ರಾಮೇಶ್ವರಂ ಸ್ಫೋಟ: ಶಂಕಿತನ ರೇಖಾಚಿತ್ರ ಬಿಡುಗಡೆ
ರಾಮೇಶ್ವರಂ ಸ್ಫೋಟ: ಶಂಕಿತನ ರೇಖಾಚಿತ್ರ ಬಿಡುಗಡೆ
ರಾಮೇಶ್ವರಂ ಕೆಫೆ ಬ್ಲಾಸ್ಟ್ನ ಶಂಕಿತ ಉಗ್ರನ ಸುಳಿವು ಕೊಟ್ಟರೆ 10 ಲಕ್ಷ ರೂ. ನಗದು ಬಹುಮಾನ ಕೊಡುವುದಾಗಿ NIA ನಿನ್ನೆ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ CCB ಪೊಲೀಸರು, ಬಾಂಬರ್ ಸಿಸಿಟಿವಿ ಫೂಟೇಜ್ ಆಧರಿಸಿ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ಹಾಗೂ ಆತನ ಚಲನ-ವಲನವನ್ನು ಇಟ್ಟುಕೊಂಡು ಆತನ ಮುಖ ಚಹರೆ ಹೇಗಿರಬಹುದೆಂದು ರೇಖಾಚಿತ್ರವನ್ನು ಸಿದ್ಧಪಡಿಸಲಾಗಿದೆ. ಶಂಕಿತ ಆರೋಪಿಯನ್ನು ಸ್ಫೋಟಕ್ಕೂ ಮೊದಲು ನೋಡಿದ್ದ ಬಗ್ಗೆ ಜನರಿಂದ ಕರೆಗಳು ಬಂದಿದ್ದು ಆತನ ಪತ್ತೆಗೆ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ.