ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜಾತ್ರಾ ಮಹೋತ್ಸವ
ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜಾತ್ರಾ ಮಹೋತ್ಸವ
ಕಡಬ ತಾಲೂಕು ಕಾಣಿಯೂರು ಗ್ರಾಮದ ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ವರ್ಷಾವಧಿ ಜಾತ್ರಾ ಮಹೋತ್ಸವು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ನಡೆಯಿತು. ಫೆ.24ರಂದು ತೋರಣ ಮುಹೂರ್ತ, ಹಸಿರು ಹೊರೆಕಾಣಿಕೆ, ಸಂಜೆ ತಂತ್ರಿಗಳ ಆಗಮನ, ಪ್ರಾರ್ಥನೆ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ರಾತ್ರಿ ಪೂಜೆ, ರಾತ್ರಿ ಅನ್ನಸಂತರ್ಪಣೆ ನಡೆಯಿತು. ಫೆ.25ರಂದು ಗಣಪತಿ ಹವನ, ಬಿಂಬಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ, ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಮಹಾಪೂಜೆ, ರಾತ್ರಿ ಶ್ರೀ ದೇವರ ಬಲಿ ಉತ್ಸವ, ಕಟ್ಟೆಪೂಜೆ, ಬಟ್ಟಲು ಕಾಣಿಕೆ ಮಂತ್ರಾಕ್ಷತೆ, ಬಳಿಕ ಅನ್ನಸಂತರ್ಪಣೆ ನಡೆದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮುಲ್ಕಿ ಇವರಿಂದ ನಾಡೂರ ನಾಗಬನ ಯಕ್ಷಗಾನ ನಡೆಯಿತು.
ದೇವಸ್ಥಾನದ ಅನುವಂಶಿಯ ಮೊಕ್ತೇಸರ ಹರಿಯಪ್ಪ ಗೌಡ ನಾವೂರು, ಆಡಳಿತ ಸಮಿತಿ ಅಧ್ಯಕ್ಷ ನಾಗೇಶ್ ರೈ ಮಾಳ, ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಉಪಾಧ್ಯಾಯ ಬೊಬ್ಬೆಕೇರಿ, ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಪೂದೆ, ಆಡಳಿತ ಸಮಿತಿ ಕಾರ್ಯದರ್ಶಿ ದಿನೇಶ್ ಮಾಳ, ಜತೆ ಕಾರ್ಯದರ್ಶಿ ಅನಂತ್ ಬೈಲಂಗಡಿ , ಗ್ರಾಮಸ್ಥರು , ಭಕ್ತಾದಿಗಳು ಉಪಸ್ಥಿತರಿದ್ದರು.