• 22 ನವೆಂಬರ್ 2024

ಭೂಸೇನೆ ಅಗ್ನಿವೀರರ ನೇಮಕ: ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭ, ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

 ಭೂಸೇನೆ ಅಗ್ನಿವೀರರ ನೇಮಕ: ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭ, ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
Digiqole Ad

ಭೂಸೇನೆ ಅಗ್ನಿವೀರರ ನೇಮಕ: ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭ, ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

2024ನೇ ಸಾಲಿನ ಅಗ್ನಿವೀರರ ನೇಮಕಾತಿಗೆ ಸಂಬಂಧಿಸಿದಂತೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದ್ದು, ಅರ್ಜಿ ಸ್ವೀಕಾರ ಆರಂಭವಾಗಿದೆ. ಈ ಹುದ್ದೆಗಳನ್ನು ಜೆನೆರಲ್‌ ಡ್ಯೂಟಿ, ಟ್ರೇಡ್ಸ್‌ಮನ್‌, ಟೆಕ್ನಿಕಲ್ ಕ್ಲರ್ಕ್‌, ಸ್ಟೋರ್ ಕೀಪರ್ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

2024ನೇ ಸಾಲಿನ ಭಾರತೀಯ ಭೂಸೇನೆ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭವಾಗಿದ್ದು, ಮಾರ್ಚ್‌ 22 ರವರೆಗೆ ಅರ್ಜಿ ಹಾಕಬಹುದು. ನಾಲ್ಕು ವರ್ಷದ ಈ ಹುದ್ದೆಯ ಸಂದರ್ಭದಲ್ಲಿ ಮಾಸಿಕ ವೇತನದ ಜತೆಗೆ ಆಸಕ್ತಿಯುಳ್ಳ ಡಿಗ್ರಿ ಕೋರ್ಸ್‌ ಅನ್ನು ಅಧ್ಯಯನ ಮಾಡಲು ಅವಕಾಶ ಸಿಗುತ್ತದೆ. ಅಲ್ಲದೇ ಹುದ್ದೆಯ ಅವಧಿ ಮುಗಿದ ನಂತರ ಅಂದರೆ ನಿವೃತ್ತಿ ಸಮಯದಲ್ಲಿ ಒಟ್ಟು 11.70 ಲಕ್ಷ ರೂ ನಿವೃತ್ತಿಯ ಪ್ಯಾಕೇಜ್ ಸಿಗಲಿದೆ. ಆಸಕ್ತಿಯುಳ್ಳವರು ವಿವಿಧ ಅರ್ಹತೆಯ ಆಧಾರದಲ್ಲಿ ಸೇವೆಯನ್ನು ಮುಂದುವರೆಸಲು ಸಹ ಅವಕಾಶ ಸಿಗುತ್ತದೆ. ಈ ಸದರಿ ಹುದ್ದೆಗಳಿಗೆ ಅರ್ಜಿ ಹಾಕಲು ಇತರೆ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಯಿರಿ. ಭೂಸೇನೆ ಅಗ್ನಿವೀರರನ್ನು ಜೆನೆರಲ್ ಡ್ಯೂಟಿ, ಟೆಕ್ನಿಕಲ್ (ಏವಿಯೇಷನ್ / ಅಮ್ಯುನಿಷನ್ ಎಕ್ಸಾಮಿನರ್), ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ಟ್ರೇಡ್ಸ್‌ಮನ್ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ.

 

ಭೂಸೇನೆ ಅಗ್ನಿವೀರರಿಗೆ ವಿಭಾಗವಾರು ವಿದ್ಯಾರ್ಹತೆ ಅಗ್ನಿವೀರ್ ಜೆನೆರಲ್ ಡ್ಯೂಟಿ : 10 ನೇ ತರಗತಿಯನ್ನು ಕನಿಷ್ಠ ಶೇ.45 ಅಂಕಗಳೊಂದಿಗೆ, ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ / ಅಮ್ಯುನಿಷನ್ ಎಕ್ಸಾಮಿನರ್): ವಿಜ್ಞಾನ (ಫಿಸಿಕ್ಸ್‌, ಮ್ಯಾಥ್ಸ್‌, ಕೆಮಿಸ್ಟ್ರಿ, ಇಂಗ್ಲಿಷ್‌ ) ದ್ವಿತೀಯ ಪಿಯು (12ನೇ ತರಗತಿ) ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.40 ಅಂಕಗಳನ್ನು ಪಡೆದಿರಬೇಕು.

ಅಗ್ನಿವೀರ್ ಕ್ಲರ್ಕ್: ಯಾವುದೇ ಪಿಯುಸಿ ಅನ್ನು ಶೇ.60 ಅಂಕಗಳೊಂದಿಗೆ (ಸೈನ್ಸ್‌, ಕಲಾ, ಕಾಮರ್ಸ್‌), ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಗ್ನಿವೀರ್ ಸ್ಟೋರ್ ಕೀಪರ್ ಟೆಕ್ನಿಕಲ್ : ಯಾವುದೇ ಪಿಯುಸಿ ಅನ್ನು ಶೇ.60 ಅಂಕಗಳೊಂದಿಗೆ (ಸೈನ್ಸ್‌, ಕಲಾ, ಕಾಮರ್ಸ್‌), ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಗ್ನಿವೀರ್ ಟ್ರೇಡ್ಸ್‌ಮನ್ : ಅಗ್ನಿವೀರ್ ಟ್ರೇಡ್ಸ್‌ಮನ್‌ ಹುದ್ದೆಗಳು 8ನೇ ತರಗತಿ ಪಾಸಾದವರಿಗೆ ಹಾಗೂ 10ನೇ ತರಗತಿ ಪಾಸಾದವರಿಗೆ ಇಬ್ಬರಿಗೂ ಲಭ್ಯ ಇವೆ. ಸಿಂಪಲ್‌ ಪಾಸ್‌ ಆಗಿದ್ದರೂ ಪರವಾಗಿಲ್ಲ. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳನ್ನು ಪಡೆದಿರಬೇಕು. ಅಗ್ನಿವೀರರ ನೇಮಕ 2024 : ಪ್ರಮುಖ ದಿನಾಂಕಗಳು

ಅರ್ಜಿ ಸ್ವೀಕಾರ ಆರಂಭ ದಿನಾಂಕ : 13-02-2024

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-03-2024

ಅಗ್ನಿವೀರ್ ಹುದ್ದೆಗೆ ಆನ್‌ಲೈನ್‌ ಪರೀಕ್ಷೆ ದಿನಾಂಕ : 22-04-2024 ಅಗ್ನಿವೀರರ ಹುದ್ದೆಗೆ ವಯಸ್ಸಿನ ಅರ್ಹತೆಗಳು

ಅಗ್ನಿವೀರರ ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ 17.5 ವರ್ಷ ಆಗಿರಬೇಕು, ಗರಿಷ್ಠ ವಯೋಮಿತಿ 21 ವರ್ಷ ಮೀರಿರಬಾರದು. ಇತರೆ ಅರ್ಹತೆಗಳು

– ಎನ್‌ಸಿಸಿ ಕೋಟಾ ಪರಿಗಣಿಸಲಾಗುತ್ತದೆ.

– ಕ್ರೀಡಾ ಕೋಟಾ ಪರಿಗಣಿಸಲಾಗುತ್ತದೆ.

ಅಗ್ನಿವೀರರ ಹುದ್ದೆಗೆ ಆಯ್ಕೆ ಪ್ರಕ್ರಿಯೆಗಳುಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಇರುತ್ತವೆ. ಭೂಸೇನೆ ಅಗ್ನಿವೀರರಿಗೆ ವೇತನ ಮತ್ತು ಭತ್ಯೆಗಳು

ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.

ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.

ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.

ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು ಅಗ್ನಿವೀರ್ ಹುದ್ದೆಗೆ ನೀಡುವ ಸೇವಾ ನಿಧಿ ಪ್ಯಾಕೇಜ್, ಇತರೆ ಭತ್ಯೆಗಳ ಮಾಹಿತಿ

– ರಿಸ್ಕ್‌ ಅಂಡ್ ಹಾರ್ಡ್‌ಶಿಪ್, ರೇಷನ್, ಡ್ರೆಸ್, ಪ್ರಯಾಣ ಭತ್ಯೆಗಳನ್ನು ನೀಡಲಾಗುತ್ತದೆ.

– ರೂ.48 ಲಕ್ಷ ಮೊತ್ತದ ಜೀವ ವಿಮೆ ಇರುತ್ತದೆ.

– ಅಗ್ನಿವೀರರಿಂದ 9 ಸಾವಿರ ರೂ ಮತ್ತು ಸರ್ಕಾರದ 9 ಸಾವಿರ ರೂ ಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂ.ಗಳ ಪಿಎಫ್‌ ಸೌಲಭ್ಯ ಇರಲಿದೆ.

– ಒಟ್ಟಾರೆ ವಾರ್ಷಿಕ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಇದೆ. 48 ಲಕ್ಷ ರೂಪಾಯಿವರೆಗಿನ ವಿಮಾ ಸೌಲಭ್ಯ ಇರಲಿದ್ದು, ಇದಕ್ಕೆ ಸೈನಿಕರು ವಂತಿಕೆ ಕಟ್ಟಬೇಕಿಲ್ಲ.

– ನಿವೃತ್ತಿ ಸಮಯದಲ್ಲಿ ಒಟ್ಟು 11.70 ಲಕ್ಷ ರೂ ನಿವೃತ್ತಿಯ ಪ್ಯಾಕೇಜ್ ಸಿಗಲಿದೆ. ಆದರೆ, ಪಿಂಚಣಿ ಸೌಲಭ್ಯವಿರುವುದಿಲ್ಲ.

– ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಜತೆಗೆ ಉಳಿದ ಸೇವಾ ಅವಧಿಯ ಸಂಬಳ ಪ್ರಾಪ್ತವಾಗಲಿದೆ.

– ಒಂದು ವೇಳೆ ಸೇವೆ ಸಮಯದಲ್ಲಿ ಅಂಗವೈಕಲ್ಯವಾದರೆ ಅದರ ಗಂಭೀರತೆ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ

ಉದ್ಯೋಗ ವಿವರ

INR 30000 to 40000 /Month

ಹುದ್ದೆಯ ಹೆಸರು ಭೂಸೇನೆ ಅಗ್ನಿವೀರರ ಹುದ್ದೆಗೆ ಅರ್ಜಿ ಆಹ್ವಾನ ವಿವರ ಭೂಸೇನೆ ಇಂದ ಅಧಿಸೂಚನೆ ಬಿಡುಗಡೆ.

ಪ್ರಕಟಣೆ ದಿನಾಂಕ 2024-02-13

ಕೊನೆ ದಿನಾಂಕ 2024-03-22

ಉದ್ಯೋಗ ವಿಧ ಪೂರ್ಣಾವಧಿ

ಉದ್ಯೋಗ ಕ್ಷೇತ್ರ ರಕ್ಷಣಾ ಇಲಾಖೆ

ವೇತನ ವಿವರ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ —

ವಿದ್ಯಾರ್ಹತೆ 8ನೇ ತರಗತಿ, 10ನೇ ತರಗತಿ, 12ನೇ ತರಗತಿ

ಕಾರ್ಯಾನುಭವ 0 Years

ನೇಮಕಾತಿ ಸಂಸ್ಥೆಯ ಹೆಸರು ಭೂಸೇನೆ

ವೆಬ್‌ಸೈಟ್‌ ವಿಳಾಸ https://joinindianarmy.nic.in/

 

ಉದ್ಯೋಗ ಸ್ಥಳ ವಿಳಾಸ ನವದೆಹಲಿ ಪ್ರದೇಶ ನವದೆಹಲಿ ಅಂಚೆ ಸಂಖ್ಯೆ 110001

Digiqole Ad

ಈ ಸುದ್ದಿಗಳನ್ನೂ ಓದಿ