ಸಿಪಿಎಂ ಕಾರ್ಯಕರ್ತನ ಬರ್ಬರ ಕೊಲೆ!
ಸಿಪಿಎಂ ಕಾರ್ಯಕರ್ತನ ಬರ್ಬರ ಕೊಲೆ!
ಕೇರಳದ ಕೋಯಿಕ್ಕೋಡ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಪಿಎಂ ಕಾರ್ಯಕರ್ತನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ವೈಯಕ್ತಿಕ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.ಮೃತರನ್ನು ಪಿ.ವಿ.ಸತ್ಯನಾಥನ್ ಎಂದು ಗುರುತಿಸಲಾಗಿದ್ದು, ಸಿಪಿಐಎಂ ಕೊಯಿಲಾಂಡಿ ಕೇಂದ್ರ ಸ್ಥಳೀಯ ಸಮಿತಿ ಕಾರ್ಯದರ್ಶಿಯಾಗಿದ್ದರು.
ಕಳೆದ ರಾತ್ರಿ ಕೋಯಿಕ್ಕೋಡ್ನ ಕೊಯಿಲಾಂಡಿಯ ಚೆರಿಯಪುರಂ ದೇವಸ್ಥಾನದಲ್ಲಿ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಅವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಲಾಯಿತು.
#Breaking: CPM's #PVSathyanathan was hacked to death, reportedly with an axe in a Kerala temple.
In protest, CPI(M) has declared a bandh in Koyilandi today.
The incident happened during a musical festival. The police suggest that it was a result of personal enmity. -… pic.twitter.com/2Bd78NXBrU
— TIMES NOW (@TimesNow) February 23, 2024
ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದ ದೇವಾಲಯದ ಉತ್ಸವದ ಸಂದರ್ಭದಲ್ಲಿ ಸಿಪಿಐಎಂ ಸ್ಥಳೀಯ ನಾಯಕನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೋಯಿಕ್ಕೋಡ್ನ ಕೊಯಿಲಾಂಡಿಯಲ್ಲಿರುವ ಚೆರಿಯಪುರಂ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪಿ.ವಿ.ಸತ್ಯನಾಥನ್ ಎಂದು ಗುರುತಿಸಲಾಗಿದ್ದು, ಸಿಪಿಐಎಂ ಕೊಯಿಲಾಂಡಿ ಕೇಂದ್ರ ಸ್ಥಳೀಯ ಸಮಿತಿ ಕಾರ್ಯದರ್ಶಿಯಾಗಿದ್ದರು.
ದೇವಾಲಯದ ಉತ್ಸವದಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮದ ಸಮಯದಲ್ಲಿ ಈ ಘಟನೆ ನಡೆದಿದೆ. ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಸಿಪಿಐಎಂ ಇಂದು ಕೊಯಿಲಾಂಡಿಯಲ್ಲಿ ಬಂದ್ ಘೋಷಿಸಿದೆ ಎಂದು ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಪಿ ಮೋಹನನ್ ತಿಳಿಸಿದ್ದಾರೆ.