ಹದಿನೈದನೇ ಶತಮಾನದ ಮೈಲಾರ ವಿಗ್ರಹ ಉಡುಪಿಯಲ್ಲಿ ಪತ್ತೆ.!
ಹದಿನೈದನೇ ಶತಮಾನದ ಮೈಲಾರ ವಿಗ್ರಹ ಉಡುಪಿಯಲ್ಲಿ ಪತ್ತೆ.!
ಪುರಾತನ ಮೈಲಾರ ಪಂಥ ವ್ಯಾಪಕವಾಗಿ ಅಲ್ಲದಿದ್ದರೂ ವಿರಳವಾಗಿ ಕರಾವಳಿ ಭಾಗದಲ್ಲಿ ಪ್ರಚಲಿತದಲ್ಲಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಕುಂದಾಪುರ ತಾಲೂಕು ಬಸೂರಿನಲ್ಲಿ 15ನೇ ಶತಮಾನಕ್ಕೆ ಸೇರಿದ ಮೈಲಾರ (ಖಂಡೋಬ) ಶಿಲ್ಪ ಹಾಗೂ 17ನೇ ಶತಮಾನಕ್ಕೆ ಸೇರಿದ ಪುಟ್ಟ ಶಿಲಾಫಲಕ ಇತ್ತೀಚೆಗೆ ಪತ್ತೆಯಾಗಿದೆ. ಮೈಲಾರ ದೇವರ ಆರಾಧನೆ ಕರಾವಳಿ ಭಾಗದಲ್ಲಿ ವಿರಳವಾಗಿ ಕಂಡು ಬರುತ್ತದೆ. ಮದ್ಯಕಾಲೀನ ಯುಗದಲ್ಲಿ ಬಸೂರು ಕರಾವಳಿಯ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿಗೆ ದೂರದೂರುಗಳಿಂದ ವ್ಯಾಪಾರಿಗಳು ಬರುತಿದ್ದರು. ಇವರ ಮೂಲಕ ಕುರುಬರ ಮೈಲಾರ ಪಂಥ ಕರಾವಳಿಗೆ ಪ್ರವೇಶಿಸಿರಬಹುದು ಎಂದು ಹೇಳಲಾಗಿದೆ. ಈ ವಿಗ್ರಹವು ಕಳೆದ ವರ್ಷ ಅಂದ್ರೆ 2023 ಆಗಸ್ಟ್‌ನಲ್ಲಿ ಪತ್ತೆಯಾಗಿತ್ತು. ಮೈಲಾರ ಪಂಥ ದಕ್ಷಿಣದ ಜನಪ್ರಿಯ ಪಂಥಗಳಲ್ಲಿ ಒಂದಾಗಿತ್ತು. ಅಲ್ಲದೇ ಬನ್ನೂರು ಸಹ ಹಲವು ಪಂಥಗಳ ಕೇಂದ್ರ ಸ್ಥಾನವೂ ಆಗಿತ್ತು. ಪ್ರಸ್ತುತ ಉತ್ತರ ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರ ಭಾಗದಲ್ಲಿ (ಖಂಡೋಬ) ವ್ಯಾಪಕವಾಗಿರುವ ಕುರುಬರ ಮೈಲಾರ ಪಂಥ ನಾಲ್ಕೈದು ಶತಮಾನಗಳ ಹಿಂದೆ ಕರಾವಳಿಯಲ್ಲೂ ಪ್ರಚಲಿತದಲ್ಲಿತ್ತು ಎಂಬುದಕ್ಕೆ ಇದು ಸಾಕ್ಷಿ ಎನ್ನಬಹುದು.
ಈ ಸುದ್ದಿಯನ್ನು ಓದಿದ್ದೀರಾ.? ಪಂಜಾಬ್ ಸಿಎಂ ಗೆ ದೇಶದಾದ್ಯಂತ ಜೆಡ್ ಪ್ಲಸ್ ಸೆಕ್ಯೂರಿಟಿ!