• 8 ಸೆಪ್ಟೆಂಬರ್ 2024

ರಾಜ್ಯದ 12 ರೈಲ್ವೆ ನಿಲ್ದಾಣಗಳು ಆಗಲಿವೆ ಹೈಟೆಕ್‌! ಪ್ರಧಾನಿ ಮೋದಿ ಫೆ.26ಕ್ಕೆ ಚಾಲನೆ; ಯಾವೆಲ್ಲಾ ನಿಲ್ದಾಣ?

 ರಾಜ್ಯದ 12 ರೈಲ್ವೆ ನಿಲ್ದಾಣಗಳು ಆಗಲಿವೆ ಹೈಟೆಕ್‌! ಪ್ರಧಾನಿ ಮೋದಿ ಫೆ.26ಕ್ಕೆ ಚಾಲನೆ; ಯಾವೆಲ್ಲಾ ನಿಲ್ದಾಣ?
Digiqole Ad

ರಾಜ್ಯದ 12 ರೈಲ್ವೆ ನಿಲ್ದಾಣಗಳು ಆಗಲಿವೆ ಹೈಟೆಕ್‌! ಪ್ರಧಾನಿ ಮೋದಿ ಫೆ.26ಕ್ಕೆ ಚಾಲನೆ; ಯಾವೆಲ್ಲಾ ನಿಲ್ದಾಣ?

ರಾಜ್ಯದ ಪ್ರಮುಖ 12 ರೈಲ್ವೆ ನಿಲ್ದಾಣಗಳಿಗೆ ಹೈಟೆಕ್‌ ರೂಪ ನಿಡಲಾಗುತ್ತಿದೆ. ಈ ಕಾಮಗಾರಿಗೆ ಪ್ರಧಾನಿ ಮೋದಿ ಅವರು ಆನ್‌ಲೈನ್‌ ಮೂಲಕ ಚಾಲನೆ ನೀಡಲಿದ್ದಾರೆ.ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆಯಡಿ ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ 367.24 ಕೋಟಿ ರೂ.ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಪೂರ್ಣಗೊಂಡ ಕಾಮಗಾರಿಯ ಉದ್ಘಾಟನೆಯನ್ನು ಫೆ.26 ರಂದು ಪ್ರಧಾನಿ ನರೇಂದ್ರ ಮೋದಿ ಆನ್‌ಲೈನ್‌ ಮೂಲಕ ನೆರವೇರಿಸಲಿದ್ದಾರೆ. ಬೇಡ ನೈರುತ್ಯ ರೈಲ್ವೆ ವಿಭಾಗದಲ್ಲಿ 12 ರೈಲ್ವೆ ನಿಲ್ದಾಣಗಳ ಉನ್ನತೀಕರಣ ಹಾಗೂ ರೈಲ್ವೆ ಮಾರ್ಗದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ 12 ಮೇಲ್ಸೇತುವೆ ಹಾಗೂ ಕೆಳಸೇತುವೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್‌ ತಿಳಿಸಿದರು.

ರೈಲ್ವೆ ನಿಲ್ದಾಣಗಳಿಗೆ ವಿಶ್ವದರ್ಜೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಬಂಟ್ವಾಳ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ರಾಣೆ ಬೆನ್ನೂರು, ಸಾಗರ ಜಂಬಗಾರು, ಸಕಲೇಶಪುರ, ಶಿವಮೊಗ್ಗ ನಗರ, ಸುಬ್ರಹ್ಮಣ್ಯ ರೋಡ್‌, ತಾಳಗುಪ್ಪ ಮತ್ತು ತಿಪಟೂರು ರೈಲ್ವೆ ನಿಲ್ದಾಣಗಳು ಉನ್ನತೀಕರಣಗೊಳ್ಳಲಿದೆ. ಉನ್ನತೀಕರಣ ಕಾಮಗಾರಿ ಮುಂದಿನ 9 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದರು.

ಮೈಸೂರು ವಿಭಾಗದ ಬಂಟವಾಳ ರೈಲು ನಿಲ್ದಾಣವನ್ನು ‘ಎಬಿಎಸ್‌ಎಸ್‌’ ಯೋಜನೆಯಡಿ 28.49 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಳಿಸಲು ಆಯ್ದುಕೊಳ್ಳಲಾಗಿದೆ. ಫೆ.26ರಂದು ಬಂಟವಾಳ ರೈಲು ನಿಲ್ದಾಣದಲ್ಲಿ ಈ ಕಾರ‍್ಯಕ್ರಮ ನಡೆಯಲಿದೆ. ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್‌ ಮೂಲಕ 554 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಅಡಿಪಾಯ ಹಾಕಲಿದ್ದು, ಬಂಟ್ವಾಳ ರೈಲ್ವೆ ನಿಲ್ದಾಣವೂ ಇದರಲ್ಲೊಂದಾಗಿದೆ. ವೀಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಗೌರವಾನ್ವಿತ ಪ್ರಧಾನ ಮಂತ್ರಿಯವರು 12:30 ಗಂಟೆಗೆ ಶಿಲಾನ್ಯಾಸ ಸಮಾರಂಭ ನಡೆಸಿಕೊಡುತ್ತಾರೆ. ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ರಾಜೇಶ್‌ ನಾಯ್ಕ್‌ ಮತ್ತಿತರ ಗಣ್ಯರು ಪಾಲ್ಗೊಳ್ಳುವರು. ಕೇಂದ್ರ ಸರ್ಕಾರ ಅಮೃತ ಮಹೋತ್ಸವ ಯೋಜನೆಯಡಿ ನಗರದ ರೈಲು ನಿಲ್ದಾಣ ಆಧುನೀಕರಣಕ್ಕಾಗಿ 50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಫೆ.26ರಂದು ಸೋಮವಾರ ಬೆಳಗ್ಗೆ 10.30ಕ್ಕೆ ವರ್ಚುವಲ್‌ ಮೂಲಕ ಚಾಲನೆ ನೀಡುವರು ಎಂದು ಜಿಲ್ಲಾಬಿಜೆಪಿ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌ ಹೆಬ್ಬಾಕ ತಿಳಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿಸುಸಜ್ಜಿತ ಕಟ್ಟಡ, ವ್ಯವಸ್ಥಿತ ಪ್ಲಾಟ್‌ ಫಾರಂ, ಶೆಲ್ಟರ್‌, ಎಸ್ಕಲೇಟರ್‌, ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ರೈಲು ಪ್ರಯಾಣಿಕರಿಗೆ ಅತ್ಯಾಧುನಿಕ ಸೇವೆ ಒದಗಿಸುವ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವರು.

ಬೆಂಗಳೂರಿನ ಉಪನಗರದಂತೆ ಬೆಳೆಯುತ್ತಿರುವ ತುಮಕೂರು ನಗರವನ್ನು ಸ್ಮಾರ್ಟ್‌ಸಿಟಿ ಯೋಜನೆ ನೀಡಿ ನಗರದ ಅಭಿವೃದ್ಧಿಗೆ ನರೇಂದ್ರ ಮೋದಿ ನೆರವಾಗಿದ್ದರು. ತುಮಕೂರು ರೈಲು ನಿಲ್ದಾಣವನ್ನು ಉನ್ನತ ದರ್ಜೆಗೇರಿಸುವ ಪ್ರಯತ್ನವಾಗಿ ಆಧುನಿಕರಣಗೊಳಿಸುವ ಮೂಲಕ ಮತ್ತೊಂದು ಕೊಡುಗೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

Digiqole Ad

ಈ ಸುದ್ದಿಗಳನ್ನೂ ಓದಿ