• 21 ನವೆಂಬರ್ 2024

ಕುಂಬಳೆ ಬೆಡಿ ಮಹೋತ್ಸವಕ್ಕೆ ತಯಾರಿಸಿದ್ದ ಸಿಡಿಮದ್ದು ವಶ!

 ಕುಂಬಳೆ ಬೆಡಿ ಮಹೋತ್ಸವಕ್ಕೆ ತಯಾರಿಸಿದ್ದ ಸಿಡಿಮದ್ದು ವಶ!
Digiqole Ad

ಕುಂಬಳೆ ಬೆಡಿ ಮಹೋತ್ಸವಕ್ಕೆ ತಯಾರಿಸಿದ್ದ ಸಿಡಿಮದ್ದು ವಶ!

ಕುಂಬಳೆ ಸೀಮೆಯ ಕ್ಷೇತ್ರವೆಂದು ಪ್ರಸಿದ್ದಿಯಾದ ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಬ್ರಹ್ಮಕಲಶದ ಬಳಿಕ ಇದೀಗ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು,ಉತ್ಸವದ ಅಂಗವಾಗಿ ನಾಳೆ ರಾತ್ರಿ “ಐತಿಹಾಸಿಕ ಕುಂಬಳೆ ಬೆಡಿ ಮಹೋತ್ಸವ” ನಡೆಯಲಿದೆ.ಆದರೆ ನಾಳೆ ನಡೆಯಬೇಕಾಗಿದ್ದ “ಬೆಡಿ ಮಹೋತ್ಸವ”ಕ್ಕೆ ಈ ಬಾರಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೆರಿ ಅಲತೊಡ್ ನಿಂದ ತರಿಸಲು ಉದ್ದೇಶಿಸಿದ ಲಕ್ಷಾಂತರ ರೂಪಾಯಿ ಮೊತ್ತದ ಸಿಡಿಮದ್ದು ಉತ್ಪನ್ನಗಳನ್ನು ಅಲ್ಲಿನ ಪೊಲೀಸರು ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡಕೊಂಡ ಘಟನೆ ನಡೆದಿದೆ.ಕಳೆದ ಬಾರಿ ಪುತ್ತೂರಿನಿಂದ ಬೆಡಿ ತಂದು ಸಿಡಿಸಿದರೆ ಈ ಬಾರಿ ಪಾಲಕ್ಕಾಡ್ ನಿಂದ ಬೆಡಿ ತರಿಸಲು ಬೆಡಿ ಉತ್ಸವ ಸಮಿತಿ ನಿರ್ಧರಿಸಿತ್ತು. ಈ ಬಗ್ಗೆ ಅಲ್ಲಿನ ಬೆಡಿ ಗುತ್ತಿಗೆದಾರರಾರಿಗೆ ಸಮಿತಿಯು ಇಂದು ತಲುಪಿಸಬೇಕೆಂದು ಮುಂಚಿತವಾಗಿ ಮಾಹಿತಿಯನ್ನು ಕೂಡಾ ನೀಡಿದ್ದರು. ಆದರೆ ಇಂದು ಕುಂಬಳೆಗೆ ತಲುಪುವ ಮುನ್ನವೇ ತಯಾರಿಸಿ, ಮಾಡಿಟ್ಟಿದ್ದ ಕರಿಮದ್ದು, ಸಿಡಿಮದ್ದು ಉತ್ಪನ್ನ ಮತ್ತು ಪಟಾಕಿಗಳು ಇತರ ಉತ್ಪನ್ನಗಳನ್ನು ಪೊಲೀಸರು ತಮ್ಮಕಸ್ಟಡಿಗೆ ವಶಪಡಿಸಿಕೊಂಡಿದ್ದಾರೆ. ಎಂದು ಗುತ್ತಿಗೆದಾರನಾದ ಚಾಲಕುಡಿಯ ವಿ.ಸಿ ವರ್ಗೀಸ್ ಅವರು ಈ ವಿವರವನ್ನು ಉತ್ಸವ ಕಮಿಟಿ ಪದಾಧಿಕಾರಿಗಳಿಗೆ ಇಂದು ತಿಳಿಸಿದ್ದಾರೆ. ಇನ್ನು ಈ ಕಾರ್ಯಾಚರಣೆಯಲ್ಲಿ 1070 ಕಿ.ಗ್ರಾಂ ಬೆಡಿ ಮದ್ದು ಮತ್ತು ಪಟಾಕಿ ಸಂಗ್ರಹಣೆಯನ್ನು ವಡಕ್ಕಂಚೇರಿ ಪೊಲೀಸ್‌ ವಶಪಡಿಸಿದ್ದು, ಇದರಲ್ಲಿ 800 ಕಿ.ಗ್ರಾಂ ಫೋಟಸ್ಸಿಯಂ ನೈಟ್ರೇಟ್, 200ಕಿ.ಗ್ರಾಂ ಆಲೂಮಿನಿಯಂ ಪೌಡರ್, 18 ಕಿ.ಗ್ರಾಂ ಸಲ್ಪರ್, 2000 ಓಲೆ ಪಟಾಕಿ, 20 ಕಿ.ಗ್ರಾಂ ಸಿಡಿಮದ್ದು, ಮದ್ದು ತುಂಬಿಸಿದ ಸಿಡಿ ಮದ್ದು ಎಂಬಿವುಗಳನ್ನು ಇಂದು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.ಪಾರಂಪರಿಕವಾಗಿ ನಡೆಯುವ ಕುಂಬಳೆ ಬೆಡಿ ಇಡೀ ದೇಶ ವಿದೇಶದಲ್ಲಿ ಕೂಡಾ ಖ್ಯಾತಿಯನ್ನು ಪಡೆದಿದ್ದು, ಈ ಬಾರಿ ಬ್ರಹ್ಮ ಕಲಶದ ಬಳಿಕ ಉತ್ಸವಕ್ಕೆ ಹೆಚ್ಚಿನ ಕಲೆ ಕಂಡು ಬಂದಿತ್ತು. ಇದೀಗ ಉತ್ಸವಕ್ಕೆ ದಿನಂಪ್ರತಿ ಸಾವಿರಾರು ಅಧಿಕ ಭಕ್ತರು ಆಗಮಿಸಿ ದೇವರ ದರ್ಶನಗೈದು, ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಾಳೆ ನಡೆಯುವ ಬೆಡಿ ‌ ಮಹೋತ್ಸವ ವೀಕ್ಷಿಸಲು ಈಗಾಗಲೇ ಜಿಲ್ಲೆಯಲ್ಲದೇ ಹೊರರಾಜ್ಯದಿಂದಲೂ ಭಕ್ತರು ಆಗಮಿಸಲು ಉತ್ಸುಕರಾಗಿದ್ದರು. ಇದೀಗ ಬೆಡಿ ಮಹೋತ್ಸವ ಸಮಿತಿ ದೇವರ ಪಾರಂಪರಿಕ ಸೇವೆಗಾಗಿ ಸಾಂಕೇತಿಕವಾಗಿ ಬೆಡಿ ಸಿಡಿಸಲು ನಿರ್ಧರಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ