• 8 ಸೆಪ್ಟೆಂಬರ್ 2024

ಪಡಿತರ ಚೀಟಿಗೆ ನೇರ ಹಣ ವರ್ಗಾವಣೆ ಹೇಗೆ?

 ಪಡಿತರ ಚೀಟಿಗೆ ನೇರ ಹಣ ವರ್ಗಾವಣೆ ಹೇಗೆ?
Digiqole Ad

ಪಡಿತರ ಚೀಟಿಗೆ ನೇರ ಹಣ ವರ್ಗಾವಣೆ ಹೇಗೆ?

ಪಡಿತರ ಚೀಟಿಗಳಿಗೆ ನೇರ ನಗದು ವರ್ಗಾವಣೆ(ಡಿಬಿಟಿ) ಹಣ ಬಾರದೇ ಇರುವ ಪಡಿತರ ಚೀಟಿದಾರರ, ನೇರ ನಗದು ವರ್ಗಾವಣೆ (ಡಿಬಿಟಿ) ಹಣ ಬರಲು ಈ ಸೂತ್ರಗಳನ್ನು ಅಳವಡಿಸುವಂತೆ ಆಹಾರ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ

1. ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯಲ್ಲಿನ ಕುಟುಂಬ ಮುಖ್ಯಸ್ಥರ ಹೆಸರು ಅವರ ಆಧಾರ ಕಾರ್ಡ ಹೆಸರು ಸರಿಯಾಗಿದೆಯೇ ಪರೀಕ್ಷಿಸಿಕೊಳ್ಳುವುದು ಇಲ್ಲವಾದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ E-KYC ಕಡ್ಡಾಯವಾಗಿ ಮಾಡಿಸುವುದು.

2. ಪಡಿತರ ಚೀಟಿಯಲ್ಲಿನ ಮುಖ್ಯಸ್ಥರ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗೆ ಆಧಾರ ಜೋಡಣೆ ಮಾಡಿಸುವುದು ಕಡ್ಡಾಯ. ಬ್ಯಾಂಕ್ ನಲ್ಲಿ ಖಾತೆಗೆ E-KYC ಮಾಡಿಕೊಂಡು ಬ್ಯಾಂಕ್ ನಲ್ಲಿ ತಮ್ಮ ಖಾತೆಗೆ N.P.C.I ಲಿಂಕ್ ಮಾಡಿಸುವುದು ಕೂಡ ಕಡ್ಡಾಯವಾಗಿದೆ.

3. ಬ್ಯಾಂಕ್ ಖಾತೆ ಸರಿಯಿಲ್ಲದಿದ್ದರೆ ಹೊಸದಾಗಿ ಅಂಚೆ ಕಚೇರಿ (POST OFFICE) & IPPB ಬ್ಯಾಂಕ್ ಖಾತೆ/ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಖಾತೆ ತೆರೆಯುವುದು ಈ ರೀತಿ ಮಾಡುವುದರಿಂದ ಸವಲತ್ತುಗಳನ್ನು ಪಡೆಯಬಹುದೆಂದು ತಿಳಿಸಿದೆ.

Digiqole Ad

ಈ ಸುದ್ದಿಗಳನ್ನೂ ಓದಿ