• 8 ಸೆಪ್ಟೆಂಬರ್ 2024

ಅಮೆಜಾನ್ ಕಾಡಿನಲ್ಲಿ ಜಗತ್ತಿನಲ್ ದೈತ್ಯ ಅನಕೊಂಡ ಹಾವು ಪತ್ತೆ, ಈ ಪ್ರಭೇದ ತುಂಬಾ ಕಡಿಮೆ ಅಂತೆ !

 ಅಮೆಜಾನ್ ಕಾಡಿನಲ್ಲಿ ಜಗತ್ತಿನಲ್ ದೈತ್ಯ ಅನಕೊಂಡ ಹಾವು ಪತ್ತೆ, ಈ ಪ್ರಭೇದ ತುಂಬಾ ಕಡಿಮೆ ಅಂತೆ !
Digiqole Ad

ಅಮೆಜಾನ್ ಕಾಡಿನಲ್ಲಿ ಜಗತ್ತಿನಲ್ ದೈತ್ಯ ಅನಕೊಂಡ ಹಾವು ಪತ್ತೆ, ಈ ಪ್ರಭೇದ ತುಂಬಾ ಕಡಿಮೆ ಅಂತೆ !

ಅಮೆಜಾನ್ ಕಾಡಿನಲ್ಲಿ ಅನಕೊಂಡ ಹಾವಿನ ಜಾತಿಗೆ ಸೇರಿದ ವಿಶ್ವದ ಅತೀ ದೈತ್ಯ ಗಾತ್ರದ ಹಾವು ಪತ್ತೆಯಾಗಿದೆ. ಅತೀ ವಿರಳವಾಗಿರುವ ಈ ಹಾವು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ಈಗಾಗಲೇ ಪತ್ತೆಯಾಗಿರುವ ಅನಕೊಂಡ ಹಾವಿಗೆ ಹೋಲಿಸಿದರೆ ದುಪ್ಪಟ್ಟ ದೊಡ್ಡದಾಗಿದೆ.

ಅಮೆಜಾನ್ ಮಳೆ ಕಾಡು ವಿಶ್ವದ ಅತೀ ದೊಡ್ಡ ಸಸ್ಯ ಸಂಕಲು ಹಾಗೂ ಪ್ರಾಣಿಸಂಕುಲದ ಆಗರ. ಅಧ್ಯಯನ, ಸಂಶೋಧನೆ ನಡೆಸಿದಷ್ಟು ಹೊಸ ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಿದೆ. ಇದೀಗ ಇದೇ ಅಮೆಜಾನ್ ಕಾಡಿನಲ್ಲಿ ದೈತ್ಯ ಗಾತ್ರದ ಹಾವು ಪತ್ತೆಯಾಗಿದೆ. ಅನಕೊಂಡ ಹಾವಿನ ಪ್ರಬೇಧಕ್ಕೆ ಸೇರಿದ ಈ ಹಾವುಗಳು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ಆದರೆ ಗಾತ್ರದಲ್ಲಿ ಅನಕೊಂಡ ಹಾವಿನ ದುಪ್ಪಟ್ಟ ಗಾತ್ರ ಹೊಂದಿದ್ದು, ಇದು ವಿಶ್ವದಲ್ಲೇ ಇದುವರೆಗೆ ಪತ್ತೆಯಾಗಿರುವ ದೈತ್ಯ ಗಾತ್ರದ ಹಾವು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ .

ದಕ್ಷಿಣ ಹಸಿರು ಅನಕೊಂಡ ಹಾವಿನ ಮೇಲೆ ಅನಕೊಂಡ ಚಲನಚಿತ್ರ ಕೂಡ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಪತ್ತೆಯಾಗಿರುವುದು ಗ್ರೀನ್ ಅನಕೊಂಡ. ನ್ಯಾಷನಲ್ ಜಿಯೋಗ್ರಫಿ ವಾಹನಿ ಅಮೆಜಾನ್ ಕಾಡಿನಲ್ಲಿ ನಡೆಸುತ್ತಿದ್ದ ವಿಡಿಯೋ ಚಿತ್ರೀಕರಣದ ವೇಳೆ ದೈತ್ಯ ಹಾವು ಪತ್ತೆಯಾಗಿದೆ. ಶೂಟಿಂಗ್ ವೇಳೆ ಆಮೇಜಾನ್ ಕಾರಿನ ನದಿಯ ತಳಬಾಗದಲ್ಲಿ ಅತೀ ಉದ್ದನೆಯ ಈ ಅನಕೊಂಡ ಗ್ರೀನ್ ಹಾವು ಪತ್ತೆಯಾಗಿದೆ. ಹಿಂಬಾಗದಿಂದ ಹಾವಿನ ತಲೆವರೆಗಿನ ವಿಡಿಯೋ ಲಭ್ಯವಿದೆ. ಅತೀ ದೊಡ್ಡ ಗಾತ್ರದ ಈ ಹಾವು ನೀರಿನ ಪ್ರದೇಶದಲ್ಲೇ ಹಚ್ಚಾಗಿ ವಾಸವಿರುತ್ತದೆ. ನೀರಿನಲ್ಲಿ ಚಲಿಸುವುದು, ಆಹಾರ ಹುಡುಕುವುದು ಸುಲಭವಾಗಿದೆ. ಬೂ ಪ್ರದೇಶದಲ್ಲಿ ಹಾವಿನ ಮೇಲೆ ಇತರ ದೈತ್ಯ ಪ್ರಾಣಿಗಳಿಂದ ದಾಳಿಯಾಗುವ ಸಾಧ್ಯತೆ ಹೆಚ್ಚು.

ಈ ಹಾವಿನ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅತೀ ಉದ್ದನೆಯ ಹಾವು ಇದಾಗಿದ್ದು, 500 ಕೆಜಿಗೂ ಹೆಚ್ಚಿನ ತೂಕವಿದೆ ಎಂದು ಅಂದಾಜಿಸಲಾಗಿದೆ. 26ಅಡಿಗೂ ಹೆಚ್ಚ ಉದ್ದ ಹೊಂದಿದೆ. ಇಷ್ಟು ದೊಡ್ಡ ಗಾತ್ರದ ಹಾವು ಇದುವರೆಗೂ ಪತ್ತೆಯಾಗಿಲ್ಲ. ಒಂದೇ ಹಾವು ಪತ್ತೆಯಾಗಿದೆ. ಹೀಗಾಗಿ ಇದು ಅತೀ ವಿರಳ ಹಾವಿನ ಪ್ರಬೇಧ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮೊದಲು ಪತ್ತೆಯಾಗಿರುವ ದಕ್ಷಿಣ ಗ್ರೀನ್ ಅನಕೊಂಡ ಹಾವುಗಳು ಅಮೆಜಾನ್ ಮಳೆ ಕಾಡಿನ ಬ್ರೆಜಿಲ್ ಬಾಗ, ಪೆರು, ಬೊಲಿವಿಯಾ, ಫ್ರೆಂಚ್ ಗೈನಾಗಳಲ್ಲಿ ಕಾಣಿಸಿಕೊಂಡಿದೆ. ಇನ್ನು ಉತ್ತರ ಭಾಗಗಳಾದ ಈಕ್ವೆಡಾರ್, ಕೊಲಂಬಿಯಾ ವೆನಿಜುವೆಲಾ, ಗಯಾನ ಭಾಗದಲ್ಲೂ ಕಾಣಿಸಿಕೊಂಡಿದೆ.

Digiqole Ad

ಈ ಸುದ್ದಿಗಳನ್ನೂ ಓದಿ