• 8 ಸೆಪ್ಟೆಂಬರ್ 2024

ಸಂತ ಜೆರೊಸಾ ಶಾಲೆ ಘಟನೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿಕ್ಷಕಿ ವಜಾ!

 ಸಂತ ಜೆರೊಸಾ ಶಾಲೆ ಘಟನೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿಕ್ಷಕಿ ವಜಾ!
Digiqole Ad

ಸಂತ ಜೆರೊಸಾ ಶಾಲೆ ಘಟನೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿಕ್ಷಕಿ ವಜಾ?

ಮಂಗಳೂರು:ಹಿಂದು ಧರ್ಮ ಹಾಗೂ ಶ್ರೀರಾಮನ ಅವಹೇಳನ ಮಾಡಿದ್ದ ಸಂತ ಜೆರೊಸಾ ಶಾಲೆ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದ್ದರಿಂದ ಇತ್ತೀಚೆಗೆ ಅವರನ್ನು ಅಮಾನತು ಮಾಡಲಾಗಿತ್ತು.ಕವಿತಾ ಅವರ ಮಗಳು ಸಂತ ಜೆರೊಸಾ ಶಾಲೆಯ ವಿದ್ಯಾರ್ಥಿನಿ. ಫೆ.10ರಂದು ಡಿಡಿಪಿಐ ಕಚೇರಿಗೆ ಬಂದಿದ್ದ ಶಿಕ್ಷಕಿ ಕವಿತಾ, ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದರು. ಅವರು ಮಾತನಾಡಿದ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಅಷ್ಟಕ್ಕೇ ಶಿಕ್ಷಕಿ ಹುದ್ದೆಯಿಂದಲೇ ಕವಿತಾರನ್ನು ಆಡಳಿತ ಮಂಡಳಿ ವಜಾಗೊಳಿಸಿರುವ ಆರೋಪ ಕೇಳಿಬಂದಿದೆ.

ಶಿಕ್ಷಕಿಗೆ ಬೆದರಿಕೆ ಕರೆ!

ತೊಕ್ಕೊಟ್ಟುವಿನ ಸಂತ ಸೆಬಾಸ್ಟಿಯನ್ ಶಾಲೆಯಲ್ಲಿ ಕವಿತಾ ಪ್ರಾಥಮಿಕ ತರಗತಿ ಶಿಕ್ಷಕಿಯಾಗಿದ್ದಾರೆ. ನಿಮ್ಮ ಸೇವೆ ಇನ್ನು ಅಗತ್ಯ ಇಲ್ಲ ಎಂದು ಅವರಿಗೆ ಶಾಲೆಯಿಂದ ಗೇಟ್ ಪಾಸ್ ನೀಡಲಾಗಿದೆ. ಆ ಬಳಿಕ ಕವಿತಾ ಅವರ ಮೊಬೈಲ್‌ಗೆ ವಿದೇಶದಿಂದ ನಿರಂತರ ಬೆದರಿಕೆ ಕರೆಗಳು ಬಂದಿದ್ದು, ಅವ್ಯಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಗೆ ಶಿಕ್ಷಕಿ ದೂರು ನೀಡಿದ್ದಾರೆ.

 

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ