ಪುರಾತನ ಕುಂಬಳೆಯ ಗೋಪಾಲಕೃಷ್ಣ ದೇಗುಲದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ
ಪುರಾತನ ಕುಂಬಳೆಯ ಗೋಪಾಲಕೃಷ್ಣ ದೇಗುಲದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ
ಕಾಸರಗೋಡು ಜಿಲ್ಲೆಯ ಅತ್ಯಂತ ಪುರಾತನ ಮತ್ತು ಇತಿಹಾಸ ಪ್ರಸಿದ್ಧ ಕುಂಬಳೆಯ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ. ಇದೀಗ ದೇಗುಲದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ಮನೆ ಮಾಡಿದ್ದು, 10 ದಿನಗಳ ಕಾಲ ನಡೆಯಲಿದೆ. ಕ್ಷೇತ್ರಕ್ಕೆ ಕರ್ನಾಟಕ, ಕೇರಳ ಸೇರಿದಂತೆ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ ಕಂಗೊಳಿಸುತ್ತಿದೆ ಪುಷ್ಕರಣಿ
ಪುನರ್ ಪ್ರತಿಷ್ಠಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ದಿನದ ಎಲ್ಲಾ ಸಮಯವೂ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ವಿಶೇಷವಾಗಿ ನಿರ್ವಹಿಸಲಾಗಿದೆ. ಕೇವಲ ಅನ್ನದಾನಕ್ಕಾಗಿಯೇ ಬೃಹತ್ ಗಾತ್ರದ ಪೆಂಡಾಲ್ ಹಾಕಲಾಗಿದ್ದು, 5 ಸಾವಿರಕ್ಕೂ ಹೆಚ್ಚು ಜನ ಒಂದೇ ಬಾರಿಗೆ ಆಹಾರ ಸೇವಿಸುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ.ಇನ್ನು ಕ್ಷೇತ್ರದ ಪುಷ್ಕರಣಿ ಹೊಸ ಮೆರುಗನ್ನು ನೀಡಲಾಗಿದ್ದು, ಇಡೀ ಕುಂಬಳೆ ಪೇಟೆಯನ್ನು ಮದುವಣಗಿತ್ತಿಯಂತೆ ದೀಪಾಲಂಕಾರದಿಂದ ಶೃಂಗರಿಸಲಾಗಿದೆ.
ಸಿಡಿಮದ್ದು ಪ್ರದರ್ಶನ ಹೆಸರುವಾಸಿ!ಕುಂಬಳೆ ಗೋಪಾಲಕೃಷ್ಣ ದೇವಸ್ಥಾನವು ಸಿಡಿಮದ್ದು ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದು, ಕುಂಬಳೆ ಬೆಡಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ ಕೇರಳ ಹಾಗು ಕರ್ನಾಟಕದ ದೇವಸ್ಥಾನಗಳಲ್ಲಿ ನಡೆಯುವ ಸಿಡಿಮದ್ದು ಪ್ರದರ್ಶನಗಳೆಲ್ಲಕ್ಕಿಂತ ವಿಭಿನ್ನತೆ ಈ ಕ್ಷೇತ್ರದಲ್ಲಿದೆ.
ಪ್ರತೀ ವರ್ಷ ಜನವರಿ 17 ರಂದು ಕುಂಬಳೆ ಸಿಡಿಮದ್ದು ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ ಪುನರ್ ಪ್ರತಿಷ್ಠಾ ಕಾರ್ಯಕ್ರದ ಹಿನ್ನಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ನಡೆಸಲು ಸುಡು ಮದ್ದು ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ ಆಡಳಿತ ಸಮಿತಿಯವರು ತಿಳಿಸಿರುತ್ತಾರೆ.