• 8 ಸೆಪ್ಟೆಂಬರ್ 2024

IND vs ENG ಟೆಸ್ಟ್: ಯುವ ಆಟಗಾರ ಮುಟ್ಟಿದ್ದೆಲ್ಲ ಚಿನ್ನ. ದಿಗ್ಗಜರ ದಾಖಲೆಗಳನ್ನು ಮುರಿದ ಜೈಸ್ವಾಲ್.

 IND vs ENG ಟೆಸ್ಟ್: ಯುವ ಆಟಗಾರ ಮುಟ್ಟಿದ್ದೆಲ್ಲ ಚಿನ್ನ. ದಿಗ್ಗಜರ ದಾಖಲೆಗಳನ್ನು ಮುರಿದ ಜೈಸ್ವಾಲ್.
Digiqole Ad

IND vs ENG ಟೆಸ್ಟ್: ಯುವ ಆಟಗಾರ ಮುಟ್ಟಿದ್ದೆಲ್ಲ ಚಿನ್ನ. ದಿಗ್ಗಜರ ದಾಖಲೆಗಳನ್ನು ಮುರಿದ ಜೈಸ್ವಾಲ್.

ಭಾರತ vs ಇಂಗ್ಲೆಂಡ್ 5 ನೇ ಟೆಸ್ಟ್: ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ ಬ್ಯಾಕ್ ಟು ಬ್ಯಾಕ್ 2 ದ್ವಿಶತಕವನ್ನೂ ಸಿಡಿಸಿದ್ದಾರೆ. ಇದೀಗ ಜೈಸ್ವಾಲ್ ಐದನೇ ಟೆಸ್ಟ್‌ನಲ್ಲಿ 29 ರನ್ ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ಭಾರತ ತಂಡದ ಆರಂಭಿಕ ಬ್ಯಾಟ‌ರ್ ಯಶಸ್ವಿ ಜೈಸ್ವಾಲ್ ಅವರು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್‌ ಬೇಟೆ ಮುಂದುವರಿಸಿದ್ದಾರೆ. ಆ ಮೂಲಕ, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರ ಹೆಸರಿನಲ್ಲಿದ್ದ ದಾಖಲೆಗಳನ್ನು ಮುರಿದಿದ್ದಾರೆ.

ಅಮೋಘ ಫಾರ್ಮ್‌ನಲ್ಲಿರುವ ಜೈಸ್ವಾಲ್, ಈ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳ 9 ಇನಿಂಗ್ಸ್‌ಗಳಿಂದ ಎರಡು ದ್ವಿಶತಕ ಸಹಿತ 712 ರನ್ ಗಳಿಸಿದ್ದಾರೆ. ಇದರೊಂದಿಗೆ ಭಾರತದ ಪರ 45 ವರ್ಷಗಳ ಬಳಿಕ ಸರಣಿಯೊಂದರಲ್ಲಿ 700 ರನ್‌ಗಳ ಗಡಿ ದಾಟಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಹಾಗೆಯೇ, ಇಂಗ್ಲೆಂಡ್ ವಿರುದ್ಧದ ಒಂದೇ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಟೀಂ ಇಂಡಿಯಾದ ಬ್ಯಾಟರ್ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೌದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಯಶಸ್ವಿ ಜೈಸ್ವಾಲ್‌ ಪಾತ್ರರಾಗಿದ್ದಾರೆ. ಯಶಸ್ವಿ 1000 ರನ್ ಪೂರೈಸಲು 9 ಪಂದ್ಯಗಳನ್ನು ಆಡಿದರು. ಜೈಸ್ವಾಲ್‌ ಅವರು ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ನಲ್ಲಿ 29 ರನ್ ಗಳಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ 1000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೊದಲು ಈ ದಾಖಲೆ ಚೇತೇಶ್ವರ ಪೂಜಾರ ಹೆಸರಿನಲ್ಲಿತ್ತು. 11 ಪಂದ್ಯಗಳಲ್ಲಿ 1000 ರನ್ ಪೂರೈಸಿದ್ದರು. ವಿನೋದ್ ಕಾಂಬ್ಳಿ 1000 ರನ್ ಪೂರೈಸಲು 12 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಅದೇ ಸಮಯದಲ್ಲಿ ಮಯಾಂಕ್ ಅಗರ್ವಾಲ್‌ಗೆ 12 ಪಂದ್ಯಗಳ ಮೂಲಕ 1000 ರನ್ ಗಳಿಸಿದರೆ ಸುನಿಲ್ ಗವಾಸ್ಕರ್‌ಗೆ 1000 ರನ್ ಪೂರ್ಣಗೊಳಿಸಲು 11 ಪಂದ್ಯವನ್ನಾಡಿದ್ದರು. ಈ ಮೂಲಕ ಯಶಸ್ವಿ ಜೈಸ್ವಾಲ್ ಭಾರತದ ಪರ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಓಟಿಟಿ ಗಳಿಗೆ ಕೇಂದ್ರ ಮಹತ್ವದ ಆದೇಶ!
ಒಂದೇ ತಂಡದ ವಿರುದ್ಧ ಗರಿಷ್ಠ ಸಿಕ್ಸ್

ಯಶಸ್ವಿ ಜೈಸ್ವಾಲ್‌, ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಇದುವರೆಗೆ 26 ಸಿಕ್ಸ್ ಸಿಡಿಸಿದ್ದಾರೆ. ಆ ಮೂಲಕ ಒಂದೇ ತಂಡದ ವಿರುದ್ಧ ಹೆಚ್ಚು ಸಿಕ್ಸ್ ಬಾರಿಸಿದ ಭಾರತದ ಬ್ಯಾಟ‌ರ್ ಎಂಬ ಸಾಧನೆ ಮಾಡಿದ್ದಾರೆ. ಈ ದಾಖಲೆಯನ್ನು ಬ್ಯಾಟಿಂಗ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಹೊಂದಿದ್ದರು. ಸಚಿನ್‌ ಆಸ್ಟ್ರೇಲಿಯಾ ವಿರುದ್ಧ ಆಡಿದ 74 ಇನಿಂಗ್ಸ್‌ಗಳಲ್ಲಿ 25 ಸಿಕ್ಸ್ ಹೊಡೆದಿದ್ದರು. ಈ ದಾಖಲೆ ಮುರಿಯಲು ಯಶಸ್ವಿಗೆ ಕೇವಲ 9 ಇನಿಂಗ್ಸ್‌ ಸಾಕಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ 20 ಇನಿಂಗ್ಸ್‌ಗಳಲ್ಲಿ 22 ಸಿಕ್ಸ್ ಬಾರಿಸಿರುವ ರೋಹಿತ್ ಶರ್ಮಾ, ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಹಾಗೂ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಆಂಗ್ಲರ ವಿರುದ್ಧ ತಲಾ 21 ಸಿಕ್ಸ್ ಗಳಿಸುವ ಮೂಲಕ ನಂತರದ ಸ್ಥಾನ ಹಂಚಿಕೊಂಡಿದ್ದಾರೆ. ಸದ್ಯ ನಡೆಯುತ್ತಿರುವ ಪಂದ್ಯದಲ್ಲಿ ಜೈಸ್ವಾಲ್ 57 ರನ್ ಗಳಿಸಿ ಔಟಾಗಿದ್ದಾರೆ. ಆದರೆ, ಇನ್ನೂ ಒಂದು ಇನಿಂಗ್ಸ್ ಆಟ ಬಾಕಿ ಇದೆ. ಹೀಗಾಗಿ, ಗವಾಸ್ಕ‌ರ್ ದಾಖಲೆಯನ್ನೂ ಮುರಿಯುವ ಅವಕಾಶ ಜೈಸ್ವಾಲ್‌ಗೆ ಇದೆ. ಈ ವರ್ಷದ ಆರಂಭದಿಂದಲೇ ಭರ್ಜರಿ ಫಾರ್ಮ್ ನಲ್ಲಿರುವ ಯಶಸ್ವಿ ಜೈಸ್ವಾಲ್‌ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ ಹೆಚ್ಚು ಸಿಕ್ಸ‌ರ್ ಸಿಡಿಸಿರುವ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ರೋಹಿತ್‌ ಶರ್ಮಾ (51), 2ನೇ ಸ್ಥಾನದಲ್ಲಿ ಪಂತ್ (38) ಇದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ