• 22 ನವೆಂಬರ್ 2024

ವಿಶ್ವದಲ್ಲಿ ಮೊಟ್ಟ ಮೊದಲು ಮೆಟ್ರೋ ಸೇವೆ ಆರಂಭವಾಗಿದ್ದೆಲ್ಲಿ? ಭಾರತದ ಮೊದಲ ಮೆಟ್ರೋ ಎಲ್ಲಿ ಪ್ರಾರಂಭ ಇಲ್ಲಿದೆ ಮಾಹಿತಿ

 ವಿಶ್ವದಲ್ಲಿ ಮೊಟ್ಟ ಮೊದಲು ಮೆಟ್ರೋ ಸೇವೆ ಆರಂಭವಾಗಿದ್ದೆಲ್ಲಿ? ಭಾರತದ ಮೊದಲ ಮೆಟ್ರೋ ಎಲ್ಲಿ ಪ್ರಾರಂಭ ಇಲ್ಲಿದೆ ಮಾಹಿತಿ
Digiqole Ad

ವಿಶ್ವದಲ್ಲಿ ಮೊಟ್ಟ ಮೊದಲು ಮೆಟ್ರೋ ಸೇವೆ ಆರಂಭವಾಗಿದ್ದೆಲ್ಲಿ? ಭಾರತದ ಮೊದಲ ಮೆಟ್ರೋ ಎಲ್ಲಿ ಪ್ರಾರಂಭ ಇಲ್ಲಿದೆ ಮಾಹಿತಿ!!

ಬುಧವಾರ ಕೋಲ್ಕತ್ತಾದಲ್ಲಿ ದೇಶದ ಮೊದಲ ವಾಟರ್ ಮೆಟ್ರೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಚಾಲನೆ ನೀಡಿದ ಬಳಿಕ ಮೋದಿ ಸ್ವತಃ ಮೆಟ್ರೋವನ್ನು ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಾಯಕರ ಜೊತೆ ಪ್ರಯಾಣಿಸಿದರು.

ಈ ಸುದ್ದಿ ಓದಿದ್ದೀರಾ?:ವಿಶ್ವ ಕಂಡ ಅತ್ಯದ್ಭುತ ನಾಯಕನಿಗಿಂದು ಜನ್ಮದಿನ

ಅಂಡರ್ ವಾಟರ್ ಮೆಟ್ರೋವನ್ನು ಆರಂಭಿಸುವ ಮೂಲಕ ಕೋಲ್ಕತ್ತಾ ಮತ್ತೊಮ್ಮೆ ಇತಿಹಾಸದಲ್ಲಿ ತನ್ನ ಹೆಸರನ್ನು ಬರೆದಿದೆ. ಭಾರತದ ಮೊದಲ ಮೆಟ್ರೋ ಕೂಟ ಕೋಲ್ಕತ್ತಾದಲ್ಲಿ ಪ್ರಾರಂಭಿಸಲಾಗಿತ್ತು. ಈ ಬಾರಿ ಕೋಲ್ಕತ್ತಾ ನೀರಿನ ಅಡಿಯಲ್ಲಿ ಚಲಿಸುವ ಮೆಟ್ರೋವನ್ನು ಪ್ರಾರಂಭಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

ಈ ಸುದ್ದಿ ಓದಿದ್ದೀರಾ?:ಇಲ್ಲಿದೆ ರಾಜ್ಯ ಬಜೆಟ್ ಮುಖ್ಯಾಂಶಗಳು

ಆದರೆ ಜಗತ್ತಿನಲ್ಲಿ ಮೆಟ್ರೋವನ್ನು ಮೊದಲು ಎಲ್ಲಿ ಪ್ರಾರಂಭಿಸಲಾಯಿತು ಎಂಬುದು ನಿಮಗೆ ತಿಳಿದಿದೆಯೇ? ವಿಶ್ವದ ಮೊದಲ ಮೆಟ್ರೋ ಲಂಡನ್‌ನಲ್ಲಿ ಪ್ರಾರಂಭವಾಗಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ ಲಂಡನ್ ಅಂಡರ್‌ಗ್ರೌಂಡ್ ವಿಶ್ವದ ಮೊದಲ ಮೆಟ್ರೋ ಆಗಿದೆ. ಇದು 1863 ರಲ್ಲಿ ಆರಂಭವಾಯಿತು. 1890 ರಲ್ಲಿ, ಇಂಜಿನ್‌ಗಳ ಬದಲಿಗೆ ವಿದ್ಯುತ್ಚಾಲಿತ ರೈಲುಗಳು ಪ್ರಾರಂಭವಾಗಿದ್ದು ಕೂಡ ಇದೇ ಮೆಟ್ರೋದಲ್ಲಿ ಎಂಬುದು ಮತ್ತೊಂದು ವಿಶೇಷ.ಇದು ವಿಶ್ವದ ಮೂರನೇ ಅತಿ ಉದ್ದದ ಮೆಟ್ರೋ ವ್ಯವಸ್ಥೆಯಾಗಿದೆ. ಈ ಮೆಟ್ರೋ ಸೇವೆಯಲ್ಲಿ 11 ಮಾರ್ಗಗಳು ಅಥವಾ ಟ್ರ್ಯಾಕ್‌ಗಳಲ್ಲಿ 270 ನಿಲ್ದಾಣಗಳಿವೆ. ಒಟ್ಟು 402 ಕಿ.ಮೀ. ಸಂಚರಿಸಲಿದೆ. ಇದರಲ್ಲಿ ಶೇಕಡ 45ರಷ್ಟು ದೂರವನ್ನು ರೈಲುಗಳು ನೆಲದಡಿಯಲ್ಲಿ ಸಾಗುತ್ತವೆ. ನಗರ ಕೇಂದ್ರಗಳಲ್ಲಿ ಹೆಚ್ಚಾಗಿ ಅಂಡರ್ಗ್ರೌಂಡ್ನಲ್ಲೇ ಚಲಿಸಲಿವೆ. ಲಂಡನ್‌ನ ಮೆಟ್ರೋರೈಲ್ ಪ್ರತಿದಿನ ಸುಮಾರು 500,000 ಪ್ರಯಾಣಿಕರನ್ನು ಸಾಗಿಸುತ್ತದೆ. ಒಂದು ದಿನದಲ್ಲಿ ಗರಿಷ್ಠ 540 ಟ್ರಿಪ್‌ಗಳಿರುತ್ತವೆ. ಟ್ರ್ಯಾಕ್‌ಗಳು ಮತ್ತು ಕೋಚ್‌ಗಳ ಸಂಖ್ಯೆಯನ್ನು ಕ್ರಮೇಣ ಹೆಚ್ಚಿಸಲಾಗಿದ್ದರೂ, ಇಲ್ಲಿ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಲಂಡನ್‌ನ ಅಂಡರ್‌ಗ್ರೌಂಡ್ ಮೆಟ್ರೋರೈಲ್ 2007 ರಿಂದ ಟ್ರಾನ್ಸ್‌ಪೋರ್ಟ್ ಫಾರ್ ಲಂಡನ್ ಅಂಗಸಂಸ್ಥೆಯಾದ ಲಂಡನ್ ಅಂಡರ್‌ಗ್ರೌಂಡ್ ಲಿಮಿಟೆಡ್‌ನ ಮಾಲೀಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಲಂಡನ್ ಅಂಡರ್‌ಗ್ರೌಂಡ್ 1933 ರವರೆಗೆ ವಿವಿಧ ಖಾಸಗಿ ಕಂಪನಿಗಳ ಒಡೆತನದಲ್ಲಿತ್ತು. ನಂತರ ಲಂಡನ್ ಅಂಡರ್‌ಗ್ರೌಂಡ್‌ನ ಮಾಲೀಕತ್ವವನ್ನು ಸ್ಥಳೀಯ ಸರ್ಕಾರಕ್ಕೆ ನೀಡಲಾಯಿತು. ಹಂಗೇರಿಯ ಬುಡಾಪೆಸ್ಟ್ ಮೆಟ್ರೋವನ್ನು ಲಂಡನ್ ನಂತರ 1896 ರಲ್ಲಿ ಪ್ರಾರಂಭಿಸಲಾಯಿತು. 2002 ರಲ್ಲಿ, ಈ ಮೆಟ್ರೋ ಮಾರ್ಗವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಪಟ್ಟಿಮಾಡಲಾಗಿದೆ. ಮೊದಲನೆಯ ಮಹಾಯುದ್ಧದ ಅಂತ್ಯದ ವೇಳೆಗೆ, ಪ್ರಪಂಚದಾದ್ಯಂತದ ಅನೇಕ ನಗರಗಳಲ್ಲಿ ಅಂಡರ್ಗ್ರೌಂಡ್ ಮೆಟ್ರೋರೈಲುಗಳನ್ನು ಪರಿಚಯಿಸಲಾಯಿತು. ಉದಾಹರಣೆಗೆ, ಅಥೆನ್ಸ್, ಬರ್ಲಿನ್, ಬೋಸ್ಟನ್, ಬ್ಯೂನಸ್ ಐರಿಸ್, ಬುಡಾಪೆಸ್ಟ್, ಗ್ಲ್ಯಾಸ್ಗೋ, ಹ್ಯಾಂಬರ್ಗ್, ಲಿವರ್‌ಪೂಲ್, ನ್ಯೂಯಾರ್ಕ್ ಮತ್ತು ಪ್ಯಾರಿಸ್ ಮೆಟ್ರೋರೈಲ್‌ಗಳನ್ನು ಆರಂಭಿಸಲಾಯಿತು. ವಿಶ್ವದ ಅತಿ ಉದ್ದದ ಮೆಟ್ರೋಗಳಲ್ಲಿ ಮೊದಲ ಎರಡು ಸ್ಥಾನಗಳನ್ನು ಚೀನಾ ಹೊಂದಿದೆ. ಉದ್ದದ ಮೆಟ್ರೋ ಜಾಲವು ಶಾಂಘೈನಲ್ಲಿದೆ, ಇದರ ಉದ್ದ 803 ಕಿ.ಮೀ. ಎರಡನೇ ಅತಿ ಉದ್ದದ ಮಾರ್ಗವೆಂದರೆ ಬೀಜಿಂಗ್, ಇದರ ಉದ್ದ 678.2 ಕಿ.ಮೀ. ನ್ಯೂಯಾರ್ಕ್ ನಗರದ ಸುರಂಗಮಾರ್ಗವು 472 ನಿಲ್ದಾಣಗಳನ್ನು ಹೊಂದಿದೆ, ಇದು ಸುರಂಗಮಾರ್ಗ ವ್ಯವಸ್ಥೆಯಲ್ಲಿ ಹೆಚ್ಚು. ಮತ್ತು ಹೆಚ್ಚು ಮೆಟ್ರೋ ವ್ಯವಸ್ಥೆಯನ್ನು ಹೊಂದಿರುವ ದೇಶ ಚೀನಾ. 45 ಮೆಟ್ರೋ ವ್ಯವಸ್ಥೆಗಳಿವೆ. ಏಷ್ಯಾದ ಮೊದಲ ಮೆಟ್ರೋವನ್ನು 1927 ರಲ್ಲಿ ಜಪಾನ್‌ನಲ್ಲಿ ಆರಂಭವಾಗಿತ್ತು.

Digiqole Ad

ಈ ಸುದ್ದಿಗಳನ್ನೂ ಓದಿ