• 8 ಸೆಪ್ಟೆಂಬರ್ 2024

ದಕ್ಷಿಣಕನ್ನಡ  ಎಸ್‌ ಸಿಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಚುನಾವಣೆ;ಡಾ| ಎಂಎನ್‌ಆರ್‌ ಸಹಿತ 16 ಮಂದಿ ಅವಿರೋಧವಾಗಿ ಆಯ್ಕೆ 

 ದಕ್ಷಿಣಕನ್ನಡ  ಎಸ್‌ ಸಿಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಚುನಾವಣೆ;ಡಾ| ಎಂಎನ್‌ಆರ್‌ ಸಹಿತ 16 ಮಂದಿ ಅವಿರೋಧವಾಗಿ ಆಯ್ಕೆ 
Digiqole Ad

ದಕ್ಷಿಣಕನ್ನಡ  ಎಸ್‌ ಸಿಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಚುನಾವಣೆ;ಡಾ| ಎಂಎನ್‌ಆರ್‌ ಸಹಿತ 16 ಮಂದಿ ಅವಿರೋಧವಾಗಿ ಆಯ್ಕೆ 

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ ಸಿಡಿಸಿಸಿ) ಬ್ಯಾಂಕಿನ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಎಲ್ಲ 16 ನಿರ್ದೇಶಕ ಸ್ಥಾನಕ್ಕೆ ಸಹಕಾರ ಚುನಾವಣ ಆಯೋಗ ನಡೆಸಿದ ಚುನಾವಣೆಯಲ್ಲಿ ಡಾ| ಎಂ.ಎನ್‌. ರಾಜೇಂದ್ರಕುಮಾರ್‌ ನೇತೃತ್ವದ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಲ್ಲ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಗಳ ಪ್ರತಿನಿಧಿಗಳ ಕ್ಷೇತ್ರದಿಂದ 13, ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ 1, ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ 1 ಹಾಗೂ ಇತರ ಎಲ್ಲಾ ಸಹಕಾರ ಸಂಘಗಳ ಕ್ಷೇತ್ರದಿಂದ ಒಬ್ಬರು ಅವಿರೋಧ ಆಯ್ಕೆ ಆಗಿದ್ದಾರೆ.

ಈ ಸುದ್ದಿ ಓದಿದ್ದೀರಾ?:ಏಶ್ಯಕಪ್ ಸೂಪರ್-4: ಭಾರತ ವಿರುದ್ಧ ವಿ ಆಯ್ದುಕೊಂಡ ಪಾಕಿಸ್ತಾನ

ಮಂಗಳೂರು ತಾಲೂಕು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಗಳ ಕ್ಷೇತ್ರದಿಂದ ಎಂ.ಎನ್‌.ರಾಜೇಂದ್ರ ಕುಮಾರ್‌, ವಿನಯ ಕುಮಾರ್‌ ಸೂರಿಂಜೆ, ಭಾಸ್ಕರ ಎಸ್‌.ಕೋಟ್ಯಾನ್‌, ಕೆ. ಹರಿಶ್ಚಂದ್ರ, ಬಂಟ್ವಾಳ ತಾಲೂಕು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಗಳ ಕ್ಷೇತ್ರದಿಂದ ಟಿ.ಜಿ. ರಾಜಾರಾಮ ಭಟ್‌, ಉಡುಪಿ ತಾಲೂಕು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಗಳ ಕ್ಷೇತ್ರದಿಂದ ದೇವಿ ಪ್ರಸಾದ್‌ ಶೆಟ್ಟಿ, ಬಿ. ಅಶೋಕ್‌ ಕುಮಾರ್‌ ಶೆಟ್ಟಿ, ಪುತ್ತೂರು ತಾಲೂಕು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಗಳ ಕ್ಷೇತ್ರದಿಂದ ಶಶಿಕುಮಾರ್‌ ರೈ.ಬಿ., ಕುಂದಾಪುರ ತಾಲೂಕು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಗಳ ಕ್ಷೇತ್ರದಿಂದ ಎಸ್‌. ರಾಜು ಪೂಜಾರಿ, ಎಂ. ಮಹೇಶ್‌ ಹೆಗ್ಡೆ, ಕಾರ್ಕಳ ತಾಲೂಕು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಗಳ ಕ್ಷೇತ್ರದಿಂದ ಎಂ.ವಾದಿರಾಜ ಶೆಟ್ಟಿ, ಬೆಳ್ತಂಗಡಿ ತಾಲೂಕು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಗಳ ಕ್ಷೇತ್ರದಿಂದ ಕುಶಾಲಪ್ಪ ಗೌಡ ಪಿ., ಸುಳ್ಯ ತಾಲೂಕು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘಗಳ ಕ್ಷೇತ್ರದಿಂದ ಎಸ್‌.ಎನ್‌. ಮನ್ಮಥ, ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಮೋನಪ್ಪ ಶೆಟ್ಟಿ ಎಕ್ಕಾರು, ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ಕೈಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ. ಜೈರಾಜ್‌ ಬಿ. ರೈ ಮತ್ತು ಇತರ ಎಲ್ಲ ಸಹಕಾರ ಸಂಘಗಳ ಕ್ಷೇತ್ರದಿಂದ ಎಸ್‌.ಬಿ. ಜಯರಾಮ ರೈ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಚುನಾವಣಾಧಿಕಾರಿಯಾಗಿ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಹರ್ಷವರ್ಧನ ಎಸ್‌.ಜೆ., ಸಹಾಯಕ ಚುನಾವಣಾಧಿಕಾರಿಯಾಗಿ ಮಂಗಳೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್‌ಕುಮಾರ್‌ ಜೆ. ಕಾರ್ಯ ನಿರ್ವಹಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ