• 8 ಸೆಪ್ಟೆಂಬರ್ 2024

ಮುಖದಲ್ಲಿ ನಗು ಹೆಚ್ಚು ಇರಲೆಂದು ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಮರಣ ಹೊಂದಿದ ವ್ಯಕ್ತಿ

 ಮುಖದಲ್ಲಿ ನಗು ಹೆಚ್ಚು ಇರಲೆಂದು ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಮರಣ ಹೊಂದಿದ ವ್ಯಕ್ತಿ
Digiqole Ad

ಮುಖದಲ್ಲಿ ನಗು ಹೆಚ್ಚು ಇರಲೆಂದು ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಮರಣ ಹೊಂದಿದ ವ್ಯಕ್ತಿ

ನಗುವನ್ನು ಹೆಚ್ಚಿಸಲು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದ ವ್ಯಕ್ತಿ ಜೀವ ಕಳೆದುಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಫೆಬ್ರವರಿ 16ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್‌ನ್ಯಾಶನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ , 28 ವರ್ಷದ ಲಕ್ಷ್ಮೀ ನಾರಾಯಣ ವಿಂಜಮ್‌ ಎಂಬ ವ್ಯಕ್ತಿ ‘ಸ್ಮೈಲ್ ಡಿಸೈನಿಂಗ್’ ಚಿಕಿತ್ಸೆಗೆ ಒಳಗಾಗುವಾಗ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೀ ನಾರಾಯಣ ವಿಂಜಮ್‌ ಅನಸ್ತೇಶಿಯಾ ಒವರ್‌ಡೋಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮುಲು ವಿಂಜಮ್‌, ಶಸ್ತ್ರ ಚಿಕಿತ್ಸೆ ವೇಳೆ ಲಕ್ಷ್ಮೀ ನಾರಾಯಣ ಪ್ರಜ್ಞೆ ತಪ್ಪಿದೆ ತಕ್ಷಣ ಆಸ್ಪತ್ರೆಗೆ ಕರೆ ಮಾಡಿದಾಗ ಸಿಬ್ಬಂದಿ ಕರೆ ಮಾಡಿ ಕ್ಲಿನಿಕ್‌ಗೆ ಬರುವಂತೆ ಹೇಳಿದರು. ತಕ್ಷಣವೇ ಹೋಗಿ ಮಗನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದರು. ಶಸ್ತ್ರ ಚಿಕಿತ್ಸೆ ಬಗ್ಗೆ ಮಗ ನಮಗೆ ಮಾಹಿತಿ ನೀಡಿರಲಿಲ್ಲ ಆತನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವನ ಸಾವಿಗೆ ವೈದ್ಯರೇ ನೇರ ಕಾರಣ ಮೃತರ ಪೋಷಕರು ಆರೋಪಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ