• 8 ಸೆಪ್ಟೆಂಬರ್ 2024

ವೈರಲ್ ಆದ ಆ್ಯಪಲ್ ಸಾಂಗ್, ಹರಿದು ಬಂತು ಶಿಕ್ಷಕನಿಗೆ ಹಣದ ಹೊಳೆ.

 ವೈರಲ್ ಆದ ಆ್ಯಪಲ್ ಸಾಂಗ್, ಹರಿದು ಬಂತು ಶಿಕ್ಷಕನಿಗೆ ಹಣದ ಹೊಳೆ.
Digiqole Ad

ವೈರಲ್ ಆದ ಆ್ಯಪಲ್ ಸಾಂಗ್, ಹರಿದು ಬಂತು ಶಿಕ್ಷಕನಿಗೆ ಹಣದ ಹೊಳೆ.

ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವುದರಿಂದ ಆಗುವ ನಷ್ಟವೇ ಹೆಚ್ಚು ಎಂಬುದು ಹಲವರ ಅಭಿಪ್ರಾಯ. ಆದರೆ ಅದನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ, ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂಬುದಕ್ಕೆ ಅನಂತಪುರಂ ಜಿಲ್ಲೆಯ ಕಲ್ಯಾಣದುರ್ಗ ಮಂಡಲದ ಎಂಪಿಪಿ ಶಾಲೆಯ ಶಿಕ್ಷಕ ಶ್ರೀನಿವಾಸ್‌ ಅವರೇ ಸಾಕ್ಷಿ. ಕೆಲವರು ಜಾಲತಾಣವನ್ನು ಹೇಗೆಲ್ಲಾ ಬಳಸುತ್ತಿದ್ದಾರೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ

ಈ ಸುದ್ದಿಯನ್ನು ಓದಿದ್ದೀರಾ.? ಮನೋವೈಜ್ಞಾನಿಕ ಚಿಕಿತ್ಸೆಯಾಗಿ ತುಳುನಾಡಿನ ಮಾಂತ್ರಿಕ ಕುಣಿತಗಳು

. ನಾವು ಏನು ತಿನ್ನುತ್ತಿದ್ದೇವೆ, ಏನು ಕುಡಿಯುತ್ತಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ, ಏನು ಮಾಡುತ್ತಿದ್ದೇವೆ…ಹೀಗೆ ಎಲ್ಲವನ್ನೂ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇದರಿಂದ ಎಷ್ಟೋ ಮಂದಿ ಜೀವನ ಸಹ ಕಟ್ಟಿಕೊಂಡಿದ್ದಾರೆ. ಅದೇ ರೀತಿ ಶಿಕ್ಷಕರೊಬ್ಬರು ಬಹಳ ಹಿಂದೆ ಮಾಡಿದ ವಿನೋದ ವಿಡಿಯೋವೊಂದು ಇದೀಗ ಶಿಕ್ಷಕನನ್ನು ಕೋಟಿಗಟ್ಟಲೆ ಹಣ ಗಳಿಸುವಂತೆ ಮಾಡಿದೆ. ಸಾಮಾಜಿಕ ಜಾಲತಾಣ ಯುಗದಲ್ಲಿ ತಮ್ಮ ಪ್ರತಿಭೆಯನ್ನು ಜನರಿಗೆ ಹಂಚಲು ವಿಡಿಯೋ ಮತ್ತು ಫೋಟೋಗಳನ್ನು ಹೊರ ಜಗತ್ತಿಗೆ ತೋರಿಸುತ್ತಲೇ ಇರುತ್ತಾರೆ. ಆದರೆ, ಯಾವ ವಿಡಿಯೋ ವೈರಲ್ ಆಗುತ್ತದೆ ಎಂಬುದನ್ನು ಯಾರೂ ಕೂಡ ಅಂದಾಜಿಸಲಾಗದು. ಉದಾಹರಣೆಗೆ ನಟ ಹಾಗೂ ನಿರ್ದೇಶಕ ಉಪೇಂದ್ರ ಅಭಿನಯದ “ಉಪೇಂದ್ರ” ಚಿತ್ರದ ಕರಿಮಣಿ ಮಾಲೀಕ ನೀ ನಲ್ಲ ಹಾಡು ಇತ್ತೀಚೆಗೆ ಹಿಟ್ ಆಗಿದ್ದನ್ನು ನಾವೆಲ್ಲ ನೋಡಿದ್ದೇವೆ. ಅದೇ ರೀತಿ ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ಹಾಡುಗಳು ಈಗ ಟ್ರೆಂಡ್ ಆಗುತ್ತಿವೆ. ಅದೇ ರೀತಿ ಐದಾರು ವರ್ಷಗಳ ಹಿಂದೆ ಶಾಲಾ ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ಹಾಡೊಂದು ಈಗ ಸದ್ದು ಮಾಡುತ್ತಿದೆ. ಆಟಗಳ ಮೂಲಕ ಮಕ್ಕಳಿಗೆ ಹಾಡನ್ನು ಕಲಿಸಿದರೆ ಬೇಗ ಕಲಿಯುತ್ತಾರೆ ಎಂಬುದು ಬಹುತೇಕ ಶಿಕ್ಷಕರ ಅಭಿಪ್ರಾಯ. ಇದನ್ನು ಮನಗಂಡ ಶ್ರೀನಿವಾಸ್ ರವರು ಆರು ವರ್ಷಗಳ ಹಿಂದೆ “ಆ್ಯಪಲ್.. ಆ್ಯಪಲ್.. ರೆಡ್ ರೆಡ್ ಆ್ಯಪಲ್” ಎಂಬ ಹಾಡೊಂದನ್ನು ಶ್ರೀನಿವಾಸಲು ಮಾಡಿದ್ದರು. ಈ ಹಾಡಿನಲ್ಲಿ ಸೇಬು ಮತ್ತು ಬಾಳೆಹಣ್ಣುಗಳಂತಹ ಇತರ ಕೆಲವು ಹಣ್ಣುಗಳನ್ನು ತೋರಿಸಿ, ಬಣ್ಣ ಮತ್ತು ರುಚಿಯನ್ನು ವಿವರಿಸಲಾಗಿದೆ.

ಈ ಸುದ್ದಿಯನ್ನು ಓದಿದ್ದೀರಾ.?  ಅಡೂರು ಶ್ರೀ ಮಹತೋಬಾರ ಮಹಾಲಿಂಗೇಶ್ವರ ಕ್ಷೇತ್ರದ ಇತಿಹಾಸ ತಿಳಿಯೋಣ…!

ಇದನ್ನು ವಿದ್ಯಾರ್ಥಿಗಳು ಹಾಡಿದ್ದು, ವಿಡಿಯೋ ರೆಕಾರ್ಡ್ ಮಾಡಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು. 5 ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಹಾಡು ಇಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬರೋಬ್ಬರಿ 189 ಕೋಟಿ ವೀಕ್ಷಣೆಯಾಗಿದೆ. ಇಷ್ಟೊಂದು ವೀಕ್ಷಣೆಯಿಂದಾಗಿ ಶಿಕ್ಷಕ ಶ್ರೀನಿವಾಸ್ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ ಎಂದು ವರದಿಯಾಗಿದೆ. ಮಕ್ಕಳಿಗೆ ಹಾಡಿನ ರೂಪದಲ್ಲಿ ಕಲಿಸುತ್ತಿರುವ ಶ್ರೀನಿವಾಸ್‌ ಅವರನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಅಲ್ಲದೆ ಶಿಕ್ಷಕ ಯೂಟ್ಯೂಬ್‌ನಲ್ಲಿ 50 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಹಾಗೆಯೇ ‘ಬಟ‌ರ್ ಪ್ಲೈ ಬಟರ್ ಫ್ಲೈ’ ಹಾಡು ಮಾಡಿದಾಗ 1.1 ಕೋಟಿ ವೀಕ್ಷಣೆಯನ್ನು ಪಡೆದಿತ್ತು.

Digiqole Ad

ಈ ಸುದ್ದಿಗಳನ್ನೂ ಓದಿ