• 8 ಸೆಪ್ಟೆಂಬರ್ 2024

ಕಂಬಳ ಕ್ಷೇತ್ರದಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ಸಾಧನೆಯ ಮೆಟ್ಟಿಲು ಏರುತ್ತಿರುವ ಕನ್ನಡಿಕಟ್ಟೆ ಪಾಲ್ತ್ಯಾರುವಿನ ಅಪ್ಪು ಯಾರೆಂದು ಕೊಂಡಿರಿ ಅವನ ಬಗ್ಗೆ ಒಂದಿಷ್ಟು ಮಾಹಿತಿ

 ಕಂಬಳ ಕ್ಷೇತ್ರದಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ಸಾಧನೆಯ ಮೆಟ್ಟಿಲು ಏರುತ್ತಿರುವ ಕನ್ನಡಿಕಟ್ಟೆ ಪಾಲ್ತ್ಯಾರುವಿನ ಅಪ್ಪು ಯಾರೆಂದು ಕೊಂಡಿರಿ ಅವನ ಬಗ್ಗೆ ಒಂದಿಷ್ಟು ಮಾಹಿತಿ
Digiqole Ad

ಕಂಬಳ ಕ್ಷೇತ್ರದಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ಸಾಧನೆಯ ಮೆಟ್ಟಿಲು ಏರುತ್ತಿರುವ ಕನ್ನಡಿಕಟ್ಟೆ ಪಾಲ್ತ್ಯಾರುವಿನ ಅಪ್ಪು ಯಾರೆಂದು ಕೊಂಡಿರಿ ಅವನ ಬಗ್ಗೆ ಒಂದಿಷ್ಟು ಮಾಹಿತಿ

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಪರಿಸರದ ಅಸುಪಾಸಿನ ಊರು ಕನ್ನಡಿಕಟ್ಟೆ  ಪಾಲ್ತ್ಯಾರ್ ಕುಟುಂಬ ಅಂದರೆ ಕಂಬಳ ಕ್ಷೇತ್ರದಲ್ಲಿ ಹೆಸರು ಗಳಿಸಿದ ಕುಟುಂಬ ಸುಮಾರು ವರ್ಷಗಳಿಂದ ಕಂಬಳ ಕೋಣಗಳನ್ನು ಸಾಕಿ ಅದನ್ನು ಪೋಷಿಸಿ ಕಂಬಳ ಕ್ಷೇತ್ರದಲ್ಲಿ ಬಾಗವಹಿಸುವ ಒಂದು ಕುಟುಂಬ ಕನ್ನಡಿಕಟ್ಟೆ ಪಾಲ್ತ್ಯಾರ್ ಎಲ್ಲಾ ಅಣ್ಣ ತಮ್ಮಂದಿರು ಒಟ್ಟಾಗಿ ಸೇರಿಕೊಂಡು ಕಂಬಳಕ್ಕೆ ಹೊರಡುವ ಚಂದವನ್ನು ವರ್ಣಿಸಲು ಅಸಾಧ್ಯ.

ಈ ಸುದ್ದಿ ಓದಿದ್ದೀರಾ?:ಈ ದೇಶಗಳಲ್ಲಿ ಬುರ್ಖಾ,ಹಿಜಾಬ್ ನಿಷೇಧ!

2023/2024ನೇ ಸಾಲಿನಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ಕಂಬಲಾಭಿಮಾನಿಗಳ ಮನಸು ಗೆಲ್ಲುತ್ತಿರುವ ಕನ್ನಡಿಕಟ್ಟೆ ಮನೆಯವರ ಪ್ರೀತಿಯ ಕೋಣ ಕನ್ನಡಿಕಟ್ಟೆ ಅಪ್ಪು.

2023/2024ನೇ ಸಾಲಿನಲ್ಲಿ ಈವರೆಗೆ ನಡೆದ ಪ್ರತಿ ಕಂಬಳ ಕೂಟದಲ್ಲಿ ಬಾಗವಹಿಸಿ 1ಪ್ರಥಮ 1ದ್ವಿತೀಯ 5 ಬಾರಿ ಕ್ವಾಟರ್ ಫೈನಲ್ 3 ಬಾರಿ ಸೆಮಿಫೈನಲ್ ಪ್ರವೇಶಿಸಿ ಕಂಬಳ ಕ್ಷೇತ್ರಕ್ಕೆ ನಾನು ಒಬ್ಬ ಸ್ಟಾರ್ ಎಂದು ನೀರೂಪಿಸಿದ ರೀತಿ ಮಾತ್ರ ಅದ್ಭುತ ಪ್ರತಿ ಬಾರಿ ಗೆಲ್ಲಬೇಕೆಂದು ಪ್ರಯತ್ನ ಪಡುವ ರೀತಿ ಮಾತ್ರ ಅದ್ಭುತ ಯಾರಿಗೂ ಅನ್ಯಾಯ ಮಾಡದ ಸ್ವಭಾವ ಓಡಿಸಿದರೂ ಬಿಟ್ಟರು ಸಮಾನವಾಗಿ ಕೂಟದಲ್ಲಿ ಒಡಬಲ್ಲ ಸಾಮರ್ಥ್ಯ ಕನ್ನಡಿಕಟ್ಟೆ ಅಪ್ಪುವಿಗೆ ದೇವರು ಕೊಟ್ಟ ವರ ಅಂತಾನೆ ಹೇಳಬಹುದು ಕಂಬಳದಲ್ಲಿ ಬಾಗವಹಿಸಿ ಮನೆ ಹತ್ತಿರ ಹತ್ತಿರ ಬರುವಾಗ ಮಾತ್ರ ಕನ್ನಡಿಕಟ್ಟೆ ಅಪ್ಪುವಿನ ಆವೇಶ ನೋಡಿದರೆ ಯಾರು ಕೂಡ ತಬ್ಬಿಬ್ಬು ಆಗಲೇಬೇಕು ಆದರೆ ಅದು ಕೋಪದಿಂದ ಅಲ್ಲ ಮನೆ ಬಂತೇoಬ ಖುಷಿಯಿಂದ ಟೆಂಪೋದಿಂದ ಹಗ್ಗ ಬಿಚ್ಚಿದ ಕೂಡಲೇ ಚಂಗನೆ ಟೆಂಪೋದಿಂದ ಹಾರಿ ಅಪ್ಪು ಹೊಡುವುದು ಅವನ ಕೊಟ್ಟಿಗೆಗೆ ಪ್ರಾಣಿಯಾದರೂ ಅವುಗಳ ಬುದ್ದಿ ನೋಡಿ ಯಾರಿಗೂ ಅನ್ಯಾಯ ಮಾಡುವವನಲ್ಲ ಕನ್ನಡಿಕಟ್ಟೆ ಅಪ್ಪು ಚಿಕ್ಕ ಮಕ್ಕಳು ಮೂಗಿನ ದಾರ ಹಿಡಿದರು ಚಪ್ ಚುಪ್ ಹೇಳುವವನಲ್ಲ ನಮ್ಮ ಅಪ್ಪು ಇನ್ನಷ್ಟು ಪ್ರಶಸ್ತಿ ಅಪ್ಪುವಿಗೆ ಒಳಿಯಲಿ ಕಂಬಳ ಕ್ಷೇತ್ರದ ಸಾಮ್ರಾಟನಾಗಿ ಮಿಂಚಿ ಕನ್ನಡಿಕಟ್ಟೆ ಪಾಲ್ತ್ಯಾರ್ ಮನೆಯ ಗೌರವವನ್ನು ಆಕಾಶದೇತ್ತರ ಪಸರಿಸಲಿ ಎಂಬುದೇ ಹಾರೈಕೆ.

ಪ್ರಸ್ತುತ ಮಾಳ ಕಲ್ಲೇರಿ ಶರತ್ ಶೆಟ್ಟಿ ಅವರ ಹೆಸರಿನಲ್ಲಿ ಹಾಗೂ ಕನ್ನಡಿಕಟ್ಟೆ ಪಾಲ್ತ್ಯಾರ್ ರಂಜಿತ್ ಮಹಾಬಲ ಶೆಟ್ಟಿಯವರ ಹೆಸರಿನಲ್ಲಿ ಬಾಗವಹಿಸುತ್ತಿರುವ ನಮ್ಮ ಕನ್ನಡಿಕಟ್ಟೆ ಅಪ್ಪುವಿನ ಓಟ ನೋಡಲು ಮರೆಯದಿರಿ ನನ್ನ ಪ್ರೀತಿಯ ಕಂಬಲಾಭಿಮಾನಿಗಳೇ ನಿಮ್ಮ ಆಶೀರ್ವಾದ ಅಪ್ಪುವಿನ ಮೇಲಿರಲಿ.

Digiqole Ad

ಈ ಸುದ್ದಿಗಳನ್ನೂ ಓದಿ