ಆಪತ್ಬಾಂಧವನಾಗಿ ಬಂದು ಮಗುವಿನ ಜೀವ ಕಾಪಾಡಿದ ಶ್ವಾನ’ಕರಿಯ’
ಆಪತ್ಬಾಂಧವನಾಗಿ ಬಂದು ಮಗುವಿನ ಜೀವ ಕಾಪಾಡಿದ ಶ್ವಾನ’ಕರಿಯ’
ಜಗತ್ತಿನ ಹಲವು ವಿಸ್ಮಯಗಳ ನಡುವೆ ವಿಚಿತ್ರ ಕುತೂಹಲಕಾರಿ ಘಟನೆಯೊಂದು ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ ಬೀದಿ ನಾಯಿಯನ್ನು ಕಂಡು ಅಸಹ್ಯ ಪಡುವವರೇ ಹೆಚ್ಚು ಈ ಲೋಕದಲ್ಲಿ ಆದರೆ ವಿಶ್ವ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪೇಟೆಯಲ್ಲಿರುವ ಈ ಬೀದಿನಾಯಿ ಕರಿಯ ಎಂದೇ ಎಲ್ಲರಿಗೂ ಚಿರಪರಿಚಿತ ದಿನಾಂಕ 26-02-2024ರಂದು ಆದಿ ಸುಬ್ರಹ್ಮಣ್ಯದಲ್ಲಿ ಪ್ರವಾಸಿ ಮಹಿಳೆಯೊಬ್ಬರು ತನ್ನ ಚಿಕ್ಕ ಮಗುವನ್ನು ರಸ್ತೆಯಲ್ಲಿ ಬಿಟ್ಟು ಹಣ್ಣುಕಾಯಿ ತೆಗೆದುಕೊಳ್ಳೋ ಸಮಯದಲ್ಲಿ ಮಗು ರಸ್ತೆಗೆ ಬಂದಿದೆ ಅದೇ ಸಮಯಕ್ಕೆ ನಾಗರಹಾವು ರಸ್ತೆದಾಟುತಿತ್ತು ಮಗು ಇನ್ನೇನು ಹಾವನ್ನು ತುಳಿಯಬೇಕು ಅನ್ನುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ಕರಿಯ ಎಂಬ ನಾಯಿ ಓಡಿ ಹೋಗಿ ಮಗುವಿಗೆ ಅಡ್ಡವಾಗಿ ನಿಂತು ಮುಂದಾಗುವ ದೊಡ್ಡ ಅನಾಹುತವನ್ನು ತಪ್ಪಿಸಿ ಮಗುವಿನ ಪ್ರಾಣ ಕಾಪಾಡಿದೆ. ಈ ಘಟನೆಯನ್ನು ನೋಡಿರುವ ಪ್ರತ್ಯಕ್ಷದರ್ಶಿಯೊಬ್ಬರು ಸಾರ್ವಜನಿಕವಾಗಿ ನಾಯಿಯ ಬಗ್ಗೆ ಜೀವ ರಕ್ಷಿಸಿದ ಬಗ್ಗೆ ಹೇಳಿಕೆ ನೀಡಿದ್ದಾರೆ.