• 8 ಸೆಪ್ಟೆಂಬರ್ 2024

ಆಳಸಮುದ್ರದಲ್ಲಿ ಗುಪ್ತ ಪ್ರಾಚೀನ ದ್ವಾರಕಾ ವೀಕ್ಷಿಸಿದ ಪ್ರಧಾನಿ ಮೋದಿ!

 ಆಳಸಮುದ್ರದಲ್ಲಿ ಗುಪ್ತ ಪ್ರಾಚೀನ ದ್ವಾರಕಾ ವೀಕ್ಷಿಸಿದ ಪ್ರಧಾನಿ ಮೋದಿ!
Digiqole Ad

ಆಳಸಮುದ್ರದಲ್ಲಿ ಗುಪ್ತ ಪ್ರಾಚೀನ ದ್ವಾರಕಾ ವೀಕ್ಷಿಸಿದ ಪ್ರಧಾನಿ ಮೋದಿ

ಎರಡು ದಿನಗಳ ಗುಜರಾತ್ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ದಿನದ ಪ್ರವಾಸ ಹಲವು ರೀತಿಯಲ್ಲಿ ಮಹತ್ವ ಪಡೆದುಕೊಂಡಿದೆ. ಪ್ರಧಾನಿ ಮೋದಿ ಭಾನುವಾರ ಇಲ್ಲಿನ ದ್ವಾರಕಾ ಬಳಿ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. ದ್ವಾರಕಾಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೋದಿ ಅವರು ನೌಕಾಪಡೆಯ ಸಿಬ್ಬಂದಿಯೊಂದಿಗೆ ಸ್ಕೂಬಾ ಡೈವ್‌ಗೆ ತೆರಳಿದರು.

ಗೋಮತಿ ಘಾಟ್‌ನಲ್ಲಿರುವ ಸುದಾಮಾ ಸೇತುವೆಯನ್ನು ದಾಟಿದ ನಂತರ ಅವರು ಪಂಚಕುಯಿ ಬೀಚ್ ಪ್ರದೇಶವನ್ನು ತಲುಪಿದರು. ಅಲ್ಲಿಂದ ಸುಮಾರು 2 ನಾಟಿಕಲ್ ಮೈಲು ದೂರ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. ಈ ಮೂಲಕ ಅರೇಬಿಯನ್ ಸಮುದ್ರದ ಆಳದಲ್ಲಿ ಮುಳುಗಿದ ಅವರು, ಶ್ರೀಕೃಷ್ಣನ ನಿರ್ಗಮನದ ನಂತರ ಪೌರಾಣಿಕ ನಗರವಾದ ದ್ವಾರಕಾ ಕಣ್ಮರೆಯಾಯಿತು ಎಂದು ಹೇಳಲಾಗುವ ಪವಿತ್ರ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ದಶಕಗಳ ಹಿಂದಿನ ಕನಸು ಇಂದು ಪೂರ್ಣಗೊಂಡಿದೆ ಎಂದು ಘೋಷಿಸಿದರು. ದ್ವಾರಕಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ನಾನು ನವಿಲು ಗರಿಗಳೊಂದಿಗೆ ಸಮುದ್ರದ ಆಳಕ್ಕೆ ಹೋಗಿ ಪ್ರಾಚೀನ ದ್ವಾರಕಾ ನಗರದ ‘ದರ್ಶನ’ ಮಾಡಿದೆ. ನೀರಿನಡಿಯಲ್ಲಿ ಅಡಗಿರುವ ದ್ವಾರಕಾ ನಗರದ ಬಗ್ಗೆ ಬಹಳಷ್ಟು ನಮ್ಮ ಗ್ರಂಥಗಳಲ್ಲಿ ದ್ವಾರಕೆಯ ಬಗ್ಗೆ ಹೇಳಲಾಗಿದೆ, ಇದು ಸುಂದರವಾದ ದ್ವಾರಗಳು ಮತ್ತು ಎತ್ತರದ ಕಟ್ಟಡಗಳನ್ನು ಹೊಂದಿರುವ ನಗರ ಎಂದು ಹೇಳಲಾಗಿದೆ, ಈ ನಗರವನ್ನು ಸ್ವತಃ ಶ್ರೀಕೃಷ್ಣನು ನಿರ್ಮಿಸಿದನು ಎಂದು ಹೇಳಿದ್ದಾರೆ.

ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಬಹಳ ದೈವಿಕ ಅನುಭವವಾಗಿದೆ. ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಸಮಯಾತೀತ ಭಕ್ತಿಯ ಪ್ರಾಚೀನ ಯುಗದೊಂದಿಗೆ ಸಂಪರ್ಕ ಹೊಂದಿದ್ದೇನೆ. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ