕ್ಕೆ ಅನುಗುಣವಾಗಿ ಕ್ರೀಡೆಗಳಲ್ಲಿ ತೊಡಗಿಸಿ ಕೊಳ್ಳುತ್ತಾರೆ ಆದರೆ ಈ ಸಾಹಸ ಕ್ರೀಡೆಗಳಿಗೆ ಯಾರು ಪ್ರೋತ್ಸಾಹವನ್ನು ಕೊಡುವುದಿಲ್ಲ ಹಾಗೂ ಯಥೇಚ್ಛವಾಗಿ ಸಂಪನ್ಮೂಲಗಳು ಬೇಕಾಗುತ್ತದೆ. ಜೊತೆಗೆ ಪ್ರಾಣಪಾಯವು ಹೆಜ್ಜೆ ಹೆಜ್ಜೆಗೂ ಪರ್ವತಾರೋಹಿಗಳನ್ನು ಬೆಂಬಿಡದ ಬೇತಾಳನಂತೆ ಜೊತೆಗೆ ಹಿಂಬಾಲಿಸುತ್ತದೆ ಈ ಅಸೀಮ ಸಾಹಸ ಕ್ರೀಡೆಗೆ ನಮ್ಮ ದೇಶದಲ್ಲಿ ಯಾವುದೇ ರೀತಿಯ ಪ್ರೋತ್ಸಾಹವಾಗಲಿ ಬೆಂಬಲವಾಗಲಿ, ಕಿಂಚಿತ್ತು ಇರುವುದಿಲ್ಲ .

ಸಮುದ್ರ ತಟದಲ್ಲಿ ಹುಟ್ಟಿದವನಾದ ನಾನು ವಿಶ್ವದ ತುತ್ತ ತುದಿಯನ್ನು ಮುಟ್ಟಲು ಎದುರಿಸಿದ ಯಶೋಗಾಥೆಯ ಅನುಭವಗಳನ್ನು ತಮ್ಮಲ್ಲಿ ಹಂಚಿಕೊಳ್ಳಲು ಪ್ರತೀ ವಾರ ಮತ್ತೆ ಭೇಟಿಯಾಗಲು ಕಥೆಯ ರೂಪದಲ್ಲಿ ಮತ್ತೆ ಬರುತ್ತೇನೆ…

ಪಿ. ಎನ್ .ಗಣೇಶ್

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ